ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಲಿ-: ಈಶ್ವರಪ್ಪ

Last Updated 31 ಜನವರಿ 2017, 6:46 IST
ಅಕ್ಷರ ಗಾತ್ರ

ಕಡೂರು: ಯುಪಿಎ ಸರ್ಕಾರದ ಅವಧಿಯಲ್ಲಿಯೂ ರಾಜ್ಯದಲ್ಲಿ ಬರಗಾಲವಿತ್ತು. ಆಗ ಕೇಂದ್ರದಿಂದ ಎಷ್ಟು ಹಣ ಬಿಡುಗಡೆಯಾಗಿತ್ತು, ಈಗ ಎಷ್ಟು ಹಣ ಬಿಡುಗಡೆಯಾಗಿದೆ ಎಂದು ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.

ತಾಲ್ಲೂಕಿನ ಖಂಡುಗದ ಹಳ್ಳಿ ಸೋಮೇಶ್ವರ ದೇವಾಲಯದಲ್ಲಿ ಸೋಮವಾರ ನಡೆದ ಏಕಾದಶವಾರು ರುದ್ರಹೋಮ, ಪೂರ್ಣಾಹುತಿಯಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಅವರು ಮಾತನಾಡಿ, ರಾಜ್ಯದ ಇತಿಹಾಸದಲ್ಲಿ ಬರಗಾಲ ಪರಿಸ್ಥಿತಿಗೆ ಹೆಚ್ಚು ಹಣ ಬಿಡುಗಡೆ ಮಾಡಿರುವುದು ಮೋದಿ ಸರ್ಕಾರ. ಇದು ವಾಸ್ತವಿಕ ಸಂಗತಿ. ಕರ್ನಾಟಕಕ್ಕೆ ಬರಗಾಲ ಹೊಸತಲ್ಲ. ಯುಪಿಎ ಸರ್ಕಾರದ ಅವಧಿಯಲ್ಲಿಯೂ ಬರವಿತ್ತು. ಆಗ ಗೆಷ್ಟು ಹಣವನ್ನು ಕೇಂದ್ರ ರಾಜ್ಯಕ್ಕೆ ನೀಡಿತ್ತು. ಈಗ ಮೋದಿಯವರೆಷ್ಟು ನೀಡಿದ್ದಾರೆಂಬ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು. ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ.

ಜಾನುವಾರುಗಳನ್ನು ಕಟುಕರಿಗೆ ಮಾರುವ ಪರಿಸ್ಥಿತಿ ಬಂದಿದೆ. ಇಂತಹ ಸಮಯದಲ್ಲಿ ಬರ ಎದುರಿಸಲು ಕೇಂದ್ರದಿಂದ ಬಂದಿರುವ  ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು, ಇಲ್ಲದಿದ್ದಲ್ಲಿ ರೈತರ ಸಮಸ್ಯೆ ತೀರಾ ಹದಗೆಡಲಿದೆ. ಪಕ್ಷದ ನಾಯಕರನ್ನು ಉಳಿಸಿಕೊಳ್ಳುವುದರಲ್ಲಿಯೇ ತಮ್ಮ ಸಮಯ ವ್ಯರ್ಥ ಮಾಡಿ ಜನರನ್ನು ಅನಾಥರನ್ನಾಗಿಸಬಾರದು ಎಂದು ನುಡಿದರು.

ರಾಜ್ಯದ ಇತಿಹಾಸದಲ್ಲಿ ಕಾಂಗ್ರೆಸ್ ಶೇ 70ರಷ್ಟು ಅಧಿಕಾರ ನಡೆಸಿದ್ದು, ಆದರೆ ಹಿಂದುಳಿದ ವರ್ಗಗಳನ್ನು ಮೇಲೆತ್ತುತ್ತೇವೆ ಎಂಬ ಆ ಪಕ್ಷದ ಪ್ರಣಾಳಿಕೆಗಳು, ಘೋಷಣೆಗಳು ಇನ್ನೂ ಸಾಕಾರವಾಗಿಲ್ಲ. ಇಂದಿಗೂ ರಾಜ್ಯದಲ್ಲಿ ಅನಕ್ಷರಸ್ಥರಿದ್ದಾರೆ. ಗುಡಿಸಲಿನಲ್ಲಿ ವಾಸವಾಗಿರುವವರಿದ್ದಾರೆ. ಇದಕ್ಕಾಗಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಬೇಕೆ ಎಂದು ಪ್ರಶ್ನಿಸಿದ ಈಶ್ವರಪ್ಪ ಬಿಜೆಪಿ ಒಬಿಸಿ ಮೋರ್ಚಾದಿಂದ ಶಿಕ್ಷಣ ಮತ್ತು ಸೂರು ಇವೆರಡಕ್ಕೆ ಆದ್ಯತೆ ನೀಡಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ.  ಬಡ ಜನರು ಪ್ರಾಮಾಣಿಕರು ಅದನ್ನು ದುರು ಪಯೋಗ ಮಾಡಿಕೊಳ್ಳಲಾಗುತ್ತಿದೆ. ಅವರು ದುಡಿದ ಹಣ ಅವರದೇ ಎಂಬ ಆತ್ಮವಿಶ್ವಾಸವನ್ನು ಅವರಲ್ಲಿ ಮೂಡಿ ಸಬೇಕಿದೆ. ಅದನ್ನು ಒಬಿಸಿ ಮೋರ್ಚಾ ಮಾಡಲಿದೆ ಎಂದರು.

ಖಂಡುಗದಹಳ್ಳಿ ಸೋಮೇಶ್ವರ ದೇಗುಲದ ಅಭಿವೃದ್ಧಿ ಸಮಿತಿ ಧರ್ಮ ದರ್ಶಿ ಕೆ.ಎಸ್ ಬಸಪ್ಪ,  ಕೆ.ಬಿ. ಸೋ ಮೇಶ್,ಪರಮೇಶ್ವರಪ್ಪ, ಪುಷ್ಪಲತಾ ಸೋಮೇಶ್,  ಕೆ.ಎಸ್. ಸೋಮಶೇಖರ್, ಪರಮೇಶ್, ಪಾತೇನ ಹಳ್ಳಿ ಚೌಡಪ್ಪ, ಕೆ.ಜಿ. ಲೋಕೇಶ್ವರ್,  ಯಳ ಗೊಂಡ ನಹಳ್ಳಿ ಈಶ್ವರ್, ಟೊಮೇಟ ೋಗೋವಿಂದಪ್ಪ ಮತ್ತಿತರರು ಇದ್ದರು.

ರಾಜಕೀಯೇತರ ಸಂಘಟನೆಯಾಗಿ ರಾಯಣ್ಣ ಬ್ರಿಗೇಡ್
‘ನನ್ನ ಮತ್ತು ಯಡಿಯೂರಪ್ಪ ಅವರ ನಡುವೆ ಭಿನ್ನಾಭಿಪ್ರಾಯ ಇಲ್ಲ. ಅದು ಮುಗಿದ ಅಧ್ಯಾಯ. ರಾಯಣ್ಣ ಬ್ರಿಗೇಡ್ ರಾಜಕೀಯೇತರ ಸಂಘಟನೆಯಾಗಿ ಮುಂದುವರೆಯಲಿದೆ’ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು.

ಕಡೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಭೀಕರ ಬರಗಾಲದಿಂದ ತತ್ತರಿಸಿ ರುವ ರಾಜ್ಯದ ಜನತೆಗೆ ಪ್ರಕೃತಿ ಕರುಣೆ ತೋರಿಸಬೇಕು. ಅಧಿಕಾರ ಎಂದಿಗೂ ಶಾಶ್ವತವಲ್ಲ. ಇರುವಷ್ಟು ದಿನ ಜನೋಪ ಯೋಗಿಯಾಗಿ ಇರಬೇಕು. ಆಗ ಮಾತ್ರ ಸಿದ್ದರಾಮಯ್ಯನವರು ಪೂರ್ಣಾವಧಿ ಸರ್ಕಾರ ನಡೆಸುತ್ತಾರೆ. ಇಲ್ಲದಿದ್ದರೆ ಅದು ಕಷ್ಟ ಸಾಧ್ಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT