ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಲದ ಉದ್ದೇಶ ಸದ್ಬಳಕೆಯಾಗಲಿ’

ಸಾಲ ಮರುಪಾವತಿಸಿ, ಮಹಿಳಾ ಸಂಘಗಳಿಗೆ ಮನವಿ
Last Updated 2 ಫೆಬ್ರುವರಿ 2017, 6:53 IST
ಅಕ್ಷರ ಗಾತ್ರ

ವಿಜಯಪುರ : ‘ಮಹಿಳಾ ಸಂಘಗಳು ಪಡೆದುಕೊಂಡ ಸಾಲಗಳನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡಬೇಕಾದರೆ ಸಾಲ ಪಡೆದುಕೊಂಡಿರುವ ಉದ್ದೇಶಕ್ಕಾಗಿ ಮಾತ್ರ ಹಣವನ್ನು ಬಳಕೆ ಮಾಡಿಕೊಳ್ಳಬೇಕು’ ಎಂದು  ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮೀನಾರಾಯಣಪ್ಪ ಹೇಳಿದರು.

ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿ ನಲ್ಲೂರು ರೇಷ್ಮೆ ಬೆಳೆಗಾರರ ರೈತರ ಸೇವಾ ಸಹಕಾರಿ ಸಂಘದಲ್ಲಿ 5 ಮಹಿಳಾ ಸಂಘಗಳಿಗೆ ₹ 18 ಲಕ್ಷ 50 ಸಾವಿರ ಸಾಲದ ಚೆಕ್ ವಿತರಣೆ ಮಾಡಿ ಅವರು ಮಾತನಾಡಿದರು.

ಮಹಿಳಾ ಸಂಘಗಳು ಸಾಲ ಪಡೆದುಕೊಂಡು ಗ್ರಾಮಗಳಲ್ಲಿ ಲೇವಾದೇವಿ ಮಾಡದೇ ಗುಡಿ ಕೈಗಾರಿಕೆಗಳು ಸ್ಥಾಪಿಸಿಕೊಂಡರೆ ಗ್ರಾಮದಲ್ಲಿರುವ ನಿರುದ್ಯೋಗಿಗಳಿಗೂ ಉದ್ಯೋಗ ಸಿಗುವಂತಾಗುತ್ತದೆ. ಕಡಿಮೆ ಬಡ್ಡಿಯಲ್ಲಿ ಸಾಲ ತೆಗೆದುಕೊಂಡು ಸಕಾಲಕ್ಕೆ ಪಾವತಿಸಿದರೆ ಇನ್ನಷ್ಟು ಸಾಲವನ್ನು ಪಡೆಯಬಹುದು ಎಂದರು.

ಸಂಘದ ಅಧ್ಯಕ್ಷ ಲೋಕೇಶ್‌ ಗಾಂಧಿ ಮಾತನಾಡಿ, ಹೆಚ್ಚಿನ ಉಳಿತಾಯವನ್ನು ಪಾವತಿ ಮಾಡಿಕೊಂಡು ಸುಸ್ಥಿತಿಯಲ್ಲಿರುವ ಸಂಘಗಳಿಗೆ ಸಾಲ ವಿತರಿಸಲಾಗುತ್ತದೆ. ನಮ್ಮ ಸಹಕಾರಿ ಸಂಘದಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ವಿತರಿಸುತ್ತಿದ್ದೇವೆ. ರೆಡ್ಡಿಹಳ್ಳಿ, ಬಿದಲಪುರ, ದೊಡ್ಡಹೊಸಹಳ್ಳಿ, ಎಸ್.ತೆಲ್ಲೋಹಳ್ಳಿ ಸೇರಿದಂತೆ 4 ಗ್ರಾಮಗಳ 5 ಸ್ವಸಹಾಯ ಗುಂಪುಗಳಿಗೆ ₹ 18  ಲಕ್ಷ 50 ಸಾವಿರ ಸಾಲವನ್ನು ವಿತರಣೆ ಮಾಡಲಾಗಿದೆ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯರಾದ ಮಂಜುನಾಥ್, ಮುನೇಗೌಡ, ಲಲಿತೇಶ್, ವಿಶ್ವನಾಥ್, ಚಂದ್ರಪ್ಪ, ನಾಗರತ್ನಮ್ಮ, ಕಾರ್ಯನಿರ್ವಹಣಾಧಿಕಾರಿ ವರದರಾಜ್, ಕ್ಯಾಷಿಯರ್ ಸಂತೋಷ್, ಮಾರಾಟ ಗುಮಾಸ್ತ ನರಸಿಂಹಮೂರ್ತಿ, ಮುಂತಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT