ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ರಾಮೀಣ ಭಾಗದ ಕಾರ್ಯಕ್ರಮ ಕಷ್ಟದ್ದು’

ಬಸವಲಿಂಗ ಸ್ವಾಮೀಜಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳಿ ಮಹೋತ್ಸವ
Last Updated 3 ಫೆಬ್ರುವರಿ 2017, 6:27 IST
ಅಕ್ಷರ ಗಾತ್ರ

ತೆಲಸಂಗ: ‘ಗ್ರಾಮೀಣ ಪ್ರದೇಶದ ಕಾರ್ಯಕ್ರಮಗಳಿಗೆ ನಾನು ಒಪ್ಪಿ ಕೊಳ್ಳುವುದಿಲ್ಲ. ಸ್ವಾಮೀಜಿ ಬಹಳ ಮನವಿ ಮಾಡಿದ್ದರಿಂದ ತೆಲಸಂಗಕ್ಕೆ ಬರುವುದಾಗಿ ಒಪ್ಪಿಕೊಂಡು ಬಂದೆ. ಗ್ರಾಮೀಣ ಜನರ ವ್ಯವಸ್ಥೆಯೆ ಸರಿ ಇರುವುದಿಲ್ಲ. ಆದರೆ ನಗರ ಪ್ರದೇಶ ವನ್ನು ಮೀರಿಸುವಂತೆ ತೆಲಸಂಗ ಸ್ವಾಮೀಜಿ ಕಾರ್ಯಕ್ರಮ ಆಯೋಜಿಸಿ ದ್ದಾರೆ’ ಎಂದು ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ಹೇಳಿದರು.

ಮಂಗಳವಾರ ರಾತ್ರಿ ಗ್ರಾಮದಲ್ಲಿ ಬಸವಲಿಂಗ ಸ್ವಾಮೀಜಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಬೆಳ್ಳಿ ಮಹೋತ್ಸವದ ಅಂಗವಾಗಿ ನಡೆದ ಹಾಸ್ಯ ಸಂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಮಯ ಪ್ರಜ್ಞೆ ಸೇರಿದಂತೆ ಶಿಸ್ತಿನ ಬದುಕು ಗ್ರಾಮೀಣ ಜನರಲ್ಲಿಲ್ಲ. ಅದಕ್ಕಾಗಿ ನಾನು ಹಳ್ಳಿಗಳ ಕಾರ್ಯಕ್ರಮಗಳಿಗೆ ಹೋಗುವುನ್ನು ನಿಲ್ಲಿಸಿದ್ದೇನೆ. ಒಂದು ವಾರ ನನ್ನ ಜೊತೆಗೆ ಬನ್ನಿ ಎಲ್ಲವನ್ನು ಕಲಿಸುತ್ತೇನೆ’ ನೆರೆದಿದ್ದವರಿಗೆ ಹೇಳಿದರು.

ಹಾಸ್ಯ ಕಲಾವಿದ ನರಸಿಂಹ ಜೋಶಿ ಮಾತನಾಡಿ, ‘ಗ್ರಾಮೀಣ ಜನರ ಬದುಕು ಖಡಕ್ಕಾಗಿದ್ದರೂ ಉತ್ತಮ ಮನಸ್ಸಿನಿಂದ ಕೂಡಿರುತ್ತದೆ. ನಗಬೇಕು ಜನರನ್ನು ನಗಿಸಬೇಕು. ಉತ್ತಮ ಆರೋಗ್ಯಕ್ಕೆ ನಗುವೇ ಮಹಾ ಮದ್ದು’ ಎಂದರು.

ಹಾಸ್ಯ ಕಲಾವಿದ ಬಸವರಾಜ ಮಹಾಮನಿ, ‘ಜೀವನದಲ್ಲಿನ ಕೆಲವು ಪ್ರಸಂಗಗಳೆ ಹಾಸ್ಯಮಯವಾಗಿರುತ್ತದೆ. ನಗಿಸುವುದು ನಗುವುದು ಸಂತಸ ಜೀವನ ನಡೆಸುವ ದೊಡ್ಡ ಕಲೆ. ಹಾಗಾಗಿ ಸದಾ ನಗುತ್ತಿರಿ’ ಎಂದು ಸಲಹೆ ನೀಡಿದರು. ಫಕೀರ ಸಿದ್ದರಾಮ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಪ್ರಭುಚನ್ನಬಸವ ಸ್ವಾಮೀಜಿ, ವೀರೇಶ್ವರ ದೇವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT