ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇವು ವಿತರಣೆಗೆ ಶಾಸಕ ಚಾಲನೆ

ನೀರು ಲಭ್ಯವಿರುವ ರೈತರಿಗೆ 3 ಸಾವಿರ ಮೇವು ಬೀಜದ ಪ್ಯಾಕೆಟ್ ವಿತರಣೆಗೆ ಕ್ರಮ
Last Updated 30 ಜನವರಿ 2017, 7:32 IST
ಅಕ್ಷರ ಗಾತ್ರ
ಹುಣಸೂರು: ತಾಲ್ಲೂಕಿನ ಬಿಳಿಕೆರೆ ಹೋಬಳಿಯ ಚಲ್ಲಹಳ್ಳಿ, ದಳ್ಳಾಳು ಗ್ರಾಮದಲ್ಲಿ ಜಾನುವಾರಿಗೆ ಮೇವು ನಿಧಿ ಮೂಲಕ ಹುಲ್ಲು ವಿತರಿಸುವ ಕಾರ್ಯಕ್ಕೆ ಶಾಸಕ ಎಚ್.ಪಿ.ಮಂಜುನಾಥ್ ಈಚೆಗೆ ಚಾಲನೆ ನೀಡಿದರು.
 
ಚಲ್ಲಹಳ್ಳಿಯಲ್ಲಿ ಮೇವು ವಿತರಿಸಿ ಮಾತನಾಡಿದ ಅವರು, ಸರ್ಕಾರ ಜಾನುವಾರುಗಳಿಗೆ ರಿಯಾಯಿತಿ ದರದಲ್ಲಿ ಮೇವು ಪೂರೈಸಲು ಕ್ರಮವ ಹಿಸಿದೆ. ಮುಂದಿನ ದಿನಗಳಲ್ಲಿ ಇತರೆ ಹೋಬಳಿಗೂ ಈ ಸೇವೆ ವಿಸ್ತರಿಸಲಾ ಗುವುದು ಎಂದು ಹೇಳಿದರು.
 
ಹೆಚ್ಚು ಸಮಸ್ಯೆ ಇರುವ ಬಿಳಿಕೆರೆ ಹೋಬಳಿಯಲ್ಲಿ ಮೇವು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಬೀದರ್, ಮಂಡ್ಯ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಹುಲ್ಲು ತರಿಸಲಾ ಗುತ್ತಿದೆ. ಜತೆಗೆ, ಪಂಪ್‌ಸೆಟ್ ಹಾಗೂ ನೀರು ಲಭ್ಯವಿರುವ ರೈತರಿಗೆ ಮೇವು ಬೆಳೆಯಲು 3 ಸಾವಿರ ಮೇವು ಬೀಜದ ಪ್ಯಾಕೆಟ್ ವಿತರಿಸಲಾಗುವುದು ಎಂದರು.
 
ತಹಶೀಲ್ದಾರ್ ಮೋಹನ್ ಮಾತ ನಾಡಿ, ತಾಲ್ಲೂಕಿನಲ್ಲಿ 57 ಟನ್ ಹುಲ್ಲು ದಾಸ್ತಾನು ಮಾಡಲಾಗಿದೆ. ಬಿಳಿಕೆರೆ ಭಾಗದಲ್ಲಿ ವಿತರಿಸಲು ನೇರವಾಗಿ ಲಾರಿ ಮೂಲಕ ತಂದು ಆಯಾ ಗ್ರಾಮಗಳಲ್ಲೇ ಒಂದು ರಾಸಿಗೆ ವಾರಕ್ಕೆ 30 ಕೆ.ಜಿ.ಯಂತೆ ಕಾರ್ಡ್ ಮೂಲಕ ವಿತರಿಸಲಾಗುವುದು. ಸರ್ಕಾರ ಕೆ.ಜಿಗೆ ₹ 6ರಂತೆ ಖರೀದಿಸಿದ್ದು, ರೈತರಿಗೆ ₹ 3ಕ್ಕೆ ನೀಡುತ್ತಿದೆ ಎಂದರು.
 
ಜಿ.ಪಂ ಸದಸ್ಯ ಸುರೇಂದ್ರ ಮಾತ ನಾಡಿ, ಚಲ್ಲಹಳ್ಳಿ ಹಾಗೂ ಸಿಂಗರಮಾರ ನಹಳ್ಳಿ ಭಾಗದಲ್ಲಿ ಹೆಚ್ಚಿನ ಸಮಸ್ಯೆ ಇದ್ದು, ಎರಡು ಕಡೆಯೂ ಮೇವು ನಿಧಿ ತೆರೆಯ ಬೇಕು ಎಂದು ಮನವಿ ಮಾಡಿದರು.
 
ಜಿ.ಪಂ ಸದಸ್ಯೆ ಗೌರಮ್ಮ ಸೋಮ ಶೇಖರ್ ಮಾತನಾಡಿ, ಬಿಳಿಕೆರೆ ಭಾಗದ ಎಲ್ಲ ಹಳ್ಳಿಯಲ್ಲೂ ಮೇವಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಕೋರಿದರು.
 
ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಷಡಕ್ಷರಸ್ವಾಮಿ ಮಾತ ನಾಡಿ, ಬಿಳಿಕೆರೆ ಹೋಬಳಿಯಲ್ಲಿ 24,700 ರಾಸು ಗುರುತಿಸಲಾಗಿದೆ. ಒಮ್ಮೆ ವಿತರಿಸಲು 100 ಟನ್ ಮೇವು ಅಗತ್ಯವಿದೆ. ಫೆಬ್ರುವರಿಯಲ್ಲಿ ಗಾವಡಗೆರೆ ಹೋಬಳಿಯಲ್ಲಿ ವಿತರಿಸಲಾಗುವುದು ಎಂದು ತಿಳಿಸಿದರು.
 
ತಾ.ಪಂ ಸದಸ್ಯರಾದ ರತ್ನಕುಮಾರ್, ಪುಟ್ಟಮ್ಮ, ರಾಜೇಶ್, ಗ್ರಾ.ಪಂ ಅಧ್ಯಕ್ಷರಾದ ನಾಗೇಗೌಡ, ಶಾಂತಮ್ಮ, ಕೆಂಡಗಣ್ಣಮ್ಮ, ಉಪ ತಹಶೀಲ್ದಾರ್ ಶ್ರೀನಿವಾಸ್, ಕಂದಾಯ ನಿರೀಕ್ಷಕ ಪ್ರಸನ್ನ, ಗ್ರಾಮ ಲೆಕ್ಕಾಧಿಕಾರಿಗಳಾದ ಸೋಮಶೇಖರ್, ದೇವರಾಜ್, ಪಶುವೈದ್ಯರಾದ ಡಾ.ಪ್ರಕಾಶ್, ಮೃತ್ಯುಂಜಯ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT