ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಕಸರತ್ತು

Last Updated 2 ಫೆಬ್ರುವರಿ 2017, 7:10 IST
ಅಕ್ಷರ ಗಾತ್ರ
ಗಂಗಾವತಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಡಳಿತ ಮಂಡಳಿಗೆ ಫೆ.4ರಂದು ಅಧ್ಯಕ್ಷ ಉಪಾ ಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಅಧಿಕಾರ ದಕ್ಕಿಸಿಕೊಳ್ಳಲು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಪ್ರಯತ್ನ ಆರಂಭಿಸಿದ್ದಾರೆ.
 
ಒಟ್ಟು 14 ಸದಸ್ಯ ಬಲದ ಎಪಿಎಂಸಿಯಲ್ಲಿ 9 ಬಿಜೆಪಿ, 4 ಕಾಂಗ್ರೆಸ್ ಬೆಂಬ ಲಿತ ಸದಸ್ಯರಿದ್ದಾರೆ. ಟಿಎ ಪಿಸಿಎಂಎಸ್ ಸಂಸ್ಥೆಯ ಪ್ರತಿನಿಧಿಕ ಒಂದು ಸದಸ್ಯ ಸ್ಥಾನದ ಪ್ರಕರಣ ಇನ್ನೂ ನ್ಯಾಯಾ ಲಯದಲ್ಲಿ ವಿಚಾರಣೆ ಬಾಕಿ ಇದೆ.
 
ಹೆಚ್ಚು ಸ್ಥಾನ ಪಡೆದಿರುವ ಬಿಜೆಪಿ ಸಹಜವಾಗಿ ಎಪಿಎಂಸಿಯಲ್ಲಿ ಅಧಿ ಕಾರಕ್ಕೇರುವ ಮೂಲಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದೆ. ಆದರೆ ಶಾಸಕ ಶಿವರಾಜ ತಂಗಡಗಿ ನೇತೃತ್ವದಲ್ಲಿ ಎಪಿಎಂಸಿಯಲ್ಲಿ ಅಧಿಕಾರ ಪಡೆಯಲು ಕಾಂಗ್ರೆಸ್ ಮುಖಂಡರು ಯೋಜನೆ ರೂಪಿಸಿದ್ದಾರೆ. 
 
ರಾಜ್ಯದಲ್ಲಿ ಕಾಂಗ್ರೆಸ್ ಅಧಿ ಕಾರದಲ್ಲಿರುವ ಕಾರಣ ಸ್ಥಳೀಯ ಎಪಿಎಂಸಿಗೆ ಮೂರು ಜನರನ್ನು ನಾಮ ನಿರ್ದೇಶಿತ ಸದಸ್ಯರನ್ನು ಆಯ್ಕೆ ಮಾಡುವ ಅವಕಾಶ ಇರುವುದರಿಂದ ಕಾಂಗ್ರೆಸ್ ಆಡ ಳಿತದ ಚುಕ್ಕಾಣಿ ಹಿಡಿಯಲು ತೆರೆಮರೆಯ ಯತ್ನಕ್ಕೆ ಕೈಹಾಕಿದೆ. 
 
ಆಯ್ಕೆಯಾದ ನಾಲ್ವರು ಸದಸ್ಯರು ಹಾಗೂ ಮೂವರು ನಾಮ ನಿರ್ದೇಶಿತ ಸದಸ್ಯರು ಸೇರಿ ಒಟ್ಟು ಏಳು ಸ್ಥಾನ ಗಳಾಗಲಿದ್ದು, ಬಿಜೆಪಿಯ ಮೂವರು ಸದಸ್ಯರನ್ನು ಸೆಳೆಯಲು ಕಾಂಗ್ರೆಸ್ ಈಗಾಗಲೆ ಮಾತುಕತೆ ನಡೆಸಿದೆ ಎನ್ನಲಾ ಗಿದೆ. ಕಾಂಗ್ರೆಸ್ ತಂತ್ರ ಅರಿತಿರುವ ಬಿಜೆಪಿ ಮುಖಂಡರು, ತಮ್ಮ ಸದಸ್ಯರನ್ನು ರಹಸ್ಯ ಸ್ಥಳದಲ್ಲಿರಿಸಿದ್ದಾರೆ ಎನ್ನಲಾಗಿದೆ. 
 
ಕಾಂಗ್ರೆಸ್‌ನಿಂದ ರೆಡ್ಡಿ ಶ್ರೀನಿವಾಸ, ಬಿಜೆಪಿಯಿಂದ ರಾಮಮೋಹನರಾವ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಹೇರೂ ರು ಕ್ಷೇತ್ರದ ಸುಶೀಲಮ್ಮ ಹಾಗೂ ಆನೆ ಗೊಂದಿ ಕ್ಷೇತ್ರದ ನಿರ್ಮಲಾ ಬಾಗೋಡಿ ಅವರ ಹೆಸರು ಕೇಳಿ ಬರುತ್ತಿದೆ. 
 
ಮೂವರು ನಾಮ ನಿರ್ದೇಶಿತ ಸದಸ್ಯರ ಸ್ಥಾನಗಳ ಪೈಕಿ ಜೆಡಿಎಸ್ ಬಂಡಾಯ ಶಾಸಕ ಇಕ್ಬಾಲ್ ಅನ್ಸಾರಿ ವಲಯದಲ್ಲಿನ ಒಬ್ಬ ಕಾರ್ಯಕರ್ತ ಆಯ್ಕೆಯಾಗಿದ್ದಾರೆ. ಎಪಿಎಂಸಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಏರಲು ಶಾಸಕ ಅನ್ಸಾರಿ ಸಹಕಾರ ಅಗತ್ಯವಿದೆ. ಶಾಸಕ ಇಕ್ಬಾಲ್ ಅನ್ಸಾರಿ ಸಿಎಂ ಜೊತೆ ಉತ್ತಮ ಸಂಬಂಧ ಹೊಂದಿದ್ದು, ಸ್ಥಳೀಯ ಕಾಂಗ್ರೆಸ್ ಮುಖಂಡ ರೊಂದಿಗಿನ ಸಂಬಂಧ ಅಷ್ಟಕಷ್ಟೆ. ಈ ಕಾರಣ ಕಾಂಗ್ರೆಸ್ ಅಧಿ ಕಾರದ ಚುಕ್ಕಾಣಿ ಹಿಡಿಯಲು ಅನ್ಸಾರಿ ಸೂಚಿ ಸುವ ಮತ ನಿರ್ಣಾಯ ಕವಾಗಲಿದೆ. 
 
**
ಎಪಿಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು  ಮತದಾರರು ಕಡೆಗಣಿಸಿದ್ದಾರೆ.  ಕಾಂಗ್ರೆಸ್ ಹಿಂಬಾಗಿಲಿನ ಮೂಲಕ ಅಧಿಕಾರಕ್ಕೇರಲು ಯತ್ನಿಸುತ್ತಿದೆ.
-ಸಿಂಗನಾಳ ವಿರೂಪಾಕ್ಷಪ್ಪ
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT