ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಪಾತಿಗೆ ‘ ಚಟ್ಟಿನಾಡು ಮೊಟ್ಟೆ ಕರಿ’ ಗುಡ್ ಕಾಂಬಿನೇಶನ್

Last Updated 2 ಫೆಬ್ರುವರಿ 2017, 16:20 IST
ಅಕ್ಷರ ಗಾತ್ರ
ADVERTISEMENT

ಚಟ್ಟಿನಾಡು ಮೊಟ್ಟೆ ಕರಿ ಎಂದರೆ ಬಾಯಿ ಚಪ್ಪರಿಸಿಕೊಂಡು ತಿನ್ನಬೇಕು ಎನಿಸುತ್ತದೆ.  ಬೇಯಿಸಿದ ಕೋಳಿ ಮೊಟ್ಟೆಗೆ ಮಸಾಲೆ ರುಬ್ಬಿ ಹದವಾಗಿ ಬೇಯಿಸಿದರೆ ಚಟ್ಟಿನಾಡು ಎಗ್‌ ಕರಿ ರೆಡಿ. ಇದನ್ನು ಚಪಾತಿ ಅಥವಾ ರೊಟ್ಟಿ ಜೊತೆ ಮೆಲ್ಲಬಹುದು. ಒಮ್ಮೆ ನೀವು ಮಾಡಿ ರುಚಿ ನೋಡಿ!

ಬೇಕಾಗುವ ಸಾಮಗ್ರಿಗಳು:

1. ಬೇಯಿಸಿದ ಮೊಟ್ಟೆ         2
2. ಈರುಳ್ಳಿ ಹೆಚ್ಚಿದ್ದು           1
3. ಟೊಮ್ಯಾಟೊ ರಸ         1/2ಕಪ್
4. ಕರಿಬೇವು                   ಸ್ವಲ್ಪ
5. ಎಣ್ಣೆ                          2ಚಮಚ
6. ತುಪ್ಪ                        1ಚಮಚ
7. ಕೊತ್ತಂಬರಿ ಸೊಪ್ಪು         ಸ್ವಲ್ಪ

ರುಬ್ಬುವುದಕ್ಕೆ
1. ಗಸೆಗಸೆ                  1ಚಮಚ
2. ಕರಿಮೆಣಸು              1ಚಮಚ
3. ಮೆಣಸಿನಕಾಯಿ          5
4. ಚಕ್ಕೆ                       1
5. ಲವಂಗ                   1
6. ಏಲಕ್ಕಿ                     2
7. ತೆಂಗಿನತುರಿ             1/4ಕಪ್
8. ಶುಂಠಿ-ಬೆಳ್ಳ್ಳುಳ್ಳಿ ಪೇಸ್ಟ್  1ಚಮಚ
9. ನೆನೆಸಿದ ಗೋಡಂಬಿ      1ಚಮಚ

ಮಾಡುವ ವಿಧಾನ: ಎಲ್ಲವನ್ನು ಹುರಿದು ಮಿಕ್ಸ್ ಮಾಡುವುದು. ಬಾಂಡ್ಲಿಯಲ್ಲಿ ಎಣ್ಣೆ ಬಿಸಿ ಮಾಡಿ, ಈರುಳ್ಳಿ, ಕರಿಬೇವು, ಒಣಮೆಣಸಿನ ಕಾಯಿ ಸೇರಿಸಿ ಬಾಡಿಸಿ ನಂತರ ಟೊಮ್ಯಾಟೊ ರಸ, ಉಪ್ಪು, ನೀರು ಸೇರಿಸಿ ಚೆನ್ನಾಗಿ ಕುದಿಸಿ. ಬೆಂದ ಮೊಟ್ಟೆಯನ್ನು ಸೇರಿಸಿ ಚೆನ್ನಾಗಿ ಕುದಿಸಿ. ಕಡೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ ಜೊತೆಗೆ ರುಬ್ಬಿದ ಮಿಶ್ರಣವನ್ನು ಸೇರಿಸಿ. (ಗಸಗಸೆ, ಕರಿಮೆಣಸು, ಮೆಣಸಿನಕಾಯಿ, ಚಕ್ಕೆ ಲವಂಗ, ಏಲಕ್ಕಿ, ತೆಂಗಿನತುರಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ನೆನೆಸಿದ ಗೋಡಂಬಿ ಮಿಕ್ಸಿ ಮಾಡಿರುವುದು ) ಚೆನ್ನಾಗಿ ಕುದಿಸಿದರೆ ಚಟ್ಟಿನಾಡ್ ಎಗ್ ಕರಿ ಸವಿಯಲು ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT