ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಪಕ್ಷಿಗಳ ವಾಸಸ್ಥಾನ ಉಳಿಸಲು ಮನವಿ

ಪಕ್ಷಿಗಳ ವೈಜ್ಞಾನಿಕ ದಾಖಲಿಕರಣ ಅಭಿಯಾನದಲ್ಲಿ ಕಂಡು ಬಂದ ಖಗ ಸಂಕುಲ
Last Updated 2 ಫೆಬ್ರುವರಿ 2017, 6:05 IST
ಅಕ್ಷರ ಗಾತ್ರ

ಹಳಿಯಾಳ: ತಾಲ್ಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅರಣ್ಯ ಪಕ್ಷಿಗಳ ವಾಸಕ್ಕೆ ಹಾಗೂ ವಂಶಾಭಿವೃದ್ದಿಗೆ ಅತ್ಯಂತ ಪ್ರಶಸ್ತ ನೀಯವಾಗಿದ್ದು,  ಪಟ್ಟಣದ ಸುತ್ತಮುತ್ತ ಲಿನ ಕೆರೆ ಹಾಗೂ ಪರಿಸರವನ್ನು ರಕ್ಷಿಸಿ ಕೊಂಡು ಸಾಗಿದರೇ ಪಕ್ಷಿಗಳ ಜೀವ ಸಂಕುಲನಗಳ ಪ್ರಮಾಣ ಹೆಚ್ಚಾಗಲು ಸಾಧ್ಯ.  ಆ ನಿಟ್ಟಿನಲ್ಲಿ ಪಕ್ಷಿಗಳ ಆಕರ್ಷಿತ ಕೇಂದ್ರವಾದ ಹಳಿಯಾಳ ತಾಲ್ಲೂಕಿನ ಪರಿಸರ ಕಾಪಾಡಿಕೊಂಡು ಹೋಗು ವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಕೈಗಾ ಬರ್ಡರ್ಸ್‌ ಸಮೂಹದ ಪಕ್ಷಿ ತಜ್ಞ ಕೆ.ರಾಜೀವ್ ಹೇಳಿದರು.

ಈಚೆಗೆ ಹಳಿಯಾಳ ಪಟ್ಟಣ ಹಾಗೂ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಕೈಗಾ ಬರ್ಡರ್ಸ್‌ ಸಮೂಹ, ಕ್ರೀಡಾ ಭವನ ಹಳಿಯಾಳ, ಅರಣ್ಯ ಇಲಾಖೆ ಹಾಗೂ ಹಾರ್ನ ಬಿಲ್ ರೇಸಾರ್ಟ್‌ ವತಿಯಿಂದ  ಆಯೋಜಿಸಿದ್ದ ಖಗ ಸಂಕುಲದ ವೈಜ್ಞಾನಿಕ ದಾಖಲೀಕರಣ ಅಭಿಯಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದರು.

ಒಟ್ಟೂ 40 ಪಕ್ಷಿ ವೀಕ್ಷಕರು ಸತತ 6 ಗಂಟೆಗಳ ಕಾಲಪಕ್ಷಿ ಗಣತಿಯನ್ನು ಪಟ್ಟಣದ ಕೋಟೆ ಕೆರೆ, ಕೋಟೆ ಅರಣ್ಯ, ಮರಡಿ ಗುಡ್ಡ, ತಾಲ್ಲೂಕು ಕ್ರೀಡಾಂಗಣ, ಕ್ರೀಡಾಭವನ ಹಾಗೂ ಅರಣ್ಯ ಇಲಾಖೆ ಸುತ್ತಮುತ್ತಲಿನ ಪ್ರದೇಶದಲ್ಲಿ ಪಕ್ಷಿ ಗಣತಿ ಮಾಡಲಾಯಿತು.

ಪಕ್ಷಿ ವೀಕ್ಷಣೆಯ ಸಮಯದಲ್ಲಿ ಒಟ್ಟು 117 ಪಕ್ಷ ಪ್ರಭೇದಗಳನ್ನು ಗುರುತಿಸಲಾ ಯಿತು. ವಿಶೇಷವಾಗಿ ಚಳಿಗಾಲದ ವಲಸೆ ಹಕ್ಕಿಗಳಾದ ಚಲುಕಬಾತು. ಸೋಲಾರಿ ಹಕ್ಕಿ, ಬಿಳಿಹುಬ್ಬಿನ ಬಾತು, ಸೆಳವ, ಸಣ್ಣ ಸಿಪಾಯಿ ಕೊಕ್ಕರೆ, ಅಡವಿ ಗದ್ದೆಗೊರವ, ಬೀಸಣಿಕೆ ಬಾಲದ ಉಲ್ಲಂಕಿ, ಸೂಜಿಬಾಲದ ಉಲ್ಲಂಕಿ, ಜೋರೆಜಾಣ, ಹಳದಿ ಸಿಪಿಲೆ, ಅಡವಿ ಸಿಪಿಲೆ ಹಾಗೂ ಪಶ್ಚಿಮ ಘಟ್ಟದಲ್ಲಿ ಅಪರೂಪವಾಗಿ ಕಾಣಬರುವ ರಾಜ ಪಕ್ಷಿ, ಕಂದು ಮರ ಕುಟಿಗ, ಕೆಂಪು ಕೊರಳಿನ ನೊಣಹಿಡುಕ, ಚಿತ್ರಪಕ್ಷ, ಕಂದು ತಲೆಯ ನೆಲಸಿಳ್ಳಾರ, ಕೆಂಪುಕತ್ತಿನ ಕಂಚು ಕುಟಿಗ, ಮಲೆದಾಸ ಮಂಗಟ್ಟೆ ಪಕ್ಷಿಗಳು ಕಂಡುಬಂದು ಗುರುತಿಸಲ್ಪಟ್ಟವು.

ಪಕ್ಷಿ ತಜ್ಞರಾದ ಬಿ.ಮೋಹನದಾಸ, ಕೆ.ಹರೀಶ, ದಿನೇಶ ಗಾಂವಕರ, ಎಸ್.ಪಿ. ಕಾಮತ್, ಅನಂತ ಉಪಾಧ್ಯಾಯ, ಶರತ ಆನೆಗುಂದಿ, ಹಾರ್ನ್‌ಬಿಲ್ ರೆಸಾರ್ಟಿನ ಶ್ರೀಪತಿ ಭಟ್ಟ, ಡಾ. ಶೀಲಾ ರಜತ, ಮಹಾಂತೇಶ ಓಶಿಮಠ, ಉದಯ ಜಾಧವ, ಪ್ರಶಾಂತ ನಾಯ್ಕ, ಶ್ರೀಪಾದ ಮಾನಗೆ, ಅನಿಲ ಲಾಡ್, ಮಂಜುನಾಥ ಪಂಡಿತ, ಸುಭಾಷ ಧಾರವಾಡಕರ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT