ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ, ಸ್ವಚ್ಛತೆ, ಕುಡಿಯುವ ನೀರಿಗೆ ಆದ್ಯತೆ

ನಗರಸಭೆ ಅಧ್ಯಕ್ಷ ಪ್ರದೀಪ ಶೆಟ್ಟಿ ಮಂಡನೆ; ಆದಾಯ ಹೆಚ್ಚಳಕ್ಕೆ ವಿವಿಧ ಕ್ರಮ, ವೈ–ಫೈ ಸೌಲಭ್ಯ ಕಲ್ಪಿಸಲು ಯೋಜನೆ
Last Updated 31 ಜನವರಿ 2017, 6:25 IST
ಅಕ್ಷರ ಗಾತ್ರ

ಶಿರಸಿ: ರಸ್ತೆ, ಚರಂಡಿ, ನೀರು ಸರಬ ರಾಜು ವ್ಯವಸ್ಥೆ ಸುಧಾರಣೆಗೆ ಆದ್ಯತೆ ನೀಡಿರುವ ನಗರಸಭೆ ಪ್ರಸಕ್ತ ಸಾಲಿನಲ್ಲಿ ₹ 54.26 ಲಕ್ಷಗಳ ಉಳಿತಾಯದ ಬಜೆಟ್ ಮಂಡಿಸಿದೆ.

ಅಧ್ಯಕ್ಷ ಪ್ರದೀಪ ಶೆಟ್ಟಿ ಸೋಮವಾರ ಕರೆದಿದ್ದ ವಿಶೇಷ ಸಭೆಯಲ್ಲಿ 2017–18ನೇ ಸಾಲಿನ ಬಜೆಟ್ ಮಂಡಿಸಿದರು. ರಸ್ತೆ, ಚರಂಡಿ ಅಭಿವೃದ್ಧಿಗೆ ₹ 3.10 ಕೋಟಿ, ನೀರು ಸರಬರಾಜು ವ್ಯವಸ್ಥೆಗೆ ₹ 1.55 ಕೋಟಿ ನಿಗದಿಗೊಳಿಸಿದ್ದು, ಇದು ಹಿಂದಿನ ವರ್ಷಕ್ಕಿಂತ ಎರಡುಪಟ್ಟು ಹೆಚ್ಚಾಗಿದೆ. ವಿವಿಧ ವಾರ್ಡ್‌ಗ ಉದ್ಯಾನ ಅಭಿವೃದ್ಧಿಗೆ ₹ 25 ಲಕ್ಷ, ಬೀದಿದೀಪಗಳ ನಿರ್ವಹಣೆಗೆ ₹ 45 ಲಕ್ಷ, ಸ್ವಚ್ಛತೆ ನಿರ್ವಹಣೆಗೆ ₹ 1.50 ಕೋಟಿ ಮೀಸಲಿಡ ಲಾಗಿದೆ. ಎಸ್‌ಎಫ್‌ಸಿ ಅನುದಾನ ಶೇ 22.75ರ ಅಡಿಯಲ್ಲಿ ಪರಿಶಿಷ್ಟ ಸಮು ದಾಯಗಳ ಅಭಿವೃದ್ಧಿಗೆ ₹ 50.34 ಲಕ್ಷ, ನಗರಸಭೆ ನಿಧಿಯಲ್ಲಿ ₹ 12.03 ಲಕ್ಷ ಕಾಯ್ದಿಡಲಾಗಿದೆ. ಬಡಜನರ ಕಲ್ಯಾಣಕ್ಕೆ ಒಟ್ಟು ₹ 19.66 ಲಕ್ಷ, ಅಂಗವಿಕಲರ ಕಲ್ಯಾಣಕ್ಕೆ ಒಟ್ಟು ₹ 8.14 ಲಕ್ಷ, ಕ್ರೀಡಾ ಚಟುವಟಿಕೆ, ಪ್ರಕೃತಿ ವಿಕೋಪದಡಿ ಸಹಾಯಧನಕ್ಕೆ ಅನುದಾನ ಕಾಯ್ದಿಡ ಲಾಗಿದೆ ಎಂದರು.

ವೈ-ಫೈ ಸೌಲಭ್ಯಕ್ಕೆ ₹ 10 ಲಕ್ಷ  ಮೀಸಲಿರಿಸಲಾಗಿದೆ. ನಗರಸಭೆ 150ನೆ ವರ್ಷಾಚರಣೆಗೆ ನಗರಸಭೆ ನಿಧಿಯಿಂದ ₹ 25 ಲಕ್ಷ ಹಾಗೂ ಸರ್ಕಾರ, ದಾನಿಗಳ ನೆರವಿನಿಂದ ಕಾರ್ಯಕ್ರಮ ಮಾಡಲಾಗು ವುದು. ಶಿರಸಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳನ್ನು ಮರು ಸಮೀಕ್ಷೆ ಮಾಡಲು ₹ 20 ಲಕ್ಷ ವೆಚ್ಚವಾಗ ಬಹುದು. ಇದರಿಂದ ತೆರಿಗೆ ಮೊತ್ತ ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದರು. 

ಆದಾಯದ ನಿರೀಕ್ಷೆ: 2017-–18ನೇ ಸಾಲಿನಲ್ಲಿ ಆಸ್ತಿ ತೆರಿಗೆಯಿಂದ ₹ 1.77 ಕೋಟಿ, ಕುಡಿಯುವ ನೀರಿನ ಕರ ₹ 1.51 ಕೋಟಿ ಅಂದಾಜಿಸಲಾಗಿದೆ. ಮೊಬೈಲ್ ಕೇಬಲ್ ಮತ್ತು ಟವರ್‌ ಗಳಿಂದ ಹೆಚ್ಚಿನ ಶುಲ್ಕ ಆಕರಿಸಲು ಯೋಚಿಸಲಾಗಿದೆ. ಸರ್ಕಾರದ ನಿಯಮ ದಂತೆ ಈ ಹಿಂದೆ ಅಳವಡಿಸಿರುವ ಕೇಬಲ್‌ಗಳಿಗೆ ಬಾಡಿಗೆ ಪಡೆಯಲು ನಿರ್ಧರಿಸಲಾಗಿದ್ದು,  ಇದರಿಂದ ₹  1 ಕೋಟಿ ಮೀರಿ ಆದಾಯ ಬರುವ ನಿರೀಕ್ಷೆ ಯಿದೆ. ಎಸ್‌ಸಿಪಿ, ಟಿಎಸ್‌ಪಿ ಅನುದಾನದಿಂದ ₹ 3 ಕೋಟಿ ಆದಾಯ ಬರುವ ನಿರೀಕ್ಷೆ ಇದೆ ಎಂದು ಹೇಳಿದರು.

ನಗರದ ಜನತೆಗೆ ಸಮರ್ಪಕ ಕುಡಿಯುವ ನೀರು, ನಗರ ನೈರ್ಮಲ್ಯ, ಬೀದಿ ದೀಪಗಳ ವ್ಯವಸ್ಥಿತ ನಿರ್ವಹಣೆ, ನಗರದ ಎಲ್ಲ ಆಸ್ತಿಗಳ ವೈಜ್ಞಾನಿಕ ಸರ್ವೆ ಹಾಗೂ ಗಣಕೀಕರಣ ಹಾಗೂ ನಗರ ಸೌಂದರ್ಯಕ್ಕೆ ಕ್ರಮ ಕೈಗೊಳ್ಳಲಾಗು ವುದು ಎಂದು ಪ್ರದೀಪ ಶೆಟ್ಟಿ ಹೇಳಿದರು.

***

ಮನೆ–ಮನೆ ಕಸ ಸಂಗ್ರಹ ಯೋಜನೆಯಡಿ ನಗರದ ಎಲ್ಲ ವಾರ್ಡ್‌ಗಳ ಪ್ರತಿಮನೆಗೆ ಎರಡು ಬಕೆಟ್ ವಿತರಣೆಗೆ ನಿರ್ಧರಿಸಲಾಗಿದೆ
- ಪ್ರದೀಪ ಶೆಟ್ಟಿ, ನಗರಸಭೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT