ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಶಾಲೆ ತೆರವು: ರೈತರ ವಿರೋಧ

Last Updated 31 ಜನವರಿ 2017, 6:37 IST
ಅಕ್ಷರ ಗಾತ್ರ

ಜಮಖಂಡಿ:  ಇಲ್ಲಿನ ನ್ಯಾಯಾಲಯ ಸಂಕೀರ್ಣ ಆವರಣದ ಪೂರ್ವ ದಿಕ್ಕಿನ ಗೋಡೆಗೆ ಹೊಂದಿಕೊಂಡು ಇರುವ ಗೋಶಾಲೆಯನ್ನು ತೆರವುಗೊಳಿಸಲು ಮುಂದಾಗಿರುವ ತಾಲ್ಲೂಕು ಆಡಳಿತದ ಕ್ರಮವನ್ನು ವಿರೋಧಿಸಿ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಕಳೆದ 10–12 ವರ್ಷಗಳಿಂದ ಅದೇ ಜಾಗದಲ್ಲಿ ಗೋಶಾಲೆಯನ್ನು ನಡೆಸಲಾಗುತ್ತಿದೆ. ಗೋಶಾಲೆ ಸ್ಥಳಾಂತರಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ತೆರವುಗೊಳಿಸಲು ಮುಂದಾಗಿರುವುದು ಖಂಡನಾರ್ಹ ಎಂದರು.

ಗೋಶಾಲೆ ಇರುವ ಜಾಗ ಸರ್ಕಾರಕ್ಕೆ ಸೇರಿದ ಜಾಗವಾಗಿದೆ ಎಂಬುದು ತಾಲ್ಲೂಕು ಆಡಳಿತದ ವಾದವಾಗಿದೆ. ಆದರೆ, ಬಹಳ ವರ್ಷಗಳಿಂದ ಅದೇ ಜಾಗದಲ್ಲಿ ಗೋಶಾಲೆಯನ್ನು ಚನ್ನಾಗಿ ನಡೆಯಿಸಿಕೊಂಡು ಬರಲಾಗಿದೆ. ಹಾಗಾಗಿ ಗೋಶಾಲೆ ಅದೇ ಜಾಗದಲ್ಲಿ ಮುಂದುವರಿಯಬೇಕು ಎಂಬುದು ಜನರ ಅಪೇಕ್ಷೆಯಾಗಿದೆ ಎಂದರು.
ಕಸಾಯಿಖಾನೆಗೆ ಒಯ್ಯುವಾಗ ಬಿಡಿಸಿಕೊಂಡು ತಂದಿರುವ ಹಾಗೂ ಬೀದಿ ಜಾನುವಾರುಗಳನ್ನು ಹಿಡಿದು ತಂದು ಗೋಶಾಲೆಯಲ್ಲಿ ಸಾಕಲಾಗಿದೆ. ಸುಮಾರು 80 ಗೋವುಗಳು ಇವೆ. ಗೋವುಗಳ ಸಂತತಿಯನ್ನು ಉಳಿಸಿ ಬೆಳೆಸಬೇಕು ಎಂಬುದು ಸರ್ಕಾರದ ನೀತಿಯಾಗಿದೆ. ಆದರೆ, ಅದಕ್ಕೆ ವಿರುದ್ಧವಾಗಿ ಗೋಶಾಲೆಯನ್ನು ತೆರವು ಮಾಡುವುದು ಸರಿಯಾದ ಕ್ರಮವಲ್ಲ ಎಂದರು.

ಗೋಶಾಲೆ ಸ್ಥಳಾಂತರ ಮಾಡುವ ಅಥವಾ ಅದೇ ಜಾಗದಲ್ಲಿ ಮುಂದುವರಿಸುವ ಕುರಿತು ಜನಪ್ರತಿನಿಧಿಗಳ ಸಹಕಾರ ಪಡೆಯಬೇಕು. ಪರ್ಯಾಯ ವ್ಯವಸ್ಥೆ ಕಲ್ಪಿಸದೆ ತೆರವು ಕಾರ್ಯಾಚರಣೆ ಕೈಗೊಳ್ಳುವುದು ಸರಿಯಲ್ಲ. ಶಾಸಕರ ಜೊತೆ ಈ ಕುರಿತು ಸಮಾಲೋಚನೆ ಮಾಡಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವುದು ಸೂಕ್ತ ಎಂದು ಅಭಿಪ್ರಾಯ ಪಟ್ಟರು.

ಈರಪ್ಪ ಹಂಚಿನಾಳ, ಕಲ್ಲಪ್ಪ ಬಿರಾದಾರ, ಜಿಲ್ಲಾ ಪಂಚಾಯ್ತಿ ಸದಸ್ಯ ಶಿವಾನಂದ ಪಾಟೀಲ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಜಿ.ಎಸ್‌. ನ್ಯಾಮಗೌಡ, ಶಿವಪ್ಪ ಕಡಪಟ್ಟಿ, ರಾಜು ನದಾಫ, ಶ್ರೀಶೈಲ ಭೂಮಾರ, ವಿಠ್ಠಲ ಪರೀಟ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT