ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ವಿಭಜನೆಗೆ ಅವಕಾಶ ಬೇಡ

ಚರ್ಚ್ನ ಶಿಲಾ ಸ್ಥಾಪನಾ ಮಹೋತ್ಸವದಲ್ಲಿ ಟಿ.ಡಿ.ರಾಜೇಗೌಡ
Last Updated 3 ಫೆಬ್ರುವರಿ 2017, 7:03 IST
ಅಕ್ಷರ ಗಾತ್ರ

ಸೂಸಲವಾನಿ(ಎನ್.ಆರ್.ಪುರ): ಕೆಲವು ಮತೀಯ ಸಂಘಟನೆಗಳು ವಿಷ ಬೀಜ ಬಿತ್ತಿ, ಜಾತಿಯ ಆಧಾರದ ಮೇಲೆ ದೇಶ ವಿಭಜನೆಗೆ  ಪ್ರಯತ್ನಿಸುತ್ತಿದ್ದು, ಅದಕ್ಕೆ ಅವಕಾಶ ನೀಡಬಾರದು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಡಿ.ರಾಜೇಗೌಡ ತಿಳಿಸಿದರು.

ತಾಲ್ಲೂಕಿನ ಸೂಸಲವಾನಿ ಗ್ರಾಮ ದಲ್ಲಿ ಬುಧವಾರ ಸಂಜೆ ನಡೆದ ಮೋರ್ ಇಗ್ನಾತಿಯಸ್ ಜಾಕೋಬೈಟ್ ಸಿರಿಯನ್ ಸುನಾರೋ ಚರ್ಚ್‌ನ ಶಂಕುಸ್ಥಾಪನಾ ಮಹೋತ್ಸವ, ಇಗ್ನಾತಿಯಸ್ ಇಲಿ ಯಾಸ್ ಪಾತ್ರಿಯಾರ್ಕೀಸ್‍ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಭಾಗದಲ್ಲಿ ರೈತರು ಆರ್ಥಿಕವಾಗಿ ಪ್ರಗತಿ ಹೊಂದಲು ವಾಣಿಜ್ಯ ಬೆಳೆಗಳನ್ನು ಪರಿಚಯಿಸಿದ ಕೀರ್ತಿ ಕ್ರಿಶ್ಚಿಯನ್ ಸಮುದಾಯಕ್ಕೆ ಸಲ್ಲುತ್ತದೆ. ಕೇರಳದಿಂದ ಈ ಸಮುದಾಯ ವಲಸೆ ಬಂದಾಗ ಈ ಭಾಗದ ಜನ ನಮ್ಮನ್ನು ಪ್ರೀತಿಯಿಂದ ಕಂಡಿದ್ದಾರೆ. ರಾಜ್ಯ ಸರ್ಕಾರ ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಹಲವು ಕಾರ್ಯ ಕ್ರಮಗಳನ್ನು ರೂಪಿಸಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಅಲ್ಪಸಂಖ್ಯಾತರ ಮೇಲಿನ ದಾಳಿಯನ್ನು ತಡೆಯಲು ಸರ್ಕಾರ ಬದ್ಧವಾಗಿದೆ. 60 ವರ್ಷಗಳಿಂದ ಫಾದರ್ ಜೇಕಬ್ ಅವರು ಧಾರ್ಮಿಕದ ಜತೆ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆಸಲ್ಲಿಸಿದ್ದಾರೆ ಎಂದು ಹೇಳಿದರು.

ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ.ಕೆ.ಪಿ ಅಂಶುಮಂತ್ ಮಾತ ನಾಡಿ, ಸರ್ವಧರ್ಮದ ಶಾಂತಿಯ ತೋಟವಾಗಿರುವ ಎನ್. ಆರ್. ಪುರಕ್ಕೆ ಫಾದರ್ ಜೇಕಬ್ ಅವರ ಕೊಡುಗೆ ಅಪಾರ. ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು  ಸಹೋದರರಂತೆ ಬಾಳುತ್ತಿ ದ್ದಾರೆ. ಅದನ್ನು ಮುಂದುವ ರೆಸುವ  ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಸೂಸಲವಾನಿ ಚರ್ಚ್‌ನ ಧರ್ಮಗುರು ಜೇಕಬ್ ಮಾಲಿ ಗೋಟಲ್ ವಹಿಸಿದ್ದರು. ಧರ್ಮ ಗುರುಗಳಾಗಿ 60 ವರ್ಷಗ ಳಿಂದ ಸೇವೆ ಸಲ್ಲಿಸುತ್ತಿರುವ ಫಾದರ್ ಎ.ವಿ. ಜೇಕಬ್ ಕೋರ್ ಎಪಿಸ್ಕೋಪ ಅವರನ್ನು ಅಭಿನಂದಿಸಲಾಯಿತು.   ಕಾರ್ಯಕ್ರಮದಲ್ಲಿ ಸೋಷಿಯಲ್ ವೆಲ್‌ ಫೇರ್‌ ಸೊಸೈಟಿ ಯ ನಿರ್ದೇಶಕ ಫಾದರ್ ಕ್ಲೀಟಸ್, ಫಾದರ್ ಶಿಬು ಕುರಿಯನ್, ಟಿ.ವಿ.ವಿಜ ಯನ್, ಎಲಿಯಾಸ್ ಪಡಿಯಾಟಿ, ವರ್ಗಿಸ್, ಪೌಲೋಸ್ ಎಲ್ದೋಸೊ ಮೊದಲಾ ದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT