ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೇಳನಾಧ್ಯಕ್ಷರಾಗಿ ಸುಕ್ರಿ ಬೊಮ್ಮು ಗೌಡ!

ಕಸಾಪ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ: ಸ್ಥಳ ಇನ್ನೂ ನಿರ್ಧಾರವಿಲ್ಲ
Last Updated 31 ಜನವರಿ 2017, 6:05 IST
ಅಕ್ಷರ ಗಾತ್ರ

ಕಾರವಾರ: ಜಾನಪದ ಕಲಾವಿದೆ ಸುಕ್ರಿ ಬೊಮ್ಮು ಗೌಡ ಅವರನ್ನು ಈ ಬಾರಿಯ ಕಾರವಾರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಕುರಿತು ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸೋಮ ವಾರ ಕರೆಯಲಾಗಿದ್ದ ಕಸಾಪ ಪೂರ್ವ ಭಾವಿ ಸಭೆಯಲ್ಲಿ ಚರ್ಚೆ ನಡೆಯಿತು.

ಸುಕ್ರಿ ಅವರು ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಜಿಲ್ಲಾ ಕೇಂದ್ರ ವಾದ ಕಾರವಾರದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿದರೆ ಅರ್ಥಪೂರ್ಣ ಹಾಗೂ ಅವರಿಗೆ ಗೌರವ ಸೂಚಿಸಲು ಇದೊಂದು ಉತ್ತಮ ವೇದಿಕೆಯಾಗಲಿದೆ ಎಂದು ದೀಪಕ್‌ಕುಮಾರ್‌ ಶೆಣೈ ಅಭಿಪ್ರಾಯ ಪಟ್ಟರು. ಇದಕ್ಕೆ ಸಭೆಯಲ್ಲಿದ್ದ ಹಲವರು ಸಮ್ಮತಿ ಸೂಚಿಸಿದರು.

‘ಸುಕ್ರಿ ಬೊಮ್ಮು ಗೌಡ ಅವರನ್ನು ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಕರೆಯುವ ಸದಸ್ಯರ ಸಲಹೆಯನ್ನು ಪರಿಗಣಿಸಲಾಗು ವುದು. ಬೇರೆ ತಾಲ್ಲೂಕಿನವರನ್ನು ಸಮ್ಮೇ ಳನದ ಅಧ್ಯಕ್ಷರನ್ನಾಗಿ ಆಹ್ವಾನಿಸಲು ಪರಿಷತ್ ನಿಯಮಾವಳಿಯಲ್ಲಿ ಅವಕಾಶ ಇದೆಯೋ ಅಥವಾ ಇಲ್ಲವೋ ಎಂಬು ದನ್ನು ಪರಿಶೀಲಿಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಆದರೆ ಅಂತಿಮ ನಿರ್ಣಯ ಆಯ್ಕೆ ಸಮಿತಿಯದ್ದಾಗಿದೆ. ಆಯ್ಕೆಯು ಪಾರದರ್ಶಕವಾಗಿ ನಡೆಸ ಬೇಕು ಎಂಬ ಉದ್ದೇಶ ಇದರಲ್ಲಿದೆ’ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಹೇಳಿದರು.

ಕೈಗಾದಲ್ಲಿ ಸಮ್ಮೇಳನ: ಈ ಬಾರಿಯ ಸಮ್ಮೇಳನವನ್ನು ಕರ್ನಾಟಕ– ಗೋವಾ ಗಡಿ ಸಮೀಪದ ಯಾವುದಾದರೂ ಹಳ್ಳಿ ಯಲ್ಲಿ ನಡೆಸಬೇಕು ಎಂಬ ಸಲಹೆಯನ್ನು ಕೆಲವರು ನೀಡಿದರು. ಬೇರೆ ರಾಜ್ಯ, ಜಿಲ್ಲೆಗಳಿಂದ ಬಂದು ಕೈಗಾದಲ್ಲಿ ನೆಲೆಸಿ ದ್ದಾರೆ. ಕೈಗಾದ ಸಹ್ಯಾದ್ರಿ ಕನ್ನಡ ಬಳಗವು ಆಸಕ್ತಿಯಿಂದ ಕನ್ನಡ ಅಭಿವೃದ್ಧಿ ಚಟು ವಟಿಕೆಗಳನ್ನು ಕೈಗೊಳ್ಳುತ್ತಾ ಬಂದಿದೆ. ಅವರ ಉತ್ತೇಜನಕ್ಕಾಗಿ ಸಾಹಿತ್ಯ ಸಮ್ಮೇಳನವನ್ನು ಕೈಗಾದ ಮಲ್ಲಾಪುರ ಟೌನ್‌ಶಿಪ್‌ನಲ್ಲಿ ನಡೆಸುವುದು ಸೂಕ್ತ ಎಂಬ ಮಾತು ಕೇಳಿ ಬಂತು. ಕೈಗಾ, ಕಾರವಾರ ನಗರ ಅಥವಾ ಗೋವಾ ಸಮೀಪದ ಗಡಿಭಾಗ ಈ ಮೂರೂ ಸ್ಥಳಗಳಲ್ಲಿ ಒಂದನ್ನು ಅಂತಿಮಗೊಳಿ ಸು ವುದರ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು.
ಸಮ್ಮೇಳನಕ್ಕೆ ಹಿರಿಯ ಸಾಹಿತಿಗಳನ್ನು ಆಹ್ವಾನಿಸುವುದರ ಕುರಿತು ಸಹ ಚರ್ಚೆ ನಡೆಯಿತು. ಫೆ. 26ಕ್ಕೆ ಸಮ್ಮೇಳನ ನಡೆ ಸುವ ಕುರಿತು ಸಭೆಯಲ್ಲಿದ್ದ ಕನ್ನಡ ಪ್ರೇಮಿ ಗಳ ಸಲಹೆಗಳನ್ನು ಕೋರಲಾಯಿತು.

‘ಈ ಬಾರಿಯ ಸಮ್ಮೇಳನವನ್ನು ಗೋವಾ ಗಡಿ ಸಮೀಪದ ಗ್ರಾಮಗಳಲ್ಲಿ ನಡೆಸುವ ಉದ್ದೇಶವಿತ್ತು. ಆದರೆ ಸದಸ್ಯರು ಒಕ್ಕೊರಲಿನಿಂದ ಕೈಗಾದ ಮಲ್ಲಾಪುರ ಟೌನ್‌ಶಿಪ್‌ನಲ್ಲಿ ನಡೆಸಲು ಸಲಹೆ ನೀಡಿದ್ದಾರೆ. ಈ ಬಗ್ಗೆ ಕೈಗಾದ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗು ವುದು’ ಎಂದು ಕರ್ಕಿಕೋಡಿ ಹೇಳಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ್‌ ಹರಪನಹಳ್ಳಿ, ಮಹಿಳಾ ಸದಸ್ಯೆ ಅನು ಕಳಸ್, ತಾಲ್ಲೂಕು ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ, ಹಿರಿಯ ಸದಸ್ಯರಾದ ಎಸ್.ಆರ್.ನಾಯ್ಕ, ಡಾ.ಎಸ್.ಡಿ.ನಾಯ್ಕ, ಕೆ.ಟಿ.ತಾಂಡೇಲ್, ನಜೀರ್ ಶೇಖ್, ಡಾ.ವೆಂಕಟೇಶ ಗಿರಿ, ಮಂಜುನಾಥ್ ನಾಯ್ಕ, ಖೈರುನ್ನೀಸಾ, ದೀಪಕ್ ಶೆಟ್ಟಿ, ಮಂಜುನಾಥ್ ಮುದ್ಗೇಕರ್, ವಿವೇಕಾನಂದ ನಾಯ್ಕ, ಗಿರೀಶ್ ನಾಯ್ಕ, ಉದಯ ಬರ್ಗಿ ಹಾಜರಿದ್ದರು.

***

ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಸುಕ್ರಿ ಬೊಮ್ಮು ಗೌಡ ಅವರ ಆಯ್ಕೆಗೆ ತನ್ನ ಸಂಪೂರ್ಣ ಬೆಂಬಲ ಇದೆ. ಈ ಕುರಿತು ಕಸಾಪ ಕೈಗೊಳ್ಳುವ ನಿರ್ಣಯಕ್ಕೆ ನಾನು ಬದ್ಧ
- ಸತೀಶ್‌ ಸೈಲ್‌, ಶಾಸಕ ಹಾಗೂ ಸಮ್ಮೇಳನದ ಗೌರವಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT