ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಯವಸ್ಥೆಯ ಅಮೃತ್ ಮಹಲ್ ತಳಿ ಸಂವರ್ಧನಾ ಕೇಂದ್ರ

ಅಜ್ಜಂಪುರ: ಸ್ವಚ್ಛತೆ, ಸ್ಥಿರತೆ ಕಳೆದುಕೊಳ್ಳುತ್ತಿರುವ ಕೇಂದ್ರ–ಬಿರುಕುಬಿಟ್ಟ ಗೋಡೆಗಳು
Last Updated 31 ಜನವರಿ 2017, 7:00 IST
ಅಕ್ಷರ ಗಾತ್ರ

ಅಜ್ಜಂಪುರ: ಗಿಡ ಗಂಟಿಗಳಿಂದ ಕೂಡಿದ ರಸ್ತೆಗಳು, ಪಾಳು ಬಿದ್ದು, ಅನುಪಯು ಕ್ತವಾಗಿ ಶಿಥಿಲಾವಸ್ಥೆ ತಲುಪಿರುವ  ಕಟ್ಟಡ ಗಳು, ಗಾರೆ ಕಳಚಿ, ಬಿರುಕು ಬಿಟ್ಟ ಗೋಡೆಗಳು, ಬಿರುಕುಬಿಟ್ಟ ಕಟ್ಟಡಗಳಲ್ಲಿ ಜಮಾವಣೆಗೊಂಡ ರಾಸು, ದಾರಿಯು ದ್ದಕ್ಕೂ ಜಾಲಿ ಮುಳ್ಳುಗಳು, ಅಲ್ಲಲ್ಲಿ ಸತ್ತ ರಾಸುಗಳ ಮೂಳೆಗಳು....

–ಇವು ರಾಜ್ಯದ ಪ್ರಮುಖ ದೇಶಿ ತಳಿಗೆ  ಪ್ರಸಿದ್ದಿ ಪಡೆದಿದ್ದ ಅಜ್ಜಂಪುರದ ಅಮೃತ್ ಮಹಲ್ ತಳಿ ಸಂವರ್ಧನಾ ಕೇಂದ್ರದಲ್ಲಿ ಕಂಡು ಬರುವ ದೃಶ್ಯಗಳು.
ಯಾರನ್ನಾದರೂ, ಅಮೃತ್‌ ಮಹಲ್ ತಳಿ ಸಂವರ್ಧನಾ ಮತ್ತು ಸಂಶೋಧನಾ ಕೇಂದ್ರ. ಅಜ್ಜಂಪುರ ಎಂಬ ದಪ್ಪ ಅಕ್ಷರದಲ್ಲಿನ ಸುಂದರ ಕಟ್ಟಡ ಸ್ವಾಗತಿಸುತ್ತದೆ. ಆದರೆ ಕೇಂದ್ರದೊಳಗಿನ ಪರಿಸರ ಅಷ್ಟೇ ಪ್ರಮಾಣದ ಕುರೂಪದ ದರ್ಶನ ಮಾಡಿಸುತ್ತದೆ.  ಕೇಂದ್ರದ ಆಸುಪಾಸಿನಲ್ಲಿ ಕಚೇರಿ, ಸಿಬ್ಬಂದಿ ನಿವಾಸ, ರಾಸುಗಳ ಜಮಾವಣಾ ಕೇಂದ್ರ, ಮೇವು ಪೂರೈಸುವ ಕಟ್ಟಡ, ಮೇವು ದಾಸ್ತಾನು ಕಟ್ಟಡ, ಕೃತಕ ಗರ್ಭಧಾರಣಾ ಕಟ್ಟಡ, ಪಶು ಚಿಕಿತ್ಸಾ ಕಟ್ಟಡ, ನವಜಾತ ಹಸು-ಕರು ಇರಿಸುವ ಕಟ್ಟಡ, ಗಾಯ ಗೊಂಡಿರುವ ಹಸು ಇರಿಸುವ ಸ್ಥಳ, ಹೀಗೆ ಸಾಲು-ಸಾಲು ಕಟ್ಟಡಗಳಿದ್ದರೂ, ಕೇವಲ ಒಂದೆರಡು ಕಟ್ಟಡಗಳನ್ನು ಹೊರತು ಪಡಿಸಿದರೆ ಉಳಿದವು ಶಿಥಿಲಗೊಂಡು ಬೀಳಲು ಸಜ್ಜಾಗಿರುವಂತಿರುವುದು ಕಾಣುತ್ತಿವೆ.

ಕಚೇರಿ ಕೇಂದ್ರದಿಂದ ಯಾವೊಂದು ಕಟ್ಟಡದವರೆಗೂ ಉತ್ತಮ ರಸ್ತೆಗಳಿಲ್ಲ. ರಸ್ತೆ ಇಕ್ಕೆಲಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲ. ಜಾಲಿ ಮುಳ್ಳಿನ ಗಿಡಗಳು ಹರಡಿ ಕೊಂಡಿವೆ. ಕಟ್ಟಡಗಳ ಆಸುಪಾಸಿನಲ್ಲಿ ಮದ್ಯದ ಬಾಟಲಿ ಸೇರಿದಂತೆ ಗಾಜಿನ ಚೂರುಗಳು ಕಾಣ ಸಿಗುತ್ತವೆ. ಕೇಂದ್ರದ 200 ಮೀಟರಿಗೂ ಕಡಿಮೆ ಅಂತರದಲ್ಲಿ ಹೂತಿರುವ ರಾಸುಗಳಿಂದ ಹೊರಬರುವ ದುರ್ನಾತ, ಅಲ್ಲದೇ ಅಲ್ಲಲ್ಲಿ ಸತ್ತ ರಾಸುಗಳ ತಲೆ ಬುರುಡೆ, ಮೂಳೆ, ಕೊಂಬುಗಳು ಚದುರಿರುವುದು ಕಂಡು ಬರುತ್ತವೆ.

ಅಜ್ಜಂಪುರದ ಕೇಂದ್ರದಲ್ಲಿ  795 ಎಕರೆಯಷ್ಟು ವಿಶಾಲ ಭೂ ಪ್ರದೇಶ ವಿದ್ದರೂ, ಕೇವಲ 50 ಎಕರೆಯನ್ನು ಮೇವು ಬೆಳೆಯಲು ಹಸನು ಮಾಡ ಲಾಗಿದೆ. ಉಳಿದ 745ಕ್ಕೂ ಅಧಿಕ ಅಮೂಲ್ಯ ಫಲವತ್ತಿನ ಭೂಮಿ ಜಾಲಿ ಮುಳ್ಳಿನ ಪೊದೆಗಳಿಗೆ ಆಶ್ರಯ ನೀಡುವ ತಾಣವಾಗಿದೆ. ಇಡೀ ಭೂಪ್ರದೇಶದಲ್ಲಿ ಕಾಲಿಡಲು ಭಯವಾಗುವಂತಹ ಮುಳ್ಳು ಗಳು ಹರಡಿಕೊಂಡಿದ್ದು, ಒಂದಿಂಚೂ ಹಸಿ ಹುಲ್ಲು ಈ ಭಾಗದಲ್ಲಿ ರಾಸುಗಳಿಗೆ ಸಿಗುತ್ತಿಲ್ಲ. ನೆಪ ಮಾತ್ರಕ್ಕೆ ಹಸುಗಳನ್ನು ಮೇಯಿಸಲು ಹೋಗುವರೇ ವಿನಃ ಅವುಗಳ ಹಸಿವು ನೀಗಿಸಲು ಅಲ್ಲ ಎಂಬ ಮಾತೂ ಕೇಳಿ ಬಂದಿವೆ.

ರಾಸುಗಳಿಗೆ ಮೇವು ಪೂರಣ ಮಾಡುವ ಸ್ಥಳವಾಗಲಿ, ನೀರು ಪೂರೈಸುವ ತೊಟ್ಟಿಗಳಾಗಲಿ ಅಗತ್ಯವಿರು ವಷ್ಟು ಮಟ್ಟಿನ ಸ್ವಚ್ಛತೆ, ಶುಭ್ರತೆ ಕಾಯ್ದುಕೊಂಡಿಲ್ಲದಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಇರುವ  ಕಟ್ಟಡಗಳನ್ನೇ ಅಳಿವಿನಂಚಿಗೆ ದೂಡುತ್ತಿರುವ ಕೇಂದ್ರಕ್ಕೆ ಪ್ರತಿ  ವರ್ಷ ಲಕ್ಷಾಂತರ ರೂಪಾಯಿ ಅನುದಾನ ನೀಡಿ, ಹೊಸ ಕಟ್ಟಡ ನಿರ್ಮಿಸುತ್ತಿರುವ ಹಿಂದಿನ ಉದ್ದೇಶ ಏನು ಎಂಬುದು ಜನರ ಪ್ರಶ್ನೆ.
ಜೆ.ಒ.ಉಮೇಶ್ ಕುಮಾರ್
(ಮುಂದುವರೆಯುವುದು)

**

ಮತ್ತೊಂದು ರಾಸು ಸಾವು

ಅಜ್ಜಂಪುರ: ಕಡೂರು ಸಮೀಪದ ಬಾಸೂರು ಕಾವಲಿಂದ ಬಂದಿದ್ದ  ಒಂದು ರಾಸು ಭಾನುವಾರ ಮೃತ ಪಟ್ಟಿದೆ. ಅಧಿ ಕಾರಿಗಳು ವಯೋ ಸಹಜತೆಯಿಂದ ಸತ್ತು ಹೋಗಿರು ವುದಾಗಿ ತಿಳಿಸಿದರಾದರೂ, ಅದು ಅಸಹಜ ಸಾವು ಎಂದು ಪ್ರಾಣಿಪ್ರಿಯರು ಆರೋಪಿಸಿದ್ದಾರೆ.

ಮರಳಿ ಬಾಸೂರಿಗೆ
ಕೃಷ್ಣ ಮೃಗಗಳು ಹಸಿರು ಹುಲ್ಲು ಬರಿದು ಮಾಡಿದ್ದು ಹಾಗೂ ತೀವ್ರ ಬರಗಾಲವಿರುವುದರಿಂದ ಮೇವಿನ ಕೊರತೆಯಿಂದ ಕಡೂರು ತಾಲ್ಲೂಕಿನ ಬಾಸೂ ರಿನಿಂದ ಅಜ್ಜಂಪುರ ಕೇಂದ್ರಕ್ಕೆ ಬಂದಿದ್ದ 220 ರಾಸುಗಳನ್ನು ಮರಳಿ ಬಾಸೂರಿಗೆ ಕಳುಹಿಸಲು ತೀರ್ಮಾನಿಸಲಾಗಿದೆ. ಬಾಸೂರಿ ನಲ್ಲಿ ಅಗತ್ಯವಿರುವ ಮೇವು ಸಂಗ್ರ ಹಿಸಿದ ಕೂಡಲೇ ರಾಸುಗಳನ್ನು ಬಾಸೂರಿಗೆ ಕಳುಹಿಸಲಾಗುವುದು ಎಂದು ಕೇಂದ್ರದ ಅಧಿಕಾರಿ ಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT