ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾವಧಾರೆ’ ಕರುಣಾ: ಸರ್ವಾಧ್ಯಕ್ಷೆ ಪರಿಚಯ

ಹುಮನಾಬಾದ್ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ ಇಂದು
Last Updated 2 ಫೆಬ್ರುವರಿ 2017, 8:55 IST
ಅಕ್ಷರ ಗಾತ್ರ
ಹುಮನಾಬಾದ್: ಹುಮನಾಬಾದ್‌ ಪಟ್ಟಣದಲ್ಲಿ ಗುರುವಾರ ನಡೆಯುವ ತಾಲ್ಲೂಕು  ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷೆ ಕರುಣಾ ಸಲಗರ್‌. ಇವರ ಕಿರು ಪರಿಚಯ ಇಲ್ಲಿದೆ
 
ಕಲಬುರ್ಗಿ ಜಿಲ್ಲೆ ಕುರಿಕೋಟಾ ಗ್ರಾಮದಲ್ಲಿ  ಬಡ ಕೃಷಿ ಕುಟುಂಬದ ಹೀರಾಬಾಯಿ ಹಾಗೂ ಚನ್ನಬಸಪ್ಪ ಬಸವಣ್ಣೋರ್‌  ದಂಪತಿ ಪುತ್ರಿಯಾಗಿ 1966ರ ಜೂನ್‌ 1ರಂದು ಜನಿಸಿದರು. ವೃತ್ತಿಯಲ್ಲಿ ಶಿಕ್ಷಕಿ.  
 
ಪ್ರೌಢಶಾಲೆ ಹಂತದಿಂದಲೇ ಸಾಹಿತ್ಯದ ಆಸಕ್ತಿ. ಬರೆಯುವ ಹವ್ಯಾಸ ರೂಢಿಸಿಕೊಂಡಿದ್ದರು. 
 
2000ದಲ್ಲಿ ಬಸವಕೇಂದ್ರದ ವಚನೋತ್ಸವ ಕರುಣಾ ಹವ್ಯಾಸಕ್ಕೆ ವೇದಿಕೆಯಾಯಿತು. 
 
2003ರಲ್ಲಿ ಅಸ್ತಿತ್ವಕ್ಕೆ ಬಂದ ಬಸವಸೇವಾ ಪ್ರತಿಷ್ಠಾನ, ಅಕ್ಕ ಅನ್ನಪೂರ್ಣ ತಂಡ, ಧರಿನಾಡು ಕನ್ನಡ ಸಂಘ, ಕನ್ನಡ ಸಾಹಿತ್ಯ ಪರಿಷತ್‌ ವಿವಿಧ ಕನ್ನಡಪರ ಸಂಘಟನೆಗಳು ಇವರ ಸಾಹಿತ್ಯಾಸಕ್ತಿಯನ್ನು ಬೆಂಬಲಿಸಿದುವು.  2006ರಲ್ಲಿ  ಚೊಚ್ಚಲ ಕೃತಿ ‘ಶಿವಲಿಂಗೇಶ್ವರ ವಚನಗಳು’ ಪ್ರಕಟಗೊಂಡಿತು.
 
 2008ರಲ್ಲಿ ಶಿಕ್ಷಣ ಇಲಾಖೆಯಲ್ಲಿ  ನೌಕರರರಾಗಿದ್ದ  ಪತಿ ಅಶೋಕ ಸಲಗರ್‌ ವಿಧಿವಶರಾದರು. 
 
ಕರುಣಾ ಸಲಗರ್‌ ಅವರ ನಿಜವಾದ ಬದುಕು ಆರಂಭಗೊಂಡಿದ್ದೇ ಇಲ್ಲಿಂದ. ಒಂಟಿ ಹೆಣ್ಣನ್ನು ಸಮಾಜ ನೋಡುವ ದೃಷ್ಟಿಕೋನ , ಕಹಿ ಅನುಭವ , ನೋವುಗಳನ್ನೇ ಆಧಾರವಾಗಿಟ್ಟು  ಅಂದು ‘ಭಾವಧಾರೆ’ ಕೃತಿ ಲೋಕಾರ್ಪಣೆಗೊಳಿಸಿ, ಮನಸ್ಸು ಹಗುರಾಗಿಸಿದರು.  
 
ಸಾಹಿತ್ಯ ಕೃಷಿಗೆ ಅಧಿಕ ಸಮಯ ನೀಡತೊಡಗಿದರು.  500 ಆಧುನಿಕ ವಚನಗಳು ರಚನೆಯಾದವು. 
 
ಮಹಿಳೆ ಅನುಭವಿಸುವ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಬಸವಸೇವಾ ಪ್ರತಿಷ್ಠಾನದಡಿ ‘ನೀಲಮ್ಮನ ಬಳಗ’ ಅಸ್ತಿತ್ಚಕ್ಕೆ ತಂದಿದ್ದಾರೆ.
 
ಅದ್ದೂರಿ ಮದುವೆ ತಡೆ, ಮೂಢನಂಬಿಕೆ, 1–10ನೇ ತರಗತಿ ವರೆಗೆ ಕನ್ನಡದಲ್ಲೇ ಓದು, ಕನ್ನಡ ಅಂಕಿ ಬಳಕೆ ಕಡ್ಡಾಯ,  ಬಯಲು ಬಹಿರ್ದೆಸೆ ಮುಕ್ತ ಸಮಾಜ ನಿರ್ಮಾಣ, ಮಹಿಳೆ ಸಾಕ್ಷರತೆ, ಸ್ವಾವಲಂಬನೆ  ಇತ್ಯಾದಿ ಇವರ ಕಾರ್ಯಕ್ಷೇತ್ರ.  
 
ತಾಲ್ಲೂಕು, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ, ಶರಣ ಸಂಸ್ಕೃತಿ, ಬಸವಸೇವಾ ಪ್ರತಿಷ್ಠಾನ ಒಳಗೊಂಡಂತೆ ಹಲವು ಪ್ರಶಸ್ತಿಗಳು ಸಂದಿವೆ.  ತಾಲ್ಲೂಕು, ಜಿಲ್ಲಾ ಸಮ್ಮೇಳನ ವಿಚಾರಗೋಷ್ಠಿ, ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. 
 
ವಿದ್ಯಾರ್ಥಿನಿ ಯಾಗಿದ್ದಾಗ ಸಾಹಿತ್ಯಕವಾಗಿ ಪ್ರೋತ್ಸಾಹಿಸಿದ ಶಿಕ್ಷಕರಾದ ಗುರುಶಾಂತಪ್ಪ , ಸುಗಂಧಾ ಹಾಗೂ ಸಮ್ಮೇಳನ ಸರ್ವಾಧ್ಯಕ್ಷತೆ ನೀಡಿ ಗೌರವಿಸಿದ ಕನ್ನಡ ಸಾಹಿತ್ಯ ಪರಿಷತ್‌ ಪ್ರಮುಖರನ್ನು ಸ್ಮರಿಸುತ್ತಾರೆ. 
 
**
ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಸಮಾಜ ಪರಿವರ್ತನಾ ಉದ್ದೇಶ ಹೊಂದಿದ್ದೇ ನಿಜವಾದ ಸಾಹಿತ್ಯ. ಅನುಭಾವದ ಆಸ್ತಿ. 
-ಕರುಣಾ ಸಲಗರ್‌
ಸಮ್ಮೇಳನ ಸರ್ವಾಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT