ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಚಿತ ಆರೋಗ್ಯ ತಪಾಸಣಾ ಶಿಬಿರ

Last Updated 31 ಜನವರಿ 2017, 6:44 IST
ಅಕ್ಷರ ಗಾತ್ರ
ಮಾನ್ವಿ : ಜಮಾತೆ ಇಸ್ಲಾಮಿ ಹಿಂದ್‌ ಸಂಘಟನೆ ಕಳೆದ 70 ವರ್ಷಗಳಿಂದ ಅನೇಕ ಸಮಾಜಮುಖಿ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದು ಸಂಘಟನೆಯ ಜಿಲ್ಲಾ ಘಟಕದ ಸಂಚಾಲಕ ಮೌಲಾನಾ ಅನ್ವರ್‌ಪಾಶಾ ಉಮರಿ ಹೇಳಿದರು.
 
ಜಮಾತೆ ಇಸ್ಲಾಮಿ ಹಿಂದ್‌ ಮತ್ತು ಸಾಗರ ಆಸ್ಪತ್ರೆ ಬೆಂಗಳೂರು ಸಹಯೋಗದಲ್ಲಿ ಪಟ್ಟಣದ ಕೂಬಾ ಮಸ್ಜೀದ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
 
ಜಿಲ್ಲಾ ಪಂಚಾಯಿತಿ ಸದಸ್ಯ ಗಂಗಣ್ಣ ನಾಯಕ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಸವಪ್ರಭು ಪಾಟೀಲ್‌ ಬೆಟ್ಟದೂರು, ಡಾ.ಅಶೋಕ, ಡಾ.ಸಂತೋಷ, ಡಾ.ಕೃಷ್ಣ ಎನ್‌ ಚೈತನ್ಯ, ಈದ್ಗಾ ಸಮಿತಿ ಅಧ್ಯಕ್ಷ ಇಲಿಯಾಸ್‌ ಖಾದ್ರಿ, ಸೈಯದ್‌ ಅಕ್ಬರ್‌ಪಾಷಾ, ಡಾ.ಗುಲಾಮ ಜಿಲಾನಿ, ಉಮೇಶ ಸಜ್ಜನ, ಮರಿಸಿದ್ದಪ್ಪ ಹರವಿ, ಸಬ್ಜಲೀಸಾಬ್‌ ಇದ್ದರು. ದಾವೂದ್‌ ಸಿದ್ದಖೀ, ಕರೀಂಖಾನ್‌ ಮತ್ತು ಜಿಶಾನ್‌ ಅಖಿಲ್‌ ಸಿದ್ದಿಕಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT