ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜದಲ್ಲಿ ಅಶುದ್ಧವಾಗಿರುವುದನ್ನು ಶುದ್ಧವಾಗಿಸುವ ಕೆಲಸ ಹೆಚ್ಚಲಿ: ಸಚಿವ

Last Updated 3 ಫೆಬ್ರುವರಿ 2017, 6:54 IST
ಅಕ್ಷರ ಗಾತ್ರ

ಉಡುಪಿ: ಮಧ್ವಾಚಾರ್ಯರ ತತ್ವ ಸಿದ್ಧಾಂತಗಳನ್ನು ಜನರು ಸರಿಯಾಗಿ ಅರ್ಥೈಸಿಕೊಂಡಿಲ್ಲ. ಹಾಗಾಗಿ ವಿದ್ವಾಂಸ ರ ಮೂಲಕ ಮಧ್ವಾಚಾರ್ಯರ ಸಂದೇ ಶವನ್ನು ಜನರಿಗೆ ತಿಳಿಸುವ ಕೆಲಸವಾಗ ಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಎಚ್‌.ಕೆ. ಪಾಟೀಲ್‌ ಹೇಳಿದರು.

ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ನಗರದ ರಾಜಾಂಗಣದಲ್ಲಿ ಗುರುವಾರ ನಡೆದ ಮಧ್ವಾಚಾರ್ಯರ ಸಪ್ತ ಶತಮಾನೋತ್ಸವದ 4ನೇ ದಿನದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದಲ್ಲಿ ಅಶುದ್ಧವಾಗಿ ರುವುದನ್ನು ಶುದ್ಧವಾಗಿಸುವ ಕೆಲಸ ಆಗಬೇಕಾಗಿದೆ. ಆ ನಿಟ್ಟಿನಲ್ಲಿ ವಿಶ್ವೇಶತೀರ್ಥ ಶ್ರೀಪಾದರು ತನ್ನ ವಿರುದ್ಧ ಮಾನಸಿಕವಾಗಿ ನೋವುಂಟು ಮಾಡುವ ಪ್ರತಿಕ್ರಿಯೆ ಬಂದರೂ, ಅದ್ಯಾವುದಕ್ಕೂ ಜಗ್ಗದೇ ಸಾಮಾಜಿಕ ಬದಲಾವಣೆಗೆ ಸ್ಪಂದಿಸುವ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ. ಅಸ್ಪೃಶ್ಯತೆ ಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ, ಕಣ್ಣಿಗೆ ಕಾಣುವುದು ಮಾತ್ರ ಸತ್ಯ. ಕಣ್ಣಿಗೆ ಕಾಣದ್ದು ಭ್ರಮೆ ಎಂದು ತಿಳಿಯಬಾರದು. ಕಣ್ಣಿಗೆ ಕಾಣುವ ಜಗತ್ತಿನಲ್ಲಿ ಸಾಧನೆ ಮಾಡಿ, ಕಣ್ಣಿಗೆ ಕಾಣದ ಅತಿಯೇಂದ್ರ ಶಕ್ತಿಯಲ್ಲಿ ವಿಶ್ವಾಸ ಹೊಂದಬೇಕು ಎಂದು ಮಧ್ವಾಚಾರ್ಯರು ಎಂದಿದ್ದಾರೆ.

ಜಗತ್ತು ನಿಷ್ಕ್ರೀಯವಾಗಬಾರದು ಹಾಗೂ ಅಹಂಕಾರದಿಂದ ದಾರಿ ತಪ್ಪಬಾರದು ಎನ್ನುವ ನಿಟ್ಟಿನಲ್ಲಿ ಉತ್ತಮ ಜಗತ್ತಿಗಾಗಿ ಸಾತ್ವಿಕವಾದ ಸಂದೇಶವನ್ನು ನೀಡಿದ್ದಾರೆ. ಆದರೆ, ಅವರ ಸಂದೇಶ ಅನೇಕರಿಗೆ ಗೊತ್ತಿಲ್ಲ ಎಂದರು. ಬನ್ನಂಜೆ ಗೋವಿಂದಾಚಾರ್ಯ ಉಪನ್ಯಾಸ ನೀಡಿದರು. ಕೃಷ್ಣಾಪುರ ಮಠದ ವಿದ್ಯಾಸಾಗರ ಸ್ವಾಮೀಜಿ, ವಿಶ್ವಪ್ರಸನ್ನ ಸ್ವಾಮೀಜಿ, ಗುರುಪ್ರಿಯ ಸ್ವಾಮೀಜಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT