ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರೊಂದಿಗೆ ಸಹಕರಿಸಲು ಮನವಿ

ಅಪರಾಧ ತಡೆ, ಅಪರಾಧಿಗಳ ಪತ್ತೆಗೆ ಸಾರ್ವಜನಿಕರ ನೆರವು ಅಗತ್ಯ; ಸಿಪಿಐ
Last Updated 3 ಫೆಬ್ರುವರಿ 2017, 6:47 IST
ಅಕ್ಷರ ಗಾತ್ರ

ಬಳ್ಳಾರಿ: ನಗರದ ಡಾ.ರಾಜ್‌ ರಸ್ತೆಯಲ್ಲಿ ಇರುವ ಗಾಂಧಿನಗರ ಪೊಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ಸಂಜೆ ಸಾರ್ವಜನಿಕರ ಸಭೆ ನಡೆಯಿತು.
ಗಾಂಧಿನಗರ ಠಾಣೆಯ ಸಿಪಿಐ ಜಿ.ಎಸ್‌. ಹೆಬ್ಬಾಳ ಸಭೆಗೆ ಚಾಲನೆ ನೀಡಿದರು. ವಿವಿಧೆಡೆ ಚಿನ್ನದ ಸರ ಮತ್ತು ಮನೆಗಳವು ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಮದುವೆ ಆಮಂತ್ರಣ ಪತ್ರಿಕೆ ವಿತರಣೆ ಸೇರಿ ಇತರೆ ಕಾರಣಗಳಿಂದಾಗಿ ಮನೆಯತ್ತ ಬರುವ ಅಪರಿಚಿತರೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸಬೇಕು. ಅನು ಮಾನಾಸ್ಪದವಾಗಿ ಕಂಡುಬಂದರೆ ಕೂಡಲೇ ಹತ್ತಿರದ ಪೊಲೀಸ್‌ ಠಾಣೆ ಅಥವಾ ಕಂಟ್ರೋಲ್‌ ರೂಂ ಸಂಖ್ಯೆ 228100 ಸಂಪರ್ಕಿಸಿ ಮಾಹಿತಿ ನೀಡ ಬೇಕು ಎಂದು ತಿಳಿಸಿದರು.

ರಾತ್ರಿಪಾಳಿ ಸಿಬ್ಬಂದಿಯೊಂದಿಗೆ ಸಾರ್ವಜನಿಕರು ಸಹಕರಿಸಬೇಕು. ಮಫ್ತಿ ಸಮವಸ್ತ್ರದಲ್ಲಿರುವವರು ಪೊಲೀಸರು ಎಂದು ಹೇಳಿದರೆ ಕೂಡಲೇ ಮಾಹಿತಿ ನೀಡಬೇಕು. ಅಪರಿಚಿತರೊಂದಿಗೆ ಹಣ ಕಾಸು ವ್ಯವಹಾರ ಮಾಡುವಾಗ ಎಚ್ಚ ರಿಕೆಯಿಂದರಬೇಕು ಎಂದು ತಿಳಿಸಿದರು.

ಕೋರಿಕೆ: ವಿವಿಧ ಬಡಾವಣೆ, ಕಾಲೊನಿ ಮನೆ ಹಾಗೂ ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ಸಾಗುತ್ತಿದೆ. ಕೂಡಲೇ ಅಂಥಹ ಸ್ಥಳಗಳನ್ನು ಪತ್ತೆಹಚ್ಚ ಬೇಕು. ಮದ್ಯಮಾರಾಟ ತಡೆಯಬೇಕು. ಹಾಗೂ ತಪ್ಪಿತಸ್ಥರ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಕೋರಿದ್ದಾರೆ. ಅದನ್ನು ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ಎಎಸ್ಐ ಆದಿನಾರಾಯಣ, ಪಾಲಿಕೆ ಸದಸ್ಯ ಎಸ್‌. ಮಲ್ಲನಗೌಡ, ಮುಖಂಡ ರಾದ ಗಾದೆಪ್ಪ, ರಾಮಚಂದ್ರಯ್ಯ, ಶ್ರೀನಿವಾಸ, ಸತ್ಯನಾರಾಯಣ ಪೇಟೆ, ಬಸ ವೇಶ್ವರನಗರ, ನೆಹರು ಕಾಲೊನಿ,  ಗಾಂಧಿ ನಗರ, ಸಿದ್ದಾರ್ಥ ಕಾಲೊನಿ,ಕಪ್ಪಗಲ್ಲು, ತಾಳೂರು ರಸ್ತೆ ನಿವಾಸಿಗಳು ಇದ್ದರು.

‘ಜನರ ಸಹಕಾರ ಅತ್ಯಗತ್ಯ’
ಕೂಡ್ಲಿಗಿ:
ಸಾರ್ವಜನಿಕರು ಮತ್ತು ಅವರ ಆಸ್ತಿ ಪಾಸ್ತಿಗಳ ಸುರಕ್ಷತೆಗೆ ಪೊಲೀಸ್ ಇಲಾಖೆಯ ತೆಗೆದುಕೊಳ್ಳುವ ನಿರ್ಧಾರಕ್ಕೆ ಜನರ ಸಹಕಾರ ಅತ್ಯಗತ್ಯ ಎಂದು ಕೂಡ್ಲಿಗಿ ಡಿವೈಎಸ್‌ಪಿ ಬಿ.ಎಸ್. ಸವಿ ಶಂಕರ್ ನಾಯ್ಕ್ ಹೇಳಿದರು. ಅವರು ಮಂಗಳವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದ ಪೌರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಪರಾಧಗಳ ನಿಯಂತ್ರಣ ಮತ್ತು ಪತ್ತೆ ಹಚ್ಚುವುದು ಇಲಾಖೆಯ ಆದ್ಯ ಕರ್ತವ್ಯವಾಗಿದ್ದು, ಈ ಎರಡರಲ್ಲೂ ಸಾರ್ವಜನಿಕರ ಸಹಕಾರ, ಸಲಹೆ ಪ್ರಮುಖವಾಗಿವೆ. ಇಲಾಖೆ ಜನಸ್ನೇಹಿ ಆಗಿದ್ದು, ಸಾರ್ವಜನಿಕರು ಯಾವುದೇ ಸಮಯ ದಲ್ಲಿ ಮಾಹಿತಿ ನೀಡಬಹುದು. ನೀವು ನೀಡಿದ ಸಲಹೆ ಸೂಚನೆ ಸೂಕ್ತ ಎಂದು ತಿಳಿದು ಬಂದಲ್ಲಿ ಪರಿಣಾಮಕಾರಿ ಯಾಗಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.

ಪಿಎಸ್‌ಐ ಎಂ. ಹಾಲೇಶ್, ಪೌರ ಸಮಿತಿ ಸದಸ್ಯರಾದ ತಳಸ್ ವೆಂಕಟೇಶ, ಸಯ್ಯದ್ ಶುಕುರ್, ಕಿಶೋರ್ ಕುಮಾರ್, ಮಧುಸೂಧನ್ ಆಚಾರಿ, ಚನ್ನಬಸಯ್ಯ ಸ್ವಾಮಿ, ಎಎಸ್‌ಐ ನಿರಂಜನಗೌಡ, ಸಿಬ್ಬಂದಿ ಎಂ. ಸ್ವರೂಪಾನಂದ, ಹಂಪಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT