ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮಿಶ್ರ ಸರ್ಕಾರಕ್ಕೆ ಅವಕಾಶ ಕೊಡದಿರಿ

ಜೆಡಿಎಸ್‌ ನೂತನ ಜಿಲ್ಲಾ ಘಟಕಕ್ಕೆ ಚಾಲನೆ, ಕಾರ್ಯಕರ್ತರ ಸಮಾವೇಶ; ಎಚ್‌ಡಿಕೆ ಸಲಹೆ
Last Updated 2 ಫೆಬ್ರುವರಿ 2017, 6:14 IST
ಅಕ್ಷರ ಗಾತ್ರ

ಬಳ್ಳಾರಿ: ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಸಮ್ಮಿಶ್ರ ಸರ್ಕಾರಕ್ಕೆ ಅವಕಾಶ ಮಾಡಬಾರದು ಎಂದು ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಮನವಿ ಮಾಡಿದರು.

ನಗರದಲ್ಲಿ ಬುಧವಾರ ನಡೆದ ಜೆಡಿಎಸ್‌ ಕಾರ್ಯಕರ್ತರ ಸಮಾವೇಶ, ನೂತನ ಜಿಲ್ಲಾ ಘಟಕಕಕ್ಕೆ ಚಾಲನೆ ಹಾಗೂ ಸದಸ್ಯತ್ವ ನೋಂದಣಿ ಅಭಿ ಯಾನಕ್ಕೆ ಚಾಲನೆ ನೀಡಿ ಮಾತ ನಾಡಿದ ಅವರು, ಜಿಲ್ಲೆಯ ಮಣ್ಣನ್ನು ವಿದೇಶಗಳಿಗೆ ಮಾರಿದವರ ಹಣಕ್ಕೆ ಮತವನ್ನು ಮಾ ರಿಕೊಳ್ಳಬೇಡಿ. ಕಳೆದ ಬಾರಿ ತಿರಸ್ಕರಿಸಿ ದಂತೆ ಪಕ್ಷವನ್ನು ಈ ಬಾರಿಯೂ ತಿರಸ್ಕರಿ ಸದೆ ಬಹುಮತದಿಂದ ಗೆಲ್ಲುವಂತೆ ಮಾಡಿ ಎಂದು ಕೋರಿದರು.

ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಮತ್ತು ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರದ ನಿರ್ಧಾರಗಳನ್ನು ಟೀಕಿಸಲು ತಮ್ಮ ಭಾಷಣದ ಹೆಚ್ಚು ಸಮಯವನ್ನು ವಿನಿಯೋಗಿಸಿದ ಅವರು, ಜನಪರವಾರ ಹಲವು ಯೋಜನೆಗಳನ್ನು ಜಾರಿಗೆ ತರುವ ತಮ್ಮ ಭರವಸೆಯನ್ನು ಕಳೆದ ಚುನಾವಣೆಯ ಸಂದರ್ಭದಲ್ಲಿ ಮತದಾ ರರು ನಂಬಲಿಲ್ಲ ಎಂದು ತೀವ್ರ ವಿಷಾದ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ತೀವ್ರ ಬರಗಾಲವಿರುವ ಸನ್ನಿವೇಶವನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಸಿ.ಎಂ ಕಂದಾಯ ಸಚಿವರು ನೀಡುವ ಅಂಕಿ– ಅಂಶ ಭಿನ್ನವಾಗಿದ್ದು ಗೊಂದಲ ಮೂಡಿಸುತ್ತಿವೆ ಎಂದು ಆರೋಪಿಸಿದರು.

ನೋಟು ರದ್ದತಿಯಿಂದ ದೇಶದ ಜನಕ್ಕೆ ಒಳ್ಳೆಯ ದಿನಗಳು ಬರಬಹುದು ಎಂಬ ನಂಬಿಕೆಯಿಂದ ಕೇಂದ್ರ ನಿಲುವನ್ನು ಜೆಡಿಎಸ್‌ ಕೂಡ ಬೆಂಬಲಿ ಸಿತ್ತು. ಆದರೆ ಅಂಥದ್ದೇನೂ ಆಗಲಿಲ್ಲ. ಶ್ರೀಮಂತರನ್ನು ಬಡವರ ಮನೆಮುಂದೆ ಸಾಲು ನಿಲ್ಲಿಸುವ ಪ್ರಧಾನಿ ನರೇಂದ್ರ ಮೋದಿ ಮಾತು ಜಾರಿಗೆ ಬರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದರೆ, ಸಹಕಾರ ಬ್ಯಾಂಕ್‌ಗಳಲ್ಲಿ ಇರುವ ರೈತರ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ರಾಜ್ಯದ ಕಾಂಗ್ರೆಸ್‌ ಸರ್ಕಾರ ಹೇಳುತ್ತದೆ. ಸಾಲ ಮನ್ನಾ ವಿಚಾರದಲ್ಲಿ ಮೊದಲು ನಿರ್ಧಾರ ಕೈಗೊಳ್ಳದೆ ಕೇಂದ್ರದ ಕಡೆಗೆ ನೋಡು ತ್ತಿರುವ ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಅನುಕಂಪ ಇಲ್ಲ ಎಂದು ದೂರಿದರು.

ಮುಖಂಡರಾದ ಸೈಯದ್‌ ಮೊಯ್ದಿನ್‌ ಅಲ್ತಾಫ್, ಬಂಡೆಪ್ಪ ಕಾಶೆಂಪುರ, ವೆಂಕಟಗೌಡ ನಾಡಗೌಡ ಮಾತನಾಡಿದರು. ಜಿಲ್ಲಾ ಘಟಕದ ನೂತನ ಅಧ್ಯಕ್ಷ ಕೆ.ಶಿವಪ್ಪ  ಅವರಿಗೆ ನಿಕಟಪೂರ್ವ ಅಧ್ಯಕ್ಷ ಕುಡಿತಿನಿ ಶ್ರೀನಿವಾಸ್‌ ಪಕ್ಷದ ಬಾವುಟ ನೀಡಿ ಅಧಿಕಾರ ಹಸ್ತಾಂತರಿಸಿದರು. ಯುವ ಘಟಕದ ಕಾರ್ಯದರ್ಶಿ ವೈ. ಗೋಪಾಲ್‌, ಪಿ.ಎಸ್‌. ಸೋಮಲಿಂಗನ ಗೌಡ, ಕೋರ್‌ ಕಮಿಟಿ ಸದಸ್ಯ ರಾದ ಮೀನಳ್ಳಿ ತಾಯಣ್ಣ, ಹೇಮಯ್ಯ ಮತ್ತು ಕೊಟ್ರೇಶ್‌, ಜಿಲ್ಲೆಯ ವಿವಿಧ ಭಾಗಗ ಳಿಂದ ಬಂದಿದ್ದ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT