ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆ ಬಗೆಹರಿಸಲು ಪಡಿತರದಾರರ ಪ್ರತಿಭಟನೆ

Last Updated 31 ಜನವರಿ 2017, 6:45 IST
ಅಕ್ಷರ ಗಾತ್ರ

ಶೆಟ್ಟಿಕೊಪ್ಪ (ಎನ್.ಆರ್.ಪುರ): ತಾಲ್ಲೂಕಿನ ಕಡಹಿನ ಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ  ಶೆಟ್ಟಿಕೊಪ್ಪ ಗ್ರಾಮದ  ಲ್ಯಾಂಪ್ಸ್  ಸೊಸೈಟಿಯಲ್ಲಿ ಪಡಿತರ ಕಡಿತಗೊಳಿಸಲಾಗಿದೆ ಎಂದು ಆರೋಪಿಸಿ ಸಮಸ್ಯೆ ಬಗೆಹರಿಸುವಂತೆ ಪಡಿತರದಾರ ಸೊಸೈಟಿಯ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಜನವರಿ  ತಿಂಗಳ ಪಡಿತರ ವಿತರಣೆ ಯಲ್ಲಿ ನ್ಯಾಯಾಬೆಲೆ ಅಂಗಡಿಗೆ 9.17 ಕ್ವಿಂಟಲ್ ಅಕ್ಕಿ ಕಡಿಮೆ ದಾಸ್ತಾನು ಬಂದಿತ್ತು, ಹಾಗಾಗಿ  ಆದ್ದರಿಂದ ತಿಂಗಳ ಪಡಿತರ ವಿತರಣೆಯಲ್ಲಿ ಆಹಾರ ಧಾನ್ಯದ ಪ್ರಮಾಣ ಕಡಿತಗೊಳಿಸಿರುವುದರಿಂದ ಪಡಿತದಾರರು ಆಕ್ರೋಶ ವ್ಯಕ್ತಪಡಿಸಿ ದರು.ಸ್ಥಳಕ್ಕೆ ಜನ ಪ್ರತಿನಿಧಿಗಳು, ಅಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಆರ್ ಸದಾಶಿವ ಪಡಿತರದಾರರನ್ನು ಸಮಾಧಾನ ಪಡಿಸಿ ದರು, ಆಹಾರ ನಿರೀಕ್ಷಕರು ಹಾಗೂ ಸೊಸೈಟಿಯ ಅಧಿಕಾರಿಯನ್ನು ಸ್ಥಳಕ್ಕೆ ಕರೆಸಿದರು. ಸಮಸ್ಯೆ ಬಗ್ಗೆ ಉತ್ತರಿಸಿ ಆಹಾರ ನಿರೀಕ್ಷಕರು ಆಹಾರ ಸಾಮಗ್ರಗಿಗಳ ವಿತರಣೆಯ ಮಾಹಿತಿ ಕಂಪ್ಯೂಟರ್ನಲ್ಲಿ  ಅಪ್‌ಲೋಡ್ ಆಗದೇ ಇರುವುದರಿಂದ ದಾಸ್ತಾನು ಕಡಿಮೆ ಬಂದಿದೆ. ಜಿಲ್ಲೆಯ ಎಲ್ಲ  ಕಡೆ ಇದೇ ಪರಿಸ್ಥಿತಿ ಇದೆ ಎಂದರು.

ನ್ಯಾಯಬೆಲೆ ಅಂಗಡಿ ಅಧಿಕಾರಿ ರಮೇಶ್ ಮಾತನಾಡಿ ಆಹಾರ ವಿತರಣೆ ಮಾಹಿತಿ ಕಂಪ್ಯೂಟರ್‌ನಲ್ಲಿ ಅಪ್‌ ಲೋಡ್ ಮಾಡಲಾಗಿದೆ. ಇದರ ಬಗ್ಗೆ ಮಾಹಿತಿ ಬಾರದೆ ಇರುವುದರಿಂದ ಸರಿ ಯಾದ ಮಾಹಿತಿ ಸಿಗುತ್ತಿಲ್ಲ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಆರ್. ಸದಾಶಿವ ಮಾತನಾಡಿ ಇದು ಕೇವಲ ಒಂದು ನ್ಯಾಯಬೆಲೆಯ ಸಮಸ್ಯೆಯಲ್ಲ. ಕೆಲವು ತಾಂತ್ರಿಕ ಕಾರಣದಿಂದ ಸಮಸ್ಯೆಯಾಗಿದೆ. ತಹಶೀಲ್ದಾರ್ ಜತೆ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲಾಗುವುದು ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾ ಯಿತಿ  ಸದಸ್ಯರಾದ ನಾಗರಾಜ್, ಎ. ಎಲ್.ಮಹೇಶ್, ವಿಜು, ವಿಂದ್ಯಾ ಹೆಗಡೆ, ಸುಲೇಮಾನ್, ಸುಧಾ, ಜಯಲಕ್ಷ್ಮಿ, ತಾಲ್ಲೂಕು ಪಂಚಾಯಿತಿ ಸದಸ್ಯ ಸುಧಾ ಕರ್ ಆಚಾರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಬಿ ಮಂಜು ನಾಥ್, ಮಾಜಿ ಸದಸ್ಯ ಎಂ ಮಹೇಶ್, ಲ್ಯಾಂಪ್ಸ್  ನಿರ್ದೇಶಕ ಕೆ.ಶ್ರೀನಾಥ್ .ಜೆ.ಟಿ.ಸುರೇಂದ್ರ ಇದ್ದರು. ತಹಶೀಲ್ದಾರ್ ಟಿ. ಗೋಪಿನಾಥ್ ಅವರನ್ನು ಜನಪ್ರತಿನಿಧಿ ಗಳು ಭೇಟಿ ಮಾಡಿ ಸಮಸ್ಯೆಯ ಬಗ್ಗೆ ಚರ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT