ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಜೆಟ್‌ 2017: ತೆರಿಗೆಯಲ್ಲಿ ಏನೇನು?

Last Updated 1 ಫೆಬ್ರುವರಿ 2017, 13:18 IST
ಅಕ್ಷರ ಗಾತ್ರ
ADVERTISEMENT

ನವದೆಹಲಿ: ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಆದಾಯ ತೆರಿಗೆ ಮಿತಿಯನ್ನು ₹3 ಲಕ್ಷಕ್ಕೆ ಏರಿಸಬಹುದೆಂಬ ನಿರೀಕ್ಷೆ ಹುಸಿಯಾಗಿದೆ.

₹ 2.5 ಲಕ್ಷದಿಂದ ₹5 ಲಕ್ಷದೊಳಗೆ ವಾರ್ಷಿಕ ಆದಾಯ ಹೊಂದಿರುವವರಿಗೆ ಆದಾಯ ತೆರಿಗೆಯನ್ನು ಶೇಕಡ 10ರಿಂದ ಶೇಕಡ 5ಕ್ಕೆ ಇಳಿಸಲಾಗಿದೆ.

ವಾರ್ಷಿಕ ₹50 ಲಕ್ಷದಿಂದ ₹1 ಕೋಟಿವರೆಗೆ ಆದಾಯ ಹೊಂದಿರುವವರಿಗೆ ಶೇಕಡ 10ರಷ್ಟು ಸರ್‌ಚಾರ್ಜ್‌ ಹಾಗೂ ₹ 1 ಕೋಟಿಗಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿರುವವರಿಗೆ ಶೇಕಡ 15ರಷ್ಟು ಸರ್‌ಚಾರ್ಜ್‌ ವಿಧಿಸಲಾಗುವುದು ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ತಿಳಿಸಿದ್ದಾರೆ.

ಬಜೆಟ್‌ನ ಇತರೆ ಮುಖ್ಯಾಂಶಗಳು

* 13.14 ಲಕ್ಷ ನೋಂದಾಯಿತ ಕಂಪೆನಿಗಳ ಪೈಕಿ 5.97 ಲಕ್ಷ ಕಂಪೆನಿಗಳು ಮಾತ್ರ 2016–17ರ ಸಾಲಿನಲ್ಲಿ ರಿಟರ್ನ್‌ ಸಲ್ಲಿಸಿವೆ.

* ವಾರ್ಷಿಕ ಆದಾಯ ₹2.5 ಲಕ್ಷದಿಂದ ₹5 ಲಕ್ಷದೊಳಗಿರುವವರ ಸಂಖ್ಯೆ 1.95 ಕೋಟಿ.

* ವಾರ್ಷಿಕ ₹5 ಲಕ್ಷದಿಂದ ₹56 ಲಕ್ಷದೊಳಗಿನ ಸಂಬಳದಾರರ ಸಂಖ್ಯೆ 76 ಲಕ್ಷ.

* 1.72 ಲಕ್ಷ ಮಂದಿ ತಮ್ಮ ವಾರ್ಷಿಕ ಆದಾಯ ₹50 ಲಕ್ಷಕ್ಕಿಂತ ಮೇಲಿದೆ ಎಂದು ಘೋಷಿಸಿಕೊಂಡಿದ್ದಾರೆ.

* ₹3 ಲಕ್ಷಕ್ಕಿಂತ ಹೆಚ್ಚಿನ ನಗದು ವ್ಯವಹಾರದ ಮೇಲೆ ನಿರ್ಬಂಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT