ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿದ್ಯಾರ್ಥಿಗಳು ಗೌರವ ತರುವ ನಡವಳಿಕೆ ತೋರಿ’

Last Updated 30 ಜನವರಿ 2017, 7:50 IST
ಅಕ್ಷರ ಗಾತ್ರ

ರಾಮನಗರ: ‘ವಿದ್ಯಾರ್ಥಿಗಳು ಕಾಲೇಜು ಶಿಕ್ಷಣಕ್ಕೆ ಬರುತ್ತಿದ್ದಂತೆ, ವಿಚಾರ ಮಾಡುವ ಮನೋಭಾವಗಳು ಬದಲಾಗುತ್ತವೆ. ನಿಮ್ಮ ನಡವಳಿಕೆ, ಹಾವಭಾವ ಗೌರವ ತರುವಂತೆ ಇರಬೇಕು’ ಎಂದು ಸಾಹಿತಿ ಡಾ. ಬ್ಯಾಡರಹಳ್ಳಿ ಶಿವರಾಜ್‌ ಹೇಳಿದರು.

ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಅಂಕ ಗಳಿಸುವ ದೃಷ್ಟಿಯಿಂದ ವಿದ್ಯಾರ್ಥಿಗಳು ಪಠ್ಯಪುಸ್ತಕ  ಓದುವುದು ಮುಖ್ಯ. ಆದರೆ, ಭವಿಷ್ಯದ ದೃಷ್ಟಿಯಿಂದ ಪಠ್ಯ ವಿಷಯಗಳ ಜತೆಯಲ್ಲಿ ಪ್ರಾಪಂಚಿಕ ಜ್ಞಾನ, ದೇಶದಲ್ಲಿ ಆಗುತ್ತಿರುವ ಬದಲಾಣೆಗಳು, ಆರ್ಥಿಕ ಸ್ಥಿತಿಗತಿಗಳನ್ನು ಅವಲೋಕನ ಮಾಡಬೇಕು’ ಎಂದರು.

‘ಹೊಸ ವಿಚಾರಧಾರೆಗಳನ್ನು ಹೊತ್ತು ತರುವ ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳಸಿಕೊಳ್ಳಬೇಕು. ಹಲವು  ವಿಷಯಗಳು, ಮಾಹಿತಿ, ಘಟನೆಗಳು ನಿಮ್ಮ ಗಮನಕ್ಕೆ ಬರುವುದರಿಂದ ನಿಮ್ಮ ಚಿಂತನೆಗಳು ಉತ್ತಮವಾಗುತ್ತವೆ’ ಎಂದು ಸಲಹೆ ನೀಡಿದರು.

‘ತಂದೆ–ತಾಯಿಯರು ನಿಮ್ಮ ಭವಿಷ್ಯ ಚೆನ್ನಾಗಿರಬೇಕೆಂದು ಆಶಾ ಗೋಪುರ ಕಟ್ಟಿಕೊಳ್ಳುತ್ತಾರೆ. ಅವರ ಕನಸು ನನಸು ಮಾಡುವ ಕಡೆ ಗಮನ ಇರಲಿ. ವಿದ್ಯಾರ್ಥಿ ಜೀವನದಲ್ಲಿ ಸಣ್ಣಪುಟ್ಟ ತಪ್ಪುಗಳು ಆಗುವುದು ಸಹಜ. ಅವುಗಳನ್ನು ಮೆಟ್ಟಿನಿಂತು ನಿಮ್ಮ ಭವಿಷ್ಯ ರೂಪಿಸಿಕೊಳ್ಳುವ ಕಡೆ ಗಮನವಿರಲಿ’ ಎಂದು ತಿಳಿಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪುಟ್ಟಲಿಂಗಯ್ಯ ಮಾತನಾಡಿ, ‘ಉಪನ್ಯಾಸಕರ  ಪರಿಶ್ರಮದ ಜೊತೆ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಹಾಕಿ ವಿದ್ಯಾಭ್ಯಾಸ ಮಾಡಿದರೆ ಉನ್ನತ ಸಾಧನೆ ಮಾಡಲು ಸಾಧ್ಯ. ವಿದ್ಯಾರ್ಥಿಗಳು ತಮ್ಮದೇ ಭದ್ರ ಬುನಾದಿ ಹಾಕಿಕೊಂಡು ಮುನ್ನಡೆದಾಗ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ’ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷ ಪಿ. ರವಿಕುಮಾರ್‌, ಸದಸ್ಯ ಎಚ್.ಎಸ್. ಲೋಹಿತ್‌್ ಬಾಬು, ಕಾಲೇಜಿನ ಪ್ರಾಚಾರ್ಯ ಜಿ.ವಿ. ರಮೇಶ್‌, ಉಪನ್ಯಾಸಕ ಶಿವಕುಮಾರ್‌, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಬೈರೇಗೌಡ, ಗೂಳಿಗೌಡ, ಎಂ. ಜಯಮ್ಮ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT