ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ ಉತ್ಸವದ ಸಮಾರೋಪ ಇಂದು

Last Updated 3 ಫೆಬ್ರುವರಿ 2017, 6:38 IST
ಅಕ್ಷರ ಗಾತ್ರ

ಶಿರಸಿ: ಶಿರಸಿ ಉತ್ಸವದ ಆರನೇ ದಿನ ಗುರುವಾರ ಹಿರಿಯ ನಾಗರಿಕರಿಗೆ ನಡೆದ ಗುರಿ ಇರುವ ಸ್ಪರ್ಧೆ, ಕಣ್ಣು ಕಟ್ಟಿ ಕತ್ತೆಗೆ ಬಾಲ ಹಚ್ಚುವ, ಬಕೆಟ್‌ನಲ್ಲಿ ಬಾಲ್ ಹಾಕುವ ಸ್ಪರ್ಧೆಗಳಲ್ಲಿ ಮಹಿಳೆಯರು, ಪುರುಷರು ಭಾಗವಹಿಸಿದರು.

ಪದವಿ ವಿದ್ಯಾರ್ಥಿಗಳಿಗೆ ಉದ್ದ ಜಿಗಿತ, ಓಟ, ಗುಂಡು ಎಸೆತ, ಕಬಡ್ಡಿ, ವಾಲಿಬಾಲ್ ಸ್ಪರ್ಧೆಗಳು ಜರುಗಿದವು. ಬುಧವಾರ ರಾತ್ರಿ ರಮ್ಯಾ ನಾಯ್ಕ ಹಾಡು, ಮಹಾಗಣಪತಿ ನೃತ್ಯ ತಂಡದ ಡಾನ್ಸ್, ಐಶ್ವರ್ಯಾ, ಲಾವಣ್ಯ ಜೋಗಳೇಕರ ನೃತ್ಯ, ಮೈಸೂರು ಗೋಪಿ ಅವರ ಮಿಮಿಕ್ರಿ, ರಮೇಶ ಬೆಂಗಳೂರು ಅವರ  ತಂಡದವರು ಬಲೂನ್ ಡಾನ್ಸ್ ಪ್ರದರ್ಶಿಸಿದರು.

ಉತ್ಸವದ ಕೊನೆಯ ದಿನ ಶುಕ್ರವಾರ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಉದ್ಯೋಗ ಮೇಳ ಹಾಗೂ ಮೆಹಂದಿ ಸ್ಪರ್ಧೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ: ಪ್ರಜ್ಞಾ ಹೆಗಡೆ- ಜನಪದ ಹಾಡು, ಹರ್ಷಿತಾ ಚಂದಾವರ ಮೌಲ್ಡಿಂಗ್ ಡ್ಯಾನ್ಸ್, ಸುಜನಿ ಜಗನ್ನಾಥ ಪೂಜಾರಿ ಹುಬ್ಬಳ್ಳಿ- ಭರತನಾಟ್ಯ, ಸಹನಾ ಗೌಡರ -ರಿಂಗ್ ಡ್ಯಾನ್ಸ್, ದಿವ್ಯಾ ಹೆಗಡೆ- ಹಾಡು, ತುಳಸಿ ಹೆಗಡೆ ಯಕ್ಷ ನೃತ್ಯ ರೂಪಕ, ಸುರೇಂದ್ರ ಪಾಲನಕರ- ಜಾದೂ ಪ್ರದರ್ಶನ, ನಟರಾಜ ಮಹಾಜನ್ ಗೋಕಾಕ್- ಅವರ ಮೂಗು ಮತ್ತು ಬಾಯಿಯಿಂದ ವಾದನ ನುಡಿಸುವಿಕೆ, ಝೇಂಕಾರ ಮೆಲೊಡೀಸ್ ಭಟ್ಕಳ ತಂಡದವರಿಂದ ರಸಮಂಜರಿ ಕಾರ್ಯಕ್ರಮ.

ತಾಳಮದ್ದಲೆ ಮೋಡಿ: ‘ಏಕಲವ್ಯ’  ತಾಳಮದ್ದಲೆ ಯಕ್ಷಪ್ರಿಯರಿಗೆ ಮುದ ನೀಡಿತು. ಭಾಗವತರಾಗಿ ರಾಮಕೃಷ್ಣ ಹಿಲ್ಲೂರು, ಮೃದಂಗದಲ್ಲಿ ಶಂಕರ ಭಾಗವತ, ಅರ್ಥಧಾರಿಗಳಾಗಿ ಜಬ್ಬಾರ ಸಮೊ, ವಾಸುದೇವ ರಂಗಾ ಭಟ್ಟ, ಸೀತಾರಾಮ ಚಂದು ವಿದ್ವತ್ ಪ್ರದರ್ಶನ ನೀಡಿದರು. ನಂತರ ಹಳಿಯಾಳದ ಮಂಜು ಸ್ಕೂಲ್ ಆಫ್ ಡಾನ್ಸ್ ತಂಡದವರು ನೃತ್ಯ ಪ್ರದರ್ಶಿಸಿದರು. ಭೋಜರಾಜ ಶಿರಾಲಿ ಗಾಯನ, ಸನತ್ ಚಿಪಗಿ ನೃತ್ಯ ಹಾಗೂ ಲಯನ್ಸ್ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ನೃತ್ಯ ಮನಸೂರೆಗೊಂಡಿತು. ಎಂ.ಇ.ಎಸ್ ಪ್ರೌಢಶಾಲಾ ಮಕ್ಕಳ ದಶಾವತಾರ ರೂಪಕ, ಕಿಶೋರ ನೇತ್ರಕರ ಮಾಸ್ಕ್‌ ಡ್ಯಾನ್ಸ್, ಆವೆಮರಿಯಾ ಪ್ರೌಢಶಾಲಾ ವಿದ್ಯಾರ್ಥಿಗಳ ನೃತ್ಯ, ಬೆಂಗಳೂರಿನ ಪ್ರತೀಕ್ಷಾ ಭಟ್ಟ ಅವರ ರಷ್ಯನ್ ರಿಂಗ್ ಡ್ಯಾನ್ಸ್ ಆಕರ್ಷಣೀಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT