ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿಲ್ಪಕಲೆ ಭಾರತ ಸಂಸ್ಕೃತಿಯ ಪ್ರತಿಬಿಂಬ’

ರಾಜ್ಯಮಟ್ಟದ ಜನಪರ ಸಿಮೆಂಟ್ ಶಿಲ್ಪಕಲಾ ಶಿಬಿರದ ಸಮಾರೋಪ
Last Updated 2 ಫೆಬ್ರುವರಿ 2017, 6:08 IST
ಅಕ್ಷರ ಗಾತ್ರ

ಕಾರವಾರ: ಶಿಲ್ಪಕಲೆಗಳು ಭಾರತದ ಸಂಸ್ಕೃತಿಯ ಪ್ರತಿಬಿಂಬ. ಆದರೆ ಇಂತಹ ಕಲೆಗಳು ಅಳಿವಿನಂಚಿನಲ್ಲಿರುವುದು ವಿಷಾದನೀಯ ಎಂದು ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷ ಮಹಾದೇವಪ್ಪ ಶಿಲ್ಪಿ ಹೇಳಿದರು.

ಬುಧವಾರ ಇಲ್ಲಿನ ಕಡಲತೀರದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಸಿಮೆಂಟ್‌ ಶಿಲ್ಪಕಲಾ ಶಿಬಿರದ ಸಮಾ ರೋಪ ಸಮಾರಂಭದಲ್ಲಿ ಅವರು ಮಾತ ನಾಡಿದರು.
ಶಿಲ್ಪಕಲಾ ಅಕಾಡೆಮಿಗೆ ಸರ್ಕಾರ ದಿಂದ ಹೆಚ್ಚೆಚ್ಚು ಅನುದಾನ ದೊರೆತರೆ ಕಲಾವಿದರಿಗೆ ಹೆಚ್ಚಿನ ಅವಕಾಶ ಹಾಗೂ ಪ್ರೋತ್ಸಾಹ ನೀಡಲು ಸಾಧ್ಯವಾಗುತ್ತದೆ. ಕಲಾವಿದ ಅಳಿದರೂ ಆತನು ತಯಾ ರಿಸಿದ ಶಿಲ್ಪಕಲಾಕೃತಿ ನೂರಾರು ವರ್ಷ ಇರುತ್ತವೆ ಹಾಗೂ ಆತನ ಹೆಸರು ಚಿರಾಯು ಆಗಿರುತ್ತದೆ ಎಂದರು.

ಹಿರಿಯ ಶಿಲ್ಪಕಲಾವಿದ ದೇವಿದಾಸ್‌ ಡಿ.ಶೇಟ್‌ ಗುಡಿಗಾರ್‌ ಮಾತನಾಡಿ, ಇಂದಿನ ಪರಿಸ್ಥಿತಿಯಲ್ಲಿ ಶಿಲ್ಪಕಲಾಕೃತಿ ಯನ್ನು ತಯಾರಿಸುವುದು ಅಷ್ಟು ಸುಲಭ ವಿಲ್ಲ. ಕಲಾಕೃತಿಗೆ ಕಟ್ಟಿಗೆ ಹಾಗೂ ಕಲ್ಲಿನ ಅಭಾವ ಇದೆ. ಮೂರ್ತಿ ತಯಾರಿಸುವ ಕಲಾಕಾರನಿಗೆ ಬೆಲೆ ಇಲ್ಲದಂತಾಗಿದೆ. ಇದೀಗ ಸಿಮೆಂಟ್‌ ಶಿಲ್ಪಕಲಾಕೃತಿಗೆ ಸ್ವಲ್ಪ ಬೇಡಿಕೆ ಬಂದಿದೆ. ಕಲಾವಿದ ಕೇವಲ ಪ್ರದರ್ಶನಕ್ಕಾಗಿ ಶಿಲ್ಪವನ್ನು ತಯಾರು ಮಾಡದೇ ಅವರ ಜೀವ ನೋಪಾಯ ಕ್ಕಾಗಿ ಕಲೆಯನ್ನೇ ಆಧಾರ ವಾಗಿಸಿ ಕೊಂಡಿದ್ದಾನೆ. ಕಲಾವಿದರಿಗೆ ಹೆಚ್ಚಿನ ಅವಕಾಶ  ದೊರೆಯಬೇಕು ಎಂದರು.

ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಮಾತನಾಡಿ, ಬೇರೆ ಕಡೆಗಳಲ್ಲಿ ಇರುವ ಬುಡಕಟ್ಟು ಜನರು ಮುಖ್ಯವಾಹಿನಿಗೆ ಬಂದಿದ್ದಾರೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಜನರು ಅರಣ್ಯದ ಮೇಲೆ ಅವಲಂಬಿತರಾಗಿದ್ದಾರೆ. ಪಾರಂ ಪರಿಕವಾಗಿ ಬಂದ ಅವರ ಆಚಾರ, ವಿಚಾರ, ಜೀವನ ಶೈಲಿ ವಿಭಿನ್ನವಾಗಿದ್ದು, ಇವುಗಳನ್ನು ಕಲಾವಿದರು ತಮ್ಮ ಶಿಲ್ಪ ಕಲಾಕೃತಿಗಳಲ್ಲಿ ಮೂಡಿಸಿದ್ದಾರೆ. ಇದಕ್ಕೆ ಬಣ್ಣದ ಲೇಪಿಸಿದರೆ ಮತ್ತಷ್ಟು ವರ್ಣ ರಂಜಿತವಾಗಿ ಕಾಣುತ್ತವೆ. ಇವುಗಳನ್ನು ಉದ್ದೇಶಿತ ರಾಕ್‌ಗಾರ್ಡನ್‌ ನಲ್ಲಿ ಇರಿಸ ಲಾಗುವುದು ಎಂದರು.

ಪ್ರಮಾಣ ಪತ್ರ ವಿತರಣೆ: 12 ದಿನಗಳ ಕಾಲ ನಡೆದ ಶಿಲ್ಪಕಲಾ ಶಿಬಿರದಲ್ಲಿ ಒಟ್ಟು 25 ಕಲಾವಿದರು ಭಾಗವಹಿಸಿದ್ದರು. ಎಲ್ಲರಿಗೂ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ವಿತರಿಸಲಾಯಿತು. ಅಕಾಡೆಮಿ ರಿಜಿಸ್ಟ್ರಾರ್ ಇಂದ್ರಮ್ಮ ಎಚ್‌.ವಿ., ಸದಸ್ಯ ಸಂಚಾಲಕ ಡಾ.ವಿರೂ ಪಾಕ್ಷ ಬಡಿಗೇರ, ಹೆಚ್ಚುವರಿ ಜಿಲ್ಲಾಧಿ ಕಾರಿ ಎಚ್.ಪ್ರಸನ್ನ, ವಿಶೇಷ ಭೂ ಸ್ವಾಧೀ ನಾಧಿಕಾರಿ ಸದಾಶಿವ ಪ್ರಭು, ಉಪವಿಭಾ ಗಾಧಿಕಾರಿ ಶಿವಾನಂದ ಕರಾಳೆ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಶಫಿ ಸಾದುದ್ದೀನ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT