ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವರಕವಿ ಬೇಂದ್ರೆ ಅನುಭವದ ಭಂಡಾರ’

Last Updated 2 ಫೆಬ್ರುವರಿ 2017, 5:58 IST
ಅಕ್ಷರ ಗಾತ್ರ

ಹಾರೂಗೇರಿ: ಅಂತರಂಗದ ಮೃದಂಗ ವನ್ನು ಬಿಡಿಸಿ, ಸರ್ವರ ಹೃದಯದಲ್ಲಿ ಗಾನ ಲಹರಿಯನ್ನು ಹರಿಸಿದ ವರಕವಿ ಅಂಬಿಕಾತನಯದತ್ತ ಡಾ.ದ.ರಾ. ಬೇಂದ್ರೆಯವರು ಅನುಭವದ ಭಂಡಾರ. ಬೇಂದ್ರೆಯವರ ಹಾಡುಗಳು ಕೇವಲ ಹಾಡುಗಳಾಗಿರದೇ ಮನದ ಮಾತುಗಳಾಗಿದ್ದವು ಎಂದು ಪ್ರೊ.ವಾಣಿ ಚೌಗಲಾ ಹೇಳಿದರು.

ಇಲ್ಲಿಯ ಪ್ರಗತಿಪರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಮಾಜಕಾರ್ಯ ಪದವಿ ಮಹಾ ವಿದ್ಯಾಲಯದಲ್ಲಿ ವರಕವಿ ಡಾ. ದ.ರಾ ಬೇಂದ್ರೆಯವರ 121ನೇ ಜನ್ಮ ದಿನಾಚರಣೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಬೇಂದ್ರೆ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯ ಪಠ್ಯ ಪುಸ್ತಕ ರಚನಾ ಸಮಿತಿ ಸದಸ್ಯ ಎಸ್.ಬಿ.ಕ್ಯಾಸ್ತಿ ಮಾತನಾಡಿ, ಬೇಂದ್ರೆಯವರ ಸಾಹಿತ್ಯ ಮನದ ಬೆಳದಿಂಗಳು. ಮಾತಿಗಿಂತ ಮೌನಕ್ಕೆ ಹೆಚ್ಚು ಶಕ್ತಿಯಿದ್ದು, ಅವರೊಬ್ಬ ಜಾತ್ಯಾತೀತ ಹಾಗೂ ಪ್ರಶ್ನಾತೀತ ಕವಿಯಾಗಿದ್ದರು. ಅವರನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಅವರ ವಿಮರ್ಶಾತ್ಮಕ ಕೃತಿಗಳನ್ನು ಓದಬೇಕು. ಬೇಂದ್ರೆಯವರ ಮಣ್ಣಿನ ಮಗ ಕೃತಿ ಸಾಂಸ್ಕೃತಿಕ ಬದುಕಿಗೆ ಬಹುದೊಡ್ಡ ಕೊಡುಗೆ ನೀಡಿದೆ ಎಂದು ಹೇಳಿದರು.

ಡಾ.ದ.ರಾ.ಬೇಂದ್ರೆಯವರ ಕವಿತೆಗಳು ಕಲ್ಪನೆಯಲ್ಲಿ ವಿಹರಿಸಿದವು ಗಳಲ್ಲ, ವೈಚಾರಿಕ ನೆಲೆಗಟ್ಟಿ ನಲ್ಲಿ ಜನ್ಮ ತಾಳಿದವು. ಅಂಬಿಕಾತನಯ ದತ್ತರ ಕಾವ್ಯ ಅನುಭವದ ಅಮೃತಕ್ಕೆ ಸಮಾನ ವಾದವು. ನಾಡಿಗೆ ಗಡಿಯುಂಟು, ನುಡಿಗೆ ಗಡಿ ಎಂಬುವುದಿಲ್ಲ. ಬೇಂದ್ರೆ ಅವರ ಕವಿತೆಗಳು ಮುತ್ತಿನ ಹಾರದಂತಿವೆ. ಅವರ ಕಾವ್ಯ, ನುಡಿ, ಭಾಷೆ, ಸಂಸ್ಕೃತಿಗಳ ಪರಂಪರೆಯಿಂದ ಕನ್ನಡದ ಸಾಹಿತ್ಯ ಕ್ಷೇತ್ರ ಶ್ರೀಮಂತ ವಾಗಿದೆ. ಬೇಂದ್ರೆಯವರು ನಾಡಿನ ಸಮಸ್ತ ಮನುಕುಲಕ್ಕೆ ಕನ್ನಡದ ಕಾವ್ಯ ಹಾಗೂ ಸಾಹಿತ್ಯಿಕ ಬೆಳಕು ಚೆಲ್ಲಿದ ಧೀಮಂತ ಶಬ್ದಗಾರುಡಿಗ ಎಂದು ಯುವ ಸಾಹಿತಿ ಪ್ರೊ. ಜಯವೀರ ಕಾಂಬಳೆ ಅಭಿಮತ ವ್ಯಕ್ತಪಡಿಸಿದರು.

ಬೇಂದ್ರೆಯವರ ಕಾವ್ಯ ಮತ್ತು ಸಾಹಿತ್ಯ ಕೃತಿಗಳಿಗೆ ಪುಷ್ಪವನ್ನು ಅರ್ಪಿಸು ವುದರೊಂದಿಗೆ ಕಾರ್ಯಕ್ರಮ ಉದ್ಘಾ ಟಿಸಲಾಯಿತು. ಶಿಕ್ಷಣ ಸಂಯೋಜಕ ಸುಖದೇವ ಕಾಂಬಳೆ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ವಿಭಾಗದ ಅಧ್ಯಕ್ಷ  ಪ್ರೊ. ಪರಮೇಶ್ವರ ಪೂಜೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ರಾಯಬಾಗ ತಾಲ್ಲೂಕು ಶಿಕ್ಷಣ ಸಂಯೋಜಕ ರವೀಂದ್ರ ಪಾಟೀಲ, ಪ್ರಧಾನ ಶಿಕ್ಷಕ ಭರತೇಶ ಆಲಗೂರ, ಪ್ರೊ.ಬಿ.ಎ.ಕೊಂಡಾಳಿ, ಪ್ರೊ.ಯು.ಎಂ. ಪಕಾಲೆ, ಪ್ರೊ.ಎಂ.ಜೆ.ಸದಲಗಿ, ಪ್ರೊ.ರಣ ಧೀರ ಶಿಂಗಿ, ಪ್ರೊ.ರಾಕೇಶ ಕಾಂಬಳೆ, ಪ್ರೊ.ಎಂ.ವೈ.ದೊಡಮನಿ ಹಾಜರಿದ್ದರು. ವಿದ್ಯಾರ್ಥಿ ಕಿರಣ ಖವಟಕೊಪ್ಪ ಸ್ವಾಗತಿಸಿದರು. ಬಸವಪ್ರಭು ಕೊಕಟ ನೂರ ಕಾರ್ಯಕ್ರಮ ನಿರೂಪಿಸಿದರು. ಬಾಳು ಸಾಲೋಟಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT