ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2017–18ನೇ ಸಾಲಿನ ಕೇಂದ್ರ ಬಜೆಟ್‌

Last Updated 1 ಫೆಬ್ರುವರಿ 2017, 12:09 IST
ಅಕ್ಷರ ಗಾತ್ರ

ನವದೆಹಲಿ: ನಾಲ್ಕನೇ ಬಾರಿಗೆ ವಿತ್ತ ಸಚಿವ ಅರುಣ್ ಜೇಟ್ಲಿ ಅವರು 2017–18ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದರು.

ಫೆಬ್ರುವರಿ 1ರಂದು ಬಜೆಟ್‌ ಮಂಡಿಸಿರುವುದರಿಂದ ಆರ್ಥಿಕ ವರ್ಷದ ಪ್ರಾರಂಭದಿಂದಲೇ ಸಚಿವಾಲಯಗಳ ಕಾರ್ಯಾರಂಭಕ್ಕೆ ಅನುಕೂಲವಾಗಲಿದೆ. ಯೋಜಿತ ಮತ್ತು ಅನಿಯೋಜಿತ ವಿಭಾಗಗಳನ್ನು ತೆಗೆಯಲಾಗಿದೆ ಹಾಗೂ ಸಾಮಾನ್ಯ ಬಜೆಟ್‌ನೊಂದಿಗೆ ರೈಲ್ವೆ ಬಜೆಟ್‌ ವಿಲೀನಗೊಳಿಸಿರುವುದು ಈ ಬಾರಿಯ ಬಜೆಟ್‌ನ ವಿಶೇಷ.

‘ಪರಿವರ್ತನೆ, ಶಕ್ತಿಯುಕ್ತ ಮತ್ತು ಸ್ವಚ್ಛ ಭಾರತ’ (Transform, Energise and Clean India– TEC) ಎಂಬುದು 2017-18 ಸಾಲಿನ ಬಜೆಟ್‌ ಕಾರ್ಯಸೂಚಿಯಾಗಿದೆ.

ಹತ್ತು ಪ್ರಮುಖ ಭಾಗಗಳಾಗಿ ವಿಂಗಡಿಸಿ ಅರುಣ್‌ ಜೇಟ್ಲಿ ಬಜೆಟ್‌ ಮಂಡಿಸಿದರು.

* ರೈತರ ಉತ್ಪಾದನೆ 5 ವರ್ಷಗಳಲ್ಲಿ ದುಪ್ಪಟುಗೊಳಿಸಲು ಹಲವು ಕ್ರಮ:
– ₹10 ಲಕ್ಷ ಕೋಟಿಯಷ್ಟು ಕೃಷಿ ಸಾಲ
– ಡಿ.31ರಂದು ಪ್ರಕಟಿಸಿದಂತೆ ರೈತರ ಸಾಲದ ಮೇಲಿನ 60 ದಿನಗಳ ಬಡ್ಡಿ ಮನ್ನ
– ದೇಶದ 63 ಸಾವಿರ ಕೃಷಿ ಕ್ರೆಡಿಟ್‌ ಸೊಸೈಟಿಗಳ ಗಣಕೀಕರಣ ಹಾಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆಗೆ ₹1,900 ಕೋಟಿ ಅಂದಾಜು. 3 ವರ್ಷಗಳಲ್ಲಿ ಕಾರ್ಯ ಪೂರ್ಣ.
– ಫಸಲ್‌ ವಿಮಾ ಯೋಜನೆ ವಿಸ್ತರಿಸಲು ₹9000 ಕೋಟಿ ಮೀಸಲು. 2017–18 ಸಾಲಿನಲ್ಲಿ ವಿಮಾ ವ್ಯಾಪ್ತಿ ಶೇ.30ರಿಂದ ಶೇ.40ಕ್ಕೆ ಏರಿಕೆಯಾಗಲಿದೆ.
– ಮಣ್ಣಿನ ಪರೀಕ್ಷೆಗೆ ಸಹಕಾರಿಯಾಗಲು ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಕಿರು ಪ್ರಯೋಗಾಲಯ ಸ್ಥಾಪನೆ
–ರಾಷ್ಟ್ರೀಯ ಕೃಷಿ ಮಾರುಕಟ್ಟೆ(e-NAM), 250 ರಿಂದ 585 ಎಪಿಎಂಸಿಗೆ ವಿಸ್ತರಣೆ. ಪ್ರತಿ ಮಾರುಕಟ್ಟೆ e-NAM ಗೆ ₹75 ಲಕ್ಷ ಸಹಕಾರ


* ಗ್ರಾಮೀಣ ಜನರ ಉನ್ನತಿಗಾಗಿ ಉದ್ಯೋಗ:
– ಗ್ರಾಮೀಣ ಭಾಗದ ಬಡವರ ಉನ್ನತಿಗೆ ವಾರ್ಷಿಕ ₹3 ಲಕ್ಷ ಕೋಟಿ ಖರ್ಚು
– 2019ರ ವೇಳೆಗೆ 50 ಸಾವಿರ ಗ್ರಾಮ ಪಂಚಾಯ್ತಿಗಳು ಹಾಗೂ 1 ಕೋಟಿ ಕುಟುಂಬಗಳು ಬಡತನ ಮುಕ್ತಗೊಳಿಸುವ ಗುರಿ
– ನರೇಗಾ ಯೋಜನೆಗೆ ₹48 ಸಾವಿರ  ಕೋಟಿ ಮೀಸಲು.
– ನರೇಗಾ ಯೋಜನೆ ಅಡಿ ಮಾರ್ಚ್‌ 2017ಕ್ಕೆ ಹತ್ತು ಲಕ್ಷ ಕೃಷಿ ಹೊಂಡಗಳ ನಿರ್ಮಾಣ
– ಗ್ರಾಮೀಣ ಭಾಗದ ಪ್ರಧಾನ ಮಂತ್ರಿ ಆವಾಸ್‌ ಯೋಜನೆಗೆ ಮೀಸಲು ₹15 ಸಾವಿರ ಕೋಟಿಯಿಂದ ₹23 ಸಾವಿರ ಕೋಟಿಗೆ ಹೆಚ್ಚಳ
– 2018ರ ಮೇ 1ರೊಳಗೆ ಶೇ.100 ಗ್ರಾಮೀಣ ಭಾಗಕ್ಕೆ ವಿದ್ಯುತ್‌ ಸಂಪರ್ಕ
– ಆರ್ಸೆನಿಕ್‌ ಮತ್ತು ಫ್ಲೋರೈಡ್‌ಯುಕ್ತ 28,000 ವಲಯಗಳಲ್ಲಿ ಉತ್ತಮ ಕುಡಿಯುವ ನೀರಿನ ವ್ಯವಸ್ಥೆ. ಮುಂದಿನ 4 ವರ್ಷಗಳಲ್ಲಿ
–2022ರ ವೇಳೆಗೆ 5 ಲಕ್ಷ ಜನರಿಗೆ ಕೌಶಲ ತರಬೇತಿ
– ಗ್ರಾಮೀಣ ಮತ್ತು ಕೃಷಿ ಚಟುವಟಿಕೆ ವಲಯಗಳಿಗೆ ಒಟ್ಟು ₹1.87 ಲಕ್ಷ ಕೋಟಿ ಮೀಸಲು


* ಯುವಜನ ಅಭಿವೃದ್ಧಿ:
– ಶೈಕ್ಷಣಿಕವಾಗಿ ಹಿಂದುಳಿದಿರುವ 3479 ಜಿಲ್ಲೆಗಳಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹ ಹಾಗೂ ಗುಣಮಟ್ಟ ಹೆಚ್ಚಳಕ್ಕೆ ಆದ್ಯತೆ
– ‘ಸ್ವಯಂ’ ವೇದಿಕೆ ಅಡಿ 350 ಆನ್‌ಲೈನ್‌ ಕೋರ್ಸ್‌ಗಳ ಪ್ರಾರಂಭ
– ಉನ್ನತ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಸ್ಥಾಪನೆ
– ದೇಶದ 600ಕ್ಕೂ ಹೆಚ್ಚು ಜಿಲ್ಲೆಗಳಿಗೆ ಪ್ರಧಾನ ಮಂತ್ರಿ ಕೌಶಲ ಕೇಂದ್ರ ವಿಸ್ತರಣೆ
– ಮಾರುಕಟ್ಟೆ ಆಧಾರಿತ ತರಬೇತಿ ನೀಡುವ ‘ಸಂಕಲ್ಪ್‌’ ಕಾರ್ಯಕ್ರಮಕ್ಕೆ ಚಾಲನೆ. ₹4 ಸಾವಿರ ಕೋಟಿ ವೆಚ್ಚ.
– ಪ್ರವಾಸ ಮತ್ತು ಉದ್ಯೋಗ ಹೆಚ್ಚಳಕ್ಕೆ ‘ಇನ್‌ಕ್ರೆಡಿಬಲ್‌ ಇಂಡಿಯಾ 2.0 ’ ಅಭಿಯಾನ

* ಆರೋಗ್ಯ ಸುಧಾರಣೆ:
-14 ಲಕ್ಷ ಅಂಗನವಾಡಿ ಕೇಂದ್ರಗಳಲ್ಲಿ ₹500 ಕೋಟಿ ವೆಚ್ಚದಲ್ಲಿ ‘ಮಹಿಳಾ ಶಕ್ತಿ ಕೇಂದ್ರ’ ಸ್ಥಾಪನೆ
– ಗರ್ಭಿಣಿಯರ ಖಾತೆಗೆ ನೇರವಾಗಿ ₹6 ಸಾವಿರ ವರ್ಗಾವಣೆ
– ನ್ಯಾಷನಲ್‌ ಹೌಸಿಂಗ್‌ ಬ್ಯಾಂಕ್‌ ಮೂಲಕ ₹20 ಸಾವಿರ ಕೋಟಿ ಗೃಹ ಸಾಲ
– ಗ್ರಾಮೀಣ ಭಾಗದ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರ ಸೇವೆ ದೊರೆಯಲು 5 ಸಾವಿರ ಸ್ನಾತಕೋತ್ತರ ಸೀಟ್‌ಗಳಲ್ಲಿ ಹೆಚ್ಚಳ
– ಜಾರ್ಖಂಡ್‌ ಮತ್ತು ಗುಜರಾತ್‌ನಲ್ಲಿ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಸ್ಥಾಪನೆ
– ಔಷಧ ಮತ್ತು ಸೌಂದರ್ಯವರ್ಧಕ ನಿಯಮಗಳಲ್ಲಿ ತಿದ್ದುಪಡಿ ತರುವ ಮೂಲಕ ಅಗತ್ಯ ಔಷಧಗಳು ಕಡಿಮೆ ದರದಲ್ಲಿ ಲಭ್ಯ
– ಹಿರಿಯ ನಾಗರಿಕರಿಗೆ ಆಧಾರ್‌ ಆಧಾರಿತ ಸ್ಮಾರ್ಟ್ ಕಾರ್ಡ್‌ ಮೂಲಕ ಆರೋಗ್ಯ ಮಾಹಿತಿ
– ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ₹31,920ಕ್ಕೆ ಹೆಚ್ಚಳ. ಅಲ್ಪ ಸಂಖ್ಯಾತರಿಗೆ ₹4195 ಕೋಟಿ. ಪರಿಶಿಷ್ಟ ಜಾತಿಗೆ ಮೀಸಲಾತಿ ಮೊತ್ತ ಶೇ.35ರಷ್ಟು ಹೆಚ್ಚಳ

* ಮೂಲಸೌಕರ್ಯ:
– ರಸ್ತೆ, ರೈಲ್ವೆ ಹಾಗೂ ಜಲಮಾರ್ಗದ ಸಂಪರ್ಕ ವ್ಯವಸ್ಥೆಗಾಗಿ ₹2.41 ಲಕ್ಷ ಕೋಟಿ
– 2017–18ನೇ ಸಾಲಿನಲ್ಲಿ ರೈಲ್ವೆ ಅಭಿವೃದ್ಧಿಗೆ ಒಟ್ಟು ₹1.31 ಲಕ್ಷ ಕೋಟಿ ಖರ್ಚಿನ ಅಂದಾಜು ಹಾಗೂ ಕೇಂದ್ರ ಸರ್ಕಾರದಿಂದ ₹51 ಸಾವಿರ ಕೋಟಿ ಮೀಸಲು
– ರೈಲು ಪ್ರಯಾಣಿಕರ ಸುರಕ್ಷತೆಗಾಗಿ 5 ವರ್ಷಗಳ ಅವಧಿಗೆ ₹1 ಲಕ್ಷ ಕೋಟಿ ‘ರಾಷ್ಟ್ರೀಯ ರೈಲು ಸಂರಕ್ಷಾ ಕೋಶ’
– 500 ರೈಲ್ವೆ ನಿಲ್ದಾಣಗಳನ್ನು ಅಂಗವಿಕಲ ಸ್ನೇಹಿಯಾಗಿಸು ಯೋಜನೆ
– ಐಆರ್‌ಸಿಟಿಸಿ ಮೂಲಕ ರೈಲ್ವೆ ಟಿಕೆಟ್‌ ಬುಕಿಂಗ್‌ಗೆ ಸೇವಾ ಶುಲ್ಕ ತೆರಿಗೆ ರದ್ದು
– 2019ರ ವೇಳೆಗೆ ಭಾರತೀಯ ರೈಲ್ವೆಯ ಎಲ್ಲಾ ಕೋಚ್‌ಗಳಲ್ಲಿ ಪರಿಸರ ಸ್ನೇಹಿ ಶೌಚಾಲಯ (Bio-toilet)
– 3,500 ಕಿ.ಮೀ. ರೈಲ್ವೆ ಮಾರ್ಗ ಕಾರ್ಯಾರಂಭ. ಕಳೆದ ವರ್ಷ 2,800 ಕಿ.ಮೀ. 25 ರೈಲ್ವೆ ನಿಲ್ದಾಣಗಳ ಅಭಿವೃದ್ಧಿ.
– 7 ಸಾವಿರ ರೈಲ್ವೆ ನಿಲ್ದಾಣಗಳಿಗೆ ಸೌರಶಕ್ತಿ ವ್ಯವಸ್ಥೆ
– ಹೊಸ ಮೆಟ್ರೋ ರೈಲು ನೀತಿ. ಹೆಚ್ಚು ಉದ್ಯೋಗ ಸೃಷ್ಟಿ. ಖಾಸಗಿ ಸಂಸ್ಥೆಗಳೊಂದಿಗೆ ಸಹಭಾಗಿತ್ವ
– ಹೆದ್ದಾರಿ ರಸ್ತೆ ಕಾರ್ಯಗಳಿಗೆ ₹64,900 ಕೋಟಿ.
– 2,000 ಕಿ.ಮೀ. ಕರಾವಳಿ ರಸ್ತೆ ಸಂಪರ್ಕ ಅಭಿವೃದ್ಧಿ
– 1.5 ಲಕ್ಷ ಗ್ರಾಮ ಪಂಚಾಯ್ತಿಗಳಿಗೆ ‘ಭಾರತ್‌ನೆಟ್‌’ ಯೋಜನೆ ಅಡಿ ಆಪ್ಟಿಕಲ್‌ ಫೈಬರ್‌ ಮೂಲಕ ಹೈಸ್ಪೀಡ್‌ ಬ್ರಾಡ್‌ಬ್ಯಾಂಡ್‌ ಸಂಪರ್ಕ
– ಎಲೆಕ್ಟ್ರಾನಿಕ್ಸ್‌ ಉತ್ಪಾದನೆಗಾಗಿ ₹745 ಕೋಟಿ ವೆಚ್ಚದಲ್ಲಿ ಎಂ–ಸಿಪ್ಸ್‌ ಮತ್ತು ಇಡಿಎಫ್‌ ಕಾರ್ಯಕ್ರಮ

* ಆರ್ಥಿಕ ವಲಯ:
– ಆರ್ಥಿಕ ವಲಯದ ಕಂಪ್ಯೂಟರ್‌ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್‌ ಸ್ಥಾಪನೆ
–ಸರ್ಕಾರಿ ಸ್ವಾಮ್ಯದ ಐಆರ್‌ಸಿಟಿಸಿ, ಐಆರ್‌ಎಫ್‌ಸಿ ಹಾಗೂ ಐರ್ಕಾನ್‌ ಸಂಸ್ಥೆಗಳು ಷೇರು ಮಾರುಕಟ್ಟೆ ಪ್ರವೇಶ
– ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ₹2.44 ಲಕ್ಷ ಕೋಟಿ ಗುರಿ.
* ಡಿಜಿಟಲ್‌ ಆರ್ಥಿಕತೆ:
– 125 ಲಕ್ಷ ಜನರಿಂದ ಭೀಮ್‌ ಆ್ಯಪ್‌ ಬಳಕೆ
– ಶೀಘ್ರದಲ್ಲಿ ಆಧಾರ್‌ ಪಾವತಿ ವ್ಯವಸ್ಥೆ ಪ್ರಾರಂಭ
– 2017ರ ಮಾರ್ಚ್‌ ವೇಳೆಗೆ 10 ಲಕ್ಷ ಪಿಒಎಸ್‌ ಕೇಂದ್ರಗಳ ಸ್ಥಾಪನೆಗೆ ಬ್ಯಾಂಕ್‌ಗಳ ಗುರಿ
– ₹3 ಲಕ್ಷಕ್ಕೂ ಅಧಿಕ ಮೊತ್ತದ ನಗದು ವಹಿವಾಟಿಗೆ ಅವಕಾಶವಿಲ್ಲ

* ಸಾರ್ವಜನಿಕ ಸೇವೆ:
– ಸರಕು ಮತ್ತು ಸೇವೆಗಳಿಗೆ ಸರ್ಕಾರದ ಇ–ಮಾರುಕಟ್ಟೆ ವ್ಯವಸ್ಥೆ
– ಮುಖ್ಯ ಅಂಚೆ ಕಚೇರಿಗಳಲ್ಲಿ ಪಾಸ್‌ಪೋರ್ಟ್ ಸೇವೆಗಳು
– ಸೇನಾ ಯೋಧರು ಮತ್ತು ಅಧಿಕಾರಿಗಳಿಗೆ ಒಂದೇ ವೇದಿಕೆಯಡಿ ಆನ್‌ಲೈನ್‌ ಮೂಲಕ ಪ್ರಯಾಣದ ಟಿಕೆಟ್‌ ಕಾಯ್ದಿರಿಸುವ ವ್ಯವಸ್ಥೆ

* ಕೊರತೆ ನಿರ್ವಹಣೆ:
– ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ₹4.11 ಲಕ್ಷ ಕೋಟಿ ಸಂಪನ್ಮೂಲ ವರ್ಗಾವಣೆ
– ಮೊದಲ ಬಾರಿಗೆ ಎಲ್ಲ ಸಚಿವಾಲಯ ಹಾಗೂ ಇಲಾಖೆಗಳ ಏಕೀಕರಿಸಿದ ಬಜೆಟ್‌
– 2017–18ನೇ ಸಾಲಿನಲ್ಲಿ ಶೇ.3.2 ವಿತ್ತೀಯ ಕೊರತೆ ಹಾಗೂ ಮುಂದಿನ ವರ್ಷದಲ್ಲಿ ಶೇ.3ರ ಗುರಿ
– ಕಂದಾಯ ಕೊರತೆ ಶೇ.2.3ರಿಂದ ಶೇ.2.1ಕ್ಕೆ ಇಳಿಕೆ
– ನವೆಂಬರ್ 8–ಡಿಸೆಂಬರ್‌ 30ರವರೆಗೂ 1.09 ಕೋಟಿ ಖಾತೆಗಳಲ್ಲಿ ₹2–₹80 ಲಕ್ಷ ಹಣ ಜಮೆ

* ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗಾಗಿ ₹50 ಕೋಟಿ ವಹಿವಾಟು ನಡೆಸುವ ಸಂಸ್ಥೆಗಳ ಆದಾಯ ತೆರಿಗೆ ಶೇ.25ಕ್ಕೆ ಇಳಿಕೆ

* ಚುನಾವಣಾ ನಿಧಿಯಲ್ಲಿ ಪಾರದರ್ಶಕತೆ:
– ಪ್ರತಿ ವ್ಯಕ್ತಿಯಿಂದ ಗರಿಷ್ಠ ₹2 ಸಾವಿರ ನಗದು ದಾನವನ್ನು ಪಕ್ಷ ಪಡೆಯಬಹುದು. ಡಿಜಿಟಲ್‌ ಅಥವಾ ಚೆಕ್‌ ಮೂಲಕ ಹಣ ಪಡೆಯಲು ಪಕ್ಷಗಳಿಗೆ ಅವಕಾಶ

* ಆದಾಯ ತೆರಿಗೆ:
– ₹2.5–₹5 ಲಕ್ಷ ಆದಾಯ ಹೊಂದಿರುವವರಿಗೆ ತೆರಿಗೆ ಶೇ.5ಕ್ಕೆ ಇಳಿಕೆ  ಮಾಡಲಾಗಿದೆ.
– ವೈಯಕ್ತಿಕ ಆದಾಯ ತೆರಿಗೆಯಲ್ಲಿ ಇಳಿಕೆ ಮಾಡಿರುವ ಕಾರಣದಿಂದ ₹15 ಸಾವಿರ ಕೋಟಿ ನಷ್ಟವಾಗಲಿದ್ದು, ಅದನ್ನು ಭರಿಸಲು ಹೆಚ್ಚುವರಿ ತೆರಿಗೆ ಪ್ರಕಟಿಸಲಾಗಿದೆ. ₹50 ಲಕ್ಷ–₹1 ಕೋಟಿ ಆದಾಯ ಹೊಂದಿರುವವರು ಶೇ.10ರಷ್ಟು  ಅಧಿಕ ಕರ ತೆರಬೇಕಾಗುತ್ತದೆ.
– ₹1 ಕೋಟಿಗೂ ಅಧಿಕ ಆದಾಯ ಹೊಂದಿರುವವರು ಶೇ.15ರಷ್ಟು ಅಧಿಕ ಕರ ಪಾವತಿಸಬೇಕು.
– 2015–16ನೇ ಸಾಲಿನಲ್ಲಿ 3.7 ಕೋಟಿ ಜನ ಆದಾಯ ತೆರಿಗೆ ಮರುಪಾವತಿ ಅರ್ಜಿ ಸಲ್ಲಿಸಿದ್ದು, 99 ಲಕ್ಷ ಜನ 2.5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
–ಹೊಸ ತೆರಿಗೆ ವ್ಯವಸ್ಥೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಕುರಿತು 2017ರ ಏಪ್ರಿಲ್‌ 1ರಿಂದ ಅರಿವು ಮೂಡಿಸುವ ಕಾರ್ಯಕ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT