ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಮೃತ ಯೋಧರಿಗೆ ಸಂತಾಪ

ಜಮ್ಮು ಕಾಶ್ಮೀರದ ಸೇನಾ ಶಿಬಿರದಲ್ಲಿ ಉಂಟಾದ ಹಿಮಪಾತ
Last Updated 30 ಜನವರಿ 2017, 8:55 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಜಮ್ಮು ಕಾಶ್ಮೀರದ ಸೇನಾ ಶಿಬಿರದಲ್ಲಿ ಉಂಟಾದ ಹಿಮಪಾತದಲ್ಲಿ ಮೃತಪಟ್ಟ ಯೋಧ ಹಾಸನ ಜಿಲ್ಲೆಯ ಸಂದೀಪ್ ಶೆಟ್ಟಿ ಸೇರಿದಂತೆ ಮೃತ ಯೋಧರಿಗೆ ತಾಲ್ಲೂಕು ಜೆಡಿಎಸ್ ವತಿಯಿಂದ ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ಮೇಣದ ಬತ್ತಿ ಬೆಳಗಿ ಸಂತಾಪ ಸೂಚಿಸಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯ ಎಚ್. ಅಪ್ಪಯ್ಯಣ್ಣ ಮಾತನಾಡಿ, ತಾಲೂಕುಜೆಡಿಎಸ್ ಅಧ್ಯಕ್ಷ ಡಾ.ಎಚ್.ಜಿ. ವಿಜಯಕುಮಾರ್, ಪ್ರತಿಕೂಲ ಹವಾಮಾನದಿಂದ ನಮ್ಮ ಯೋಧರು ಬಲಿಯಾಗುತ್ತಿದ್ದಾರೆ ಎನ್ನುವುದು ಗಂಭೀರವಾಗಿ ಯೋಚಿಸಬೇಕಾದ ವಿಚಾರ. ಶತ್ರುಗಳ ದಾಳಿಗೆ ಸಿಲುಕಿ ಮೃತಪಡುವ ಯೋಧರು ಒಂದೆಡೆಯಾದರೆ, ಸಿಯಾಚಿನ್‌ನಂತಹ ಯುದ್ಧ ಭೂಮಿಯಲ್ಲಿ ಹಿಮಪಾತಗಳಲ್ಲಿ ಸಿಲುಕು ಯೋಧರು ಸಾವಿಗೀಡಾಗುತ್ತಿರುವುದು ದುರಂತದ ಸಂಗತಿ ಎಂದರು. ನಗರಸಭಾ ಸದಸ್ಯ ಟಿ.ಎನ್. ಪ್ರಭುದೇವ್, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಓಬದೇನಹಳ್ಳಿ ಮುನಿಯಪ್ಪ, ಮುಖಂಡರಾದ ಪದ್ಮನಾಭ್, ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT