ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಜ್ಞಾನಿಕ ಕಸ ವಿಂಗಡಣೆ: ಶಿವಮೊಗ್ಗಕ್ಕೆ ಸದಸ್ಯರು

ಚಿಕ್ಕಮಗಳೂರು: ನಗರಸಭೆಯ ವಿಶೇಷ ತುರ್ತು ಸಭೆಯಲ್ಲಿ ನಿರ್ಧಾರ
Last Updated 2 ಫೆಬ್ರುವರಿ 2017, 6:39 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಶಿವಮೊಗ್ಗದಲ್ಲಿ ಖಾಸಗಿ ಕಂಪೆನಿ ರಾಮ್ಕಿ ಕಸ ವಿಂಗಡಣೆ ಮತ್ತು ವಿಲೇವಾರಿ ನಿರ್ವಹಿಸುತ್ತಿರುವ ವಿಧಾನ ಪರಿಶೀಲಿಸಲು ನಗರಸಭೆ ಸದಸ್ಯರು ಶೀಘ್ರದಲ್ಲಿಯೇ ಅಲ್ಲಿಗೆ ಭೇಟಿ ನೀಡಿ ವೀಕ್ಷಣೆ ಮಾಡಲಿದ್ದಾರೆ. ರಾಮ್ಕಿ ಕಂಪೆನಿ ಅನುಸರಿಸುತ್ತಿರುವ ವೈಜ್ಞಾನಿಕ ವಿಧಾನಗಳನ್ನು ನಗರದಲ್ಲೂ ಅಳವಡಿ ಸಿಕೊಳ್ಳಲು ಎಲ್ಲರ ಸಹಕಾರ ಅಗತ್ಯವಿದೆ’ ಎಂದು ನಗರಸಭೆ ಅಧ್ಯಕ್ಷೆ ಕವಿತಾ ಶೇಖರ್‌ ತಿಳಿಸಿದರು.

ನಗರಸಭೆ ಸಭಾಂಗಣದಲ್ಲಿ ತಾಲ್ಲೂ ಕಿನ ಇಂದಾವರ ಗ್ರಾಮದ ಕಸ ವಿಲೇವಾರಿ ಸಮಸ್ಯೆ ಹಾಗೂ ನಗರಕ್ಕೆ ನೀರು ಪೂರೈಕೆ ಕುರಿತಂತೆ ಬುಧವಾರ ಏರ್ಪಡಿಸಿದ್ದ ‘ವಿಶೇಷ ತುರ್ತು ಸಭೆ’ಯಲ್ಲಿ ಅವರು ಮಾತನಾಡಿದರು.

ತ್ಯಾಜ್ಯ ನಿರ್ವಹಣೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು 2 ಖಾಸಗಿ ಕಂಪೆನಿಗಳ ಜತೆ ಚರ್ಚಿಸಿದ್ದಾರೆ. ಎರಡೂ ಕಂಪೆನಿ ಗಳು ಶಿವಮೊಗ್ಗದಲ್ಲಿ ವೈಜ್ಞಾನಿಕ ವಿಧಾ ನದಿಂದ ಕಸ ವಿಂಗಡಿಸುತ್ತಿವೆ. ಸದಸ್ಯ ರೆಲ್ಲರೂ ಒಮ್ಮೆ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಜಿಲ್ಲೆಯಲ್ಲೂ ವೈಜ್ಞಾನಿಕ ಕಸ ವಿಂಗಡಣೆಗೆ ಮುಂದಾಗ ಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. 

ಸದಸ್ಯ ಹಿರೆಮಗಳೂರು ಪುಟ್ಟಸ್ವಾಮಿ ಮಾತನಾಡಿ, ಎಷ್ಟು ದಿನ ಜಿಲ್ಲಾಧಿಕಾರಿ ಹಾಗೂ ಪೊಲೀಸ್‌್ ವರಿಷ್ಠಾಧಿಕಾರಿಗಳು ನಗರಸಭೆ ಸ್ವಚ್ಛತೆಯ ನಿರ್ವಹಣೆ ಮಾಡು ತ್ತಾರೆ. ಯಾವ, ಯಾವ ಕೆಲಸಗಳಿಗೆ ಎಷ್ಟು ಹಣ ವ್ಯಯ ಮಾಡಲಾಗಿದೆ? ಎಷ್ಟು ಅನುದಾನ ಬಂದಿದೆ ಎನ್ನುವ ಮಾಹಿತಿ ಸಿಗುತ್ತಿಲ್ಲ. ‘ನಗರಸಭೆಯಲ್ಲಿ ಹಣ ಕಸ ತಿನ್ನುತ್ತಿದೆಯೋ ಅಥವಾ ಕಸವೇ ಹಣವನ್ನು ತಿನ್ನುತ್ತಿದೆಯೋ’ ತಿಳಿಯು ತ್ತಿಲ್ಲ. ನಗರಸಭೆಯ ಪಾರದರ್ಶಕ ಆಡಳಿ ತದ ಬಗ್ಗೆ ಅಧ್ಯಕ್ಷರು ಒಂದು ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ನಗರ ಸ್ವಚ್ಛತೆ ನಿರ್ವಹಿ ಸುತ್ತಿರುವ ಕಾರ್ಮಿಕರು ಹೆಚ್ಚಿನ ವೇತನಕ್ಕೆ ಪಟ್ಟು ಹಿಡಿದಿದ್ದಾರೆ. ಕಸ ನಿರ್ವಹಣೆಗೆ ಗಂಟೆ ವಾಹನಗಳಿಲ್ಲ. ಈ ಬಗ್ಗೆ ನಗರಸಭೆ ಗಮನಹರಿಸಬೇಕು ಎಂದು ಆಗ್ರಹಿಸಿದರು. ನಗರಸಭೆ ಸದಸ್ಯ ಎಚ್.ಡಿ.ತಮ್ಮಯ್ಯ ಮಾತನಾಡಿ, ನಗರ ಸ್ವಚ್ಛತೆ ವಿಚಾರದಲ್ಲಿ ನಗರಸಭೆಗೆ ನಾಚಿಕೆಯಾಗಬೇಕು. ಇದರಲ್ಲಿ ಎಲ್ಲ ಸದಸ್ಯರ ಪಾಲು ಇದೆ. ಮನೆ, ಮನೆಯಲ್ಲಿ ಕಸ ಸಂಗ್ರಹಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಆದರೆ, ವಿಂಗಡಿಸುವಲ್ಲಿ ಮಾತ್ರ ವಿಫಲವಾ ಗಿದ್ದೇವೆ ಎಂದರು.

ನಗರಸಭೆ ಪರಿಸರ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ವಚ್ಛತೆ ಯಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿಲ್ಲ. ಆಟೊ, ಫ್ಲೆಕ್ಸ್‌, ಜಾಹೀರಾತುಗಳಲ್ಲಿ ನೀಡಿದ ಸಂದೇಶಗಳು ಪ್ರಯೋಜನಕ್ಕೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬರಗಾಲದ ಹಿನ್ನೆಲೆಯಲ್ಲಿ  ನೀರಿಗೆ ಜಿಲ್ಲೆಯ ಜನತೆ ಪರದಾಡು ತ್ತಿದ್ದಾರೆ. ಯಗಚಿ ಜಲಾಶಯದಿಂದ ಪೋಲಾಗುತ್ತಿರುವ ನೀರನ್ನು ತಡೆಯಿರಿ. ಹಿರೇಮಗಳೂರಿನ ಮುಖ್ಯ ಕೊಳವೆ ಯಲ್ಲಿ ನೀರು ವ್ಯರ್ಥವಾಗುತ್ತಿದೆ ಎಂದರು.

ಸದಸ್ಯ ದೇವರಾಜ ಶೆಟ್ಟಿ ಮಾತ ನಾಡಿ, ಇಂದಾವರ ಕಸ ವಿಲೇವಾರಿ ಘಟಕದ ಸಮಸ್ಯೆ ನಗರಸಭೆಗೆ ನುಂಗಲಾರದ ತುತ್ತಾಗಿದೆ. ಕುಡಿಯುವ ನೀರು ವಿಷವಾಗುತ್ತಿದೆ, ಜಾನುವಾ ರುಗಳು ಸಾಯುತ್ತಿವೆ ಎಂದು ಜಿಲ್ಲಾಧಿಕಾ ರಿಗಳ ಬಳಿ ಗ್ರಾಮಸ್ಥರು ಅಳಲು ಹೇಳಿಕೊ ಳ್ಳುತ್ತಿದ್ದಾರೆ ಎಂದು ಸಭೆಯ ಗಮನ ಸೆಳೆದರು. ಪ್ರತಿಯೊಬ್ಬರು ವೈಜ್ಞಾನಿಕವಾಗಿ ಹಸಿ ಮತ್ತು ಒಣ ಕಸಗಳಾಗಿ ವಿಂಗಡಿಸದಿ ರುವುದೇ ಇದಕ್ಕೆ ಕಾರಣ. ಕಸ ವಿಂಗಡಣೆ ಯನ್ನು ಖಾಸಗಿ ಕಂಪೆನಿಗೆ ವಹಿಸಿ ನಗರದ ಕಸದ ಸಮಸ್ಯೆಗೆ ಇತಿಶ್ರೀ ಹಾಡಬೇಕು ಎಂದು ಒತ್ತಾಯಿಸಿದರು.

‘ನನ್ನ ವಾರ್ಡ್‌ನಲ್ಲಿ ನಗರಸಭೆ ಎಂಜಿನಿಯರ್‌ಗಳು ಹಲವು ಕಾಮಗಾ ರಿಗಳಿಗೆ ನಕಲಿ ಬಿಲ್‌ ಸೃಷ್ಟಿಸಿದ್ದಾರೆ. ಒಂದು ಕೊಳವೆ ಬಾವಿಗೆ ₹1.79 ಲಕ್ಷ ಬಿಲ್‌ ಬರೆದಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು’ ಎಂದು ಸದಸ್ಯ ಸುಧೀರ್‌ ಆಗ್ರಹಿಸಿದರು. ನಗರಸಭೆ ಉಪಾಧ್ಯಕ್ಷ ರವೀಂದ್ರ ಪ್ರಭು, ಆಯುಕ್ತ ಶಿವಪ್ರಸಾದ್‌ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT