ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ಗೈರು ಹಾಜರಿಗೆ ಸದಸ್ಯರ ಅಸಮಾಧಾನ

Last Updated 31 ಜನವರಿ 2017, 5:20 IST
ಅಕ್ಷರ ಗಾತ್ರ

ಇಂಡಿ: ತಾಲ್ಲೂಕು ಪಂಚಾಯ್ತಿ  ಸಾಮಾನ್ಯಸಭೆಗೆ ಸಂಬಂಧಪಟ್ಟ ಅಧಿ ಕಾರಿಗಳು ಹಾಜರಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಭೆ ನಡೆಸುವುದಾದರೂ ಯಾಕೆ? ಮೊದಲು ಅಧಿಕಾರಿಗಳನ್ನು ಕರೆ ಯಿಸಿ ನಂತರ ಸಭೆ ನಡೆಸಿ, ಇಲ್ಲವಾದರೆ ಸಭೆ ನಡೆಸಲು ಆಸ್ಪದ ನೀಡುವುದಿಲ್ಲ ಎಂದು ಸದಸ್ಯ ಗಣಪತಿ ಬಾಣಿಕೋಲ ಆಕ್ರೋಶ ವ್ಯಕ್ತಪಡಿಸಿದರು.
ಈಚೆಗೆ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯಸಭೆಯಲ್ಲಿ ಮಾತನಾಡಿದರು. ಆಗ ತಾಲ್ಲೂಕು ಪಂಚಾಯ್ತಿ  ಅಧಿ ಕಾರಿಗಳು ಸದಸ್ಯರನ್ನು ಸಮಾಧಾನಗೊಳಿಸಿದರು.

ಇಂಚಗೇರಿ ತಾ.ಪಂ. ಸದಸ್ಯ ರವಿದಾಸ ಜಾಧವ ಮಾತನಾಡಿ, ಸಭೆಯ ಕುರಿತು ಸರಿಯಾಗಿ ಮಾಹಿತಿ ಸಿಗುತ್ತಿಲ್ಲ. ಇಸ್ರೋ ಸಂಸ್ಥೆಯಿಂದ ಎನ್.ಆರ್.ಡಿ.ಪಿ. ಅಡಿ ಯಲ್ಲಿ 112 ಕೊಳವೆಬಾವಿ ತೋಡಿಸ ಲಾಗಿದೆ. ಅದರಲ್ಲಿ ಎಷ್ಟು ಕೊಳವೆ ಬಾವಿ ಗಳಿಗೆ ನೀರು ಬಂದಿದೆ ಎನ್ನುವುದನ್ನು ಸಭೆಗೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದ ಅವರು ಇಂಚಗೇರಿ, ಹಡಲ ಸಂಗ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಿದ್ದು, ಸಮಸ್ಯೆ ನಿವಾರಣೆಗೆ ಕ್ರಮ ಕೈಕೊಳ್ಳಬೇಕು ಎಂದು ಒತ್ತಾಯಿಸಿದರು.

ಕಳೆದ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಸಿದ ಟ್ಯಾಂಕರ್ ಮಾಲೀಕ ರಿಗೆ ಇವತ್ತಿಗೂ ಬಿಲ್‌ ಪಾವತಿ ಮಾಡಿಲ್ಲ. ತಕ್ಷಣ ಬಿಲ್‌ ಪಾವತಿ ಮಾಡುವಂತೆ ತಹಶೀಲ್ದಾರ್ ಬಿ.ಜೆ. ಅಗರಖೇಡ ಅವರಿಗೆ ಮನವಿ ಮಾಡಿಕೊಂಡರು.

ಸದಸ್ಯರ ಮಾತಿಗೆ ಉತ್ತರಿಸಿದ ಅವರು, ಜಿಲ್ಲಾಧಿಕಾರಿಗಳು ₹ 6.34 ಕೋಟಿ ಕುಡಿಯುವ ನೀರಿಗೆ ಮಂಜೂರಿ ಮಾಡಿದ್ದಾರೆ. ಹಣ ಬಂದಿದೆ. ತಕ್ಷಣ ಹಣ ಪಾವತಿಸಲಾಗುವುದು ಎಂದರು.

ಸಮರ್ಪಕ ಪಡಿತರ ಚೀಟಿ ವಿತರಿಸ ಬೇಕು ಎಂದು ಸದಸ್ಯ ರಾಜು ಮ್ಯಾಕೇರಿ ಸಭೆಯ ಗಮನ ಸೆಳೆದರು. ತಾಲ್ಲೂಕು ಕೇಂದ್ರದಲ್ಲಿ ತೊಗರಿ ಖರೀದಿ ಕೇಂದ್ರ ಆರಂಭಿಸಿದಂತೆ, ಗ್ರಾಮೀಣ ವಲಯದಲ್ಲಿಯೂ ಆರಂಭಿಸ ಬೇಕು ಎಂದು ಗಂಗಾಧರ ಪಾಟೀಲ ವಿನಂತಿಸಿದರು. ತಾ.ಪಂ. ಅಧ್ಯಕ್ಷ ರುಕ್ಮುದ್ದೀನ್ ತದ್ದೇವಾಡಿ, ಉಪಾಧ್ಯಕ್ಷೆ ಗಂಗವ್ವ ಬಿರಾ ದಾರ, ತಾ.ಪಂ. ಅಧಿಕಾರಿ ರಾಜಕುಮಾರ ತೊರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT