ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೇಶನಕ್ಕೆ ಆಗ್ರಹ: ಗ್ರಾಮ ಪಂಚಾಯಿತಿಗೆ ಮುತ್ತಿಗೆ

Last Updated 2 ಫೆಬ್ರುವರಿ 2017, 6:52 IST
ಅಕ್ಷರ ಗಾತ್ರ

ದೇವನಹಳ್ಳಿ: ಹತ್ತಾರು ವರ್ಷಗಳಿಂದ ನಿವೇಶನ ನೀಡುವಲ್ಲಿ ಗ್ರಾಮ ಪಂಚಾಯಿತಿ ವಿಫಲವಾಗಿದೆ ಎಂದು ಆಗ್ರಹಿಸಿ ಹತ್ತು ಗ್ರಾಮಗಳ ಸ್ಥಳೀಯರು ತಾಲ್ಲೂಕಿನ ವಿಶ್ವನಾಥಪುರ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿದರು.

ಪಂಚಾಯಿತಿ ಸದಸ್ಯ ಕೆ.ಸುಬ್ರಮಣ್ಯ ಮತ್ತು ಮಧು ಮಾತನಾಡಿ, ವಿಶ್ವನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬೊಮ್ಮವಾರ ಸರ್ವೆ ನಂಬರ್‌ 36 ರಲ್ಲಿನ ಗೋಮಾಳದ ಜಾಗದಲ್ಲಿ ಬೊಮ್ಮವಾರ ಗ್ರಾಮಕ್ಕೆ ಮಾತ್ರ ಮೀಸಲು ಮಾಡಬಾರದು ಎಂದರು.

86.20 ಎಕರೆ ಜಾಗದಲ್ಲಿ ಕನಿಷ್ಠ 30 ಎಕರೆ ಪ್ರದೇಶವನ್ನು ಕಾಯ್ದಿರಿಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹತ್ತು ಗ್ರಾಮಗಳಲ್ಲಿರುವ ಕಡುಬಡವರಿಗೆ ನಿವೇಶನ ಹಂಚಿಕೆಯಾಗಬೇಕು ಗ್ರಾಮ ಪಂಚಾಯಿತಿ ಸರ್ವಸದಸ್ಯರ ಸಭೆಯ ನಿರ್ಣಯದಂತೆ ತೀರ್ಮಾನ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಗ್ರಾಮ ಪಂಚಾಯಿತಿ ಸದಸ್ಯೆ ರಾಧಾ ಲೋಕೇಶ್‌ ಮತ್ತು ಲತಾ ರಾಮಶಂಕರ ರೆಡ್ಡಿ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಾಗ ಅಥವಾ ಗೋಮಾಳ ಪಂಚಾಯಿತಿ ಸ್ವತ್ತು. ಪಂಚಾಯಿತಿ ವ್ಯಾಪ್ತಿಯಲ್ಲಿನ ಅರ್ಹರಿಗೆ ನೀಡಬೇಕೇ ಹೊರತು ಒಂದೇ ಗ್ರಾಮದವರಿಗೆ ಸೀಮಿತಗೊಳಿಸಿದರೆ ಹೇಗೆ  ಎಂದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಶಾಸಕ ಪಿಳ್ಳ ಮುನಿಶಾಮಪ್ಪ, ಪ್ರಸ್ತುತ ನಿವೇಶನಕ್ಕಾಗಿ ಬೇಡಿಕೆ ಇಟ್ಟಿರುವ ಜಾಗದ ಪ್ರದೇಶದಲ್ಲಿ 56 ಎಕರೆ ಮಾತ್ರ ಇದೆ. ವಾಜಪೇಯಿ ವಸತಿ ಶಾಲೆಗೆ 10 ಎಕರೆ, ನ್ಯಾಯಾಲಯ ಸಂಕೀರ್ಣಕ್ಕೆ 10 ಎಕರೆ ಮೀಸಲು ಇಡಲಾಗಿದೆ. ಎಆರ್‌ಟಿಒ ಇಲಾಖೆಗೆ 7.20 ಎಕರೆ ಪೊಲೀಸ್‌ ವಸತಿಗೃಹಕ್ಕೆ 8 ಎಕರೆ, ನಿರ್ಮಿತಿ ಕೇಂದ್ರಕ್ಕೆ 4 ಎಕರೆ ನಿವೃತ್ತ ಯೋಧರಿಗೆ 4 ಎಕರೆ ಪ್ರಸ್ತಾವನೆ ಸಲ್ಲಿಸಲಾಗಿದೆ. 10 ಎಕರೆ ವ್ಯಾಪ್ತಿಯಲ್ಲಿ ಬೊಮ್ಮವಾರ ಸುತ್ತಮುತ್ತ ಇರುವ ಗ್ರಾಮದ ಕಡುಬಡವರಿಗೆ ನೀಡಲು ಉದ್ದೇಶಿಸಲಾಗಿದೆ ಗ್ರಾಮ ಪಂಚಾಯಿತಿ  ಸರ್ವಸದಸ್ಯರು ನಿರ್ಣಯ ಮಾಡಿ ಪ್ರಸ್ತಾವನೆ ಸಲ್ಲಿಸಿದರೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಮೂರ್ತಿ ಮಾತನಾಡಿ, ನಾವು ಯಾರಿಗೂ ಗುಡಿಸಲು ಹಾಕಿಕೊಳ್ಳಿ ಎಂದು ಹೇಳಿಲ್ಲ ಪಕ್ಷಾತೀತವಾಗಿ ಕಡುಬಡವರು ಹಾಕಿಕೊಂಡಿದ್ದಾರೆ ಯಾರಿಗೂ ತಡೆ ಮಾಡಲು ನಮ್ಮಿಂದ ಸಾಧ್ಯವಿಲ್ಲ  ಎಂದು ಅವರು ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT