ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿಕ್ಷಣದಿಂದ ಮಾತ್ರ ಸರ್ವತೋಮುಖ ಅಭಿವೃದ್ಧಿ’

ಗಂಗಾಮತಸ್ಥರ ಸಂಘದಿಂದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ
Last Updated 30 ಜನವರಿ 2017, 8:49 IST
ಅಕ್ಷರ ಗಾತ್ರ

ವಿಜಯಪುರ: ‘ಯಾವುದೇ ಸಮುದಾಯಗಳು ಸರ್ವತೋಮುಖವಾಗಿ ಅಭಿವೃದ್ಧಿ ಕಾಣಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ರಾಜಗೋಪಾಲ್ ಹೇಳಿದರು.

ಪಟ್ಟಣದ ಗಂಗಾತಾಯಿ ದೇವಾಲಯದ ಆವರಣದಲ್ಲಿ ಭಾನುವಾರ ಗಂಗಾಮತಸ್ಥರ ಸಂಘದ ವತಿಯಿಂದ ಆಯೋಜನೆ ಮಾಡಲಾಗಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ರಾಷ್ಟ್ರದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಪ್ರತಿಯೊಂದು ಸಮುದಾಯವು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆದುಕೊಂಡು ಸಂಘಟಿತರಾಗಬೇಕು. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಸಿಗುವಂತಹ ಎಲ್ಲಾ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಉಪನ್ಯಾಸಕ ಎಚ್.ಚಂದ್ರಪ್ಪ ಮಾತನಾಡಿ, ನಂಬಿದ ವಿಷಯಗಳನ್ನು ಯಾವುದೇ ದಯಾ ದಾಕ್ಷಿಣ್ಯಕ್ಕೊಳಗಾಗದೇ ನೇರವಾಗಿ ವಚನಗಳ ಮೂಲಕ  ವ್ಯಕ್ತಪಡಿಸಿದ ನಿಷ್ಠುರ ಸ್ವಭಾವದ ವ್ಯಕ್ತಿಯಾಗಿರುವ ವಚನಕಾರ ಚೌಡಯ್ಯನವರ ಜೀವನವು ಕೇವಲ ಒಂದು ಸಮುದಾಯ ಮಾತ್ರವಲ್ಲದೆ ಎಲ್ಲಾ ಸಮುದಾಯಗಳ ಜನರಿಗೂ ತಲುಪಬೇಕು. ಅವರ ಆಶಯಗಳನ್ನು ಈಡೇರಿಸುವಂತಹ ಹೊಣೆಗಾರಿಕೆ ಮಾನವಕುಲದ್ದಾಗಬೇಕು ಎಂದರು.

ಭಾರತ ಸರ್ಕಾರದ ತೆರಿಗೆ ಇಲಾಖೆಯ ಬೆಂಗಳೂರು ವಿಧಾನಸೌಧ ವಿಭಾಗದ ಸಿಇಓ ಚಂದ್ರಶೇಖರ್, ದೊಡ್ಡಬಳ್ಳಾಪುರ ಹೌಸಿಂಗ್‌ ಬೋರ್ಡ್ ನೌಕರ ರಾಮಕೃಷ್ಣ ಮಾತನಾಡಿದರು.

ಅಂಬಿಗರ ಚೌಡಯ್ಯನವರ ಭಾವಚಿತ್ರದ ಪಲ್ಲಕ್ಕಿ ಉತ್ಸವವು ಪಟ್ಟಣದ ಸಂತೆ ಮೈದಾನದದಿಂದ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗಂಗಾತಾಯಿ ದೇವಾಲಯದ ಆವರಣಕ್ಕೆ ತಲುಪಿತು.

ಬೆಂಗಳೂರು ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷ ಜೆ.ಟಿ.ವೆಂಕಟೇಶ್, ಟೌನ್ ಗಂಗಾಮತಸ್ಥರ ಸಂಘದ ಅಧ್ಯಕ್ಷ ಎಂ.ಮುನಿಕೃಷ್ಣಪ್ಪ, ಗೌರವಾಧ್ಯಕ್ಷ ನರಸಿಂಹಮೂರ್ತಿ, ವಿ.ಎಂ.ಮುನಿಯಪ್ಪ, ಅತ್ತಿಬೆಲೆ ಸಹಾಯಕ ಸಬ್‌ಇನ್‌ಸ್ಪೆಕ್ಟರ್ ರಾಮಚಂದ್ರಪ್ಪ, ದೇವನಹಳ್ಳಿ ಪುರಸಭಾ ಆರೋಗ್ಯಾಧಿಕಾರಿ ಮೋಹನ್‌ಕುಮಾರ್, ಮಾನಸ ಆಸ್ಪತ್ರೆಯ ವೈದ್ಯ ಡಾ.ರಾಜೇಶ್, ನಾಗಮಂಗಲ ಪಂಚಾಯಿತಿ ಪಿಡಿಒ ಗೋಪಿನಾಥ್, ತಾಲ್ಲೂಕು ಅಂಬಿಗರಚೌಡಯ್ಯ ಯುವಕ ಸಂಘದ ಅಧ್ಯಕ್ಷ ಸತೀಶ್, ವೇಮಗಲ್ ಸಂಜೀವಪ್ಪ, ಶ್ರೀನಿವಾಸ್, ಚಿಕ್ಕಬಳ್ಳಾಪುರ ನಗರಸಭಾ ಸದಸ್ಯ ಜಯರಾಮಣ್ಣ, ರವಿ ಕುಮಾರ್, ಬಾಗೇಪಲ್ಲಿ ಲಕ್ಷ್ಮಿಪತಿ, ಮುನಿವೆಂಕಟಪ್ಪ, ದೇವನಹಳ್ಳಿ ಟೌನ್ ಘಟಕದ ಅಧ್ಯಕ್ಷ ಆಂಜಿನಪ್ಪ, ಹೊಸಕೋಟೆ ಘಟಕದ ಅಧ್ಯಕ್ಷ ನಾಗರಾಜು, ಗೆಜ್ಜಗದಹಳ್ಳಿ ಲೋಕೇಶ್, ಶಿಡ್ಲಘಟ್ಟ ಘಟಕದ ಅಧ್ಯಕ್ಷ ದಿ.ಎನ್.ಶಿವಣ್ಣ, ಪುರಸಭಾ ಮಾಜಿ ಸದಸ್ಯ ಕಿರಣ್‌ಕುಮಾರ್, ಎಂ. ನಾರಾಯಣ ಸ್ವಾಮಿ, ಟೌನ್ ಘಟಕದ ಎನ್. ಮುನಿರಾಜು, ಆಂಜಿನಪ್ಪ ಮುಂತಾ ದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT