ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 3 ಲಕ್ಷ ಕಳೆದುಕೊಂಡ ಮಹಿಳೆ

ಫೇಸ್‌ಬುಕ್‌ ಸ್ನೇಹಿತ ಶನಾನ್‌ ಬ್ರೌನ್‌ ಎಂಬಾತನಿಂದ ವಂಚನೆಗೊಳಗಾದ ಲಕ್ಷ್ಮಿಪ್ರಭಾ
Last Updated 30 ಜನವರಿ 2017, 7:51 IST
ಅಕ್ಷರ ಗಾತ್ರ
ಮೈಸೂರು: ಫೇಸ್‌ಬುಕ್‌ನಲ್ಲಿ ಪರಿಚಿತ ನಾದ ಸ್ನೇಹಿತ ಕಳುಹಿಸಿದ ಉಡುಗೊರೆ ಪಡೆಯಲು ಮಹಿಳೆಯೊಬ್ಬರು ₹ 3.3 ಲಕ್ಷ ಕಳೆದುಕೊಂಡಿರುವ ಪ್ರಕರಣ ಲಕ್ಷ್ಮಿ ಪುರಂ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
 
ಚಾಮರಾಜಮೊಹಲ್ಲಾದ ಎಂ.ಎನ್‌. ಜೋಯಿಸ್‌ ರಸ್ತೆಯ ನಿವಾಸಿ ಎಚ್‌.ಲಕ್ಷ್ಮಿಪ್ರಭಾ ಹಣ ಕಳೆದುಕೊಂಡ ಮಹಿಳೆ. ಶನಾನ್‌ ಬ್ರೌನ್‌ ಎಂಬಾತನ ವಿರುದ್ಧ ವಂಚನೆ ದೂರು ದಾಖಲಾಗಿದೆ.
 
ಫೇಸ್‌ಬುಕ್‌ನಲ್ಲಿ ಲಕ್ಷ್ಮಿಪ್ರಭಾ ಅವರಿಗೆ ಶನಾನ್‌ ಬ್ರೌನ್‌ ಪರಿಚಿತನಾಗಿದ್ದಾನೆ. ಮೊಬೈಲ್‌ ಸಂಖ್ಯೆ ಪಡೆದುಕೊಂಡು ವಾಟ್ಸ್‌ಆ್ಯಪ್‌ ಮೂಲಕ ಇಬ್ಬರೂ ಹಲವು ದಿನ ಸಂಭಾಷಣೆ ನಡೆಸಿದ್ದಾರೆ. ಹೊಸ ವರ್ಷಕ್ಕೆ ಉಡುಗೊರೆ ನೀಡುತ್ತಿ­ರುವು ದಾಗಿ ಡಿ. 29ರಂದು ಸಂದೇಶ ಕಳುಹಿ ಸಿದ ಶನಾನ್‌, ಅದನ್ನು ನೋಡಲು ಸಂಬಂಧಿಸಿದ ಅಂತರ್ಜಾಲ ತಾಣದ ವಿಳಾಸ ಕೂಡ ನೀಡಿದ್ದಾನೆ.
 
ಲಕೋಟೆಯ ಸಂಖ್ಯೆಯನ್ನು ಅಂತರ್ಜಾಲ ತಾಣದಲ್ಲಿ ಹಾಕಿ ಲಕ್ಷ್ಮಿಪ್ರಭಾ ಪರಿಶೀಲಿಸಿದ್ದಾರೆ. ಅವರ ವಿಳಾಸಕ್ಕೆ ಐಫೋನ್‌, ಬ್ಯಾಗ್‌ ಸೇರಿ ದುಬಾರಿ ಬೆಲೆಯ ವಸ್ತುಗಳು ಇರುವುದು ಗೊತ್ತಾ ಗಿದೆ. ಡಿ. 31ರಂದು ವ್ಯಕ್ತಿಯೊಬ್ಬ ಮಹಿಳೆಗೆ ದೂರವಾಣಿ ಕರೆ ಮಾಡಿ ದೆಹಲಿಯ ಸುಂಕ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ.
 
ಉಡು­ಗೊರೆಯಲ್ಲಿ 50 ಸಾವಿರ ಪೌಂಡ್‌ಗಳಿದ್ದು, ಇದು ಕಾನೂನು ಬಾಹಿರ. ಕೂಡಲೇ ₹ 1.5 ಲಕ್ಷ ದಂಡ ಪಾವತಿಸುವಂತೆ ಸೂಚಿಸಿದ್ದಾನೆ. ಇದರಿಂದ ಗಲಿಬಿಲಿ ಗೊಂಡ ಮಹಿಳೆ, ಅವರು ಸೂಚಿಸಿದ ಬ್ಯಾಂಕ್‌ ಖಾತೆಗೆ ಹಣ ಪಾವತಿಸಿದ್ದಾರೆ ಎಂದು ವಿವರಿಸಿದ್ದಾರೆ.
 
ಜ. 3ರಂದು ಮತ್ತೆ ಸಂಪರ್ಕಿಸಿದ ವ್ಯಕ್ತಿ ಪುನಃ ₹ 1.8 ಲಕ್ಷ ದಂಡ ಪಾವತಿ ಸುವಂತೆ ತಾಕೀತು ಮಾಡಿದ್ದಾನೆ. ಇದಕ್ಕೆ ಮಹಿಳೆ ಒಪ್ಪದೆ ಇದ್ದಾಗ ಕಾನೂನು ಪ್ರಕಾರ ಶಿಕ್ಷೆಗೆ ಗುರಿಪಡಿಸುವುದಾಗಿ ಬೆದರಿಸಿದ್ದಾನೆ. ಭೀತಿಗೊಳಗಾದ ಮಹಿಳೆ ಜ. 4ರಂದು ಅಷ್ಟೂ ಹಣವನ್ನು ಪಾವತಿಸಿದ್ದಾರೆ. ಅನುಮಾನಗೊಂಡು ಭಾರತೀಯ ಸುಂಕ ಇಲಾಖೆಯ ಜಾಲತಾಣ ಪರಿಶೀಲಿಸಿದ್ದಾರೆ. ಆಗ ತಮ್ಮ ಹೆಸರಿಗೆ ಯಾವುದೇ ಉಡುಗೊರೆ ಬಂದಿಲ್ಲ ಎಂಬುದು ಗೊತ್ತಾದಾಗ ಮೋಸ ಹೋಗಿದ್ದು ಖಚಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಗಾಯಾಳು ಚೇತರಿಕೆ
ಮೈಸೂರು: ತಾಲ್ಲೂಕಿನ ಚಿಕ್ಕಳ್ಳಿ ಸಮೀಪದ 212ನೇ ಹೆದ್ದಾರಿಯಲ್ಲಿ ಬಸ್‌, ಜೀಪು ಹಾಗೂ ಬೈಕ್‌ ನಡುವೆ ಶನಿವಾರ ಸಂಭವಿಸಿದ ಸರಣಿ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ದ್ವಿಚಕ್ರ ವಾಹನ ಸವಾರರು ಚೇತರಿಸಿಕೊಂಡಿದ್ದಾರೆ.
 
ತುಮಕೂರಿನ ವೆಂಕಟೇಶ್‌ (25) ಹಾಗೂ ದುರ್ಗಾಪ್ರಸಾದ್‌ (26) ಗಾಯಗೊಂಡವರು. ಸುತ್ತೂರಿನ ಜಾತ್ರಾ ಮಹೋತ್ಸವದಲ್ಲಿ ಇವರು ವ್ಯಾಪಾರಕ್ಕೆ ಬಂದಿದ್ದರು ಎಂದು ಸಿದ್ಧಾರ್ಥ ಸಂಚಾರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
 
ತಿ.ನರಸೀಪುರದಿಂದ ಬರುತ್ತಿದ್ದ ರಸ್ತೆ ಸಾರಿಗೆ ಬಸ್‌ ಹಾಗೂ ಸುತ್ತೂರಿಗೆ ಹೊರಟಿದ್ದ ಪೊಲೀಸ್‌ ಜೀಪು ಮುಖಾ ಮುಖಿ ಡಿಕ್ಕಿಯಾದ ಸಂದರ್ಭದಲ್ಲಿ ಸವಾರನ ನಿಯಂತ್ರಣ ಕಳೆದುಕೊಂಡ ದ್ವಿಚಕ್ರ ವಾಹನ ಹಿಂಬದಿಯಿಂದ ಬಸ್‌ಗೆ ಗುದ್ದಿತ್ತು. ಘಟನೆಯಲ್ಲಿ ಬೈಕ್‌ ಸವಾರರಿ ಬ್ಬರು ಗಾಯಗೊಂಡಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಕೆ.ಆರ್‌.ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿ­ದ್ದಾರೆ ಎಂದು ಸಿದ್ಧಾರ್ಥ ಠಾಣೆಯ ಇನ್‌ ಸ್ಪೆಕ್ಟರ್‌ ಹರೀಶಕುಮಾರ್‌ ತಿಳಿಸಿದ್ದಾರೆ.
 
ಮೃತರ ಅಂತ್ಯಕ್ರಿಯೆ: ಸರಣಿ ಅಪಘಾತ ದಲ್ಲಿ ಮೃತಪಟ್ಟಿರುವ ಪೊಲೀಸ್‌ ಇನ್‌ಸ್ಪೆಕ್ಟರ್‌ ಮಹೇಶ­ಕುಮಾರ್‌ ಹಾಗೂ ಕಾನ್‌ಸ್ಟೆಬಲ್‌ ಲಕ್ಷ್ಮಣ ಅಂತ್ಯಕ್ರಿಯೆ ಭಾನುವಾರ ನೆರವೇರಿತು.
 
ಕನಕಪುರ ತಾಲ್ಲೂಕಿನ ಹಾರೋ ಹಳ್ಳಿಯಲ್ಲಿ ಮಹೇಶಕುಮಾರ್‌ ಹಾಗೂ ನಂಜನಗೂಡು ತಾಲ್ಲೂಕಿನ ಮರಡಿ ಹುಂಡಿಯಲ್ಲಿ ಲಕ್ಷ್ಮಣ ಅವರ ಅಂತ್ಯಕ್ರಿಯೆ ನೆರವೇರಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
 
ಜಾಮೀನು
ಮೈಸೂರು: ಇಲ್ಲಿನ ಕೆ.ಆರ್‌.ವೃತ್ತದ ನಿರ್ಬಂಧಿತ ಸ್ಥಳದಲ್ಲಿ ‘ಮಾನವ ಸರಪಳಿ’ ನಿರ್ಮಿಸಿ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪ ಡಿಸಿದ ಆರೋಪ ಎದುರಿಸುತ್ತಿರುವ ಹೋರಾಟಗಾರ ಪ.ಮಲ್ಲೇಶ್‌ ಸೇರಿ 17 ಮಂದಿಗೆ 4ನೇ ಜಿಲ್ಲಾ ಮುನ್ಸಿಫ್‌ ನ್ಯಾಯಾಲಯ ಜಾಮೀನು ನೀಡಿದೆ.
 
ಭಾಷಾ ಮಧ್ಯಮದ ಕುರಿತು ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನಿಂದ ಅಸಮಾಧಾನಗೊಂಡ ಕನ್ನಡಪರ ಹೋರಾಟಗಾರರು 2014ರಲ್ಲಿ ಪ್ರತಿಭಟನೆ ನಡೆಸಿದ್ದರು. ಕೆ.ಆರ್‌.ವೃತ್ತ ದಲ್ಲಿ ಜಮಾಯಿಸಿ ‘ಮಾನವ ಸರಪಳಿ’ ನಿರ್ಮಿಸಿದ್ದರು. ನಿರ್ಬಂಧಿತ ಪ್ರದೇಶದಲ್ಲಿ ಗುಂಪುಗೂಡುವುದಕ್ಕೆ ಪೊಲೀಸರು ವಿರೋಧ ವ್ಯಕ್ತಪಡಿಸಿದ್ದರು. ಈ ಸಂಬಂಧ ದೇವರಾಜ ಪೊಲೀಸ್‌ ಠಾಣೆ ಯಲ್ಲಿ ದೂರು ದಾಖಲಾಗಿತ್ತು.
 
**
ತಾಯಿಗೆ ಚಾಕುವಿನಿಂದ ಇರಿದ ಮಗ
ಮೈಸೂರು: ಕೌಟುಂಬಿಕ ಕಲಹದಲ್ಲಿ ಪುತ್ರನೊಬ್ಬ ತಾಯಿಗೆ ಸಾರ್ವಜನಿಕ ವಾಗಿ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ವಿ.ವಿ.ಪುರಂ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
 
ಕುಂಬಾರಕೊಪ್ಪಲಿನ ನಿವಾಸಿ ಲಕ್ಷ್ಮಿ (40) ಗಾಯಗೊಂಡು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಇವರ ಪುತ್ರ ಬಾಲು (23) ಚಾಕುವಿನಿಂದ ಇರಿದ ಆರೋಪಿಯಾಗಿದ್ದು, ತಲೆಮರೆಸಿಕೊಂಡಿದ್ದಾನೆ.
 
ಲಕ್ಷ್ಮಿ ಮತ್ತು ವಿಜಯಕುಮಾರ್‌ ದಂಪತಿಗೆ ಬಾಲು ಹಾಗೂ ರೋಹಿತ್‌ ಎಂಬ ಇಬ್ಬರು ಪುತ್ರರು. ದಂಪತಿಯ ನಡುವೆ ಉಂಟಾದ ವೈಮನಸ್ಸಿನಿಂದ ಪೋಷಕರಿಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ತಾಯಿ ಜೊತೆ ರೋಹಿತ್‌ ಹಾಗೂ ತಂದೆ ಜೊತೆ ಬಾಲು ಇದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
 
ಆಕಾಶವಾಣಿ ವೃತ್ತದಲ್ಲಿ ರಸ್ತೆಬದಿಯಲ್ಲಿ ತರಕಾರಿ ಮಾರಾಟ ಮಾಡಿ ಲಕ್ಷ್ಮಿ ಜೀವನ ಕಟ್ಟಿಕೊಂಡಿ ದ್ದಾರೆ. ಶನಿವಾರ ರಾತ್ರಿ 8 ಗಂಟೆಯ ಸುಮಾರಿಗೆ ಇಲ್ಲಿಗೆ ಧಾವಿಸಿದ ಬಾಲು ತಾಯಿಯೊಂದಿಗೆ ಗಲಾಟೆ ಮಾಡಿ ದ್ದಾನೆ. ಸಾರ್ವಜನಿಕವಾಗಿ ತಾಯಿಗೆ ಚಾಕು ವಿನಿಂದ ಇರಿದು ಪರಾರಿಯಾ ಗಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಲಕ್ಷ್ಮಿ ಅವರನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT