ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರ್ಥಿಕ ಸ್ವಾವಲಂಬಿಗಳಾಗಿ ಬದುಕಿ’

Last Updated 3 ಫೆಬ್ರುವರಿ 2017, 7:34 IST
ಅಕ್ಷರ ಗಾತ್ರ

ಕನಕಪುರ:  ಸಮಾಜದಲ್ಲಿ ಮಹಿಳೆಯರು ಆರ್ಥಿಕ ಸಬಲೀಕರಣ ಸಾಧಿಸಿ ಸ್ವಾವಲಂಬಿಗಳಾಗಿ ಬದುಕಬೇಕೆಂದು ಕೆನರಾ ಬ್ಯಾಂಕ್‌ ಕೇಂದ್ರ ಕಚೇರಿಯ ಉಪ ಮಹಾಪ್ರಬಂಧಕ ಕೆ.ಪಳಿನಿವೇಲು ತಿಳಿಸಿದರು.

ತಾಲ್ಲೂಕಿನ ಹಾರೋಹಳ್ಳಿ ಕೆನರಾ ಗ್ರಾಮೀಣ ಮಹಿಳಾ ಸ್ವ–ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಡೆಯುತ್ತಿರುವ ಕೌಶಲ ಮತ್ತು ಉದ್ಯಮಶೀಲತಾ ತರಬೇತಿ ಕಾರ್ಯಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.

ಮಹಿಳೆಯರು ನಾಲ್ಕು ಗೋಡೆಗಳ ಮಧ್ಯದಲ್ಲಿ ಜೀವನ ಕಳೆಯುವಂತಾಗಬಾರದು. ಪುರುಷರಿಗೆ ಸಮಾನರಾಗಿ ಸಮಾಜದಲ್ಲಿ ಜೀವನ ನಡೆಸಬೇಕೆಂದು ಹೇಳಿದರು.

ಬ್ಯಾಂಕ್‌ ಕೇಂದ್ರ ಕಚೇರಿಯ ಕಾರ್ಯ ನಿರ್ವಾಹಕ ನಿರ್ದೇಶಕ ಪಿ.ವಿ.ಭಾರತ್‌ ಮಾತನಾಡಿ ಮಹಿಳೆಯರ ಸಬಲೀಕರಣಕ್ಕಾಗಿಯೇ ಕೆನರಾ ಬ್ಯಾಂಕ್‌ ದೇಶದಲ್ಲಿ ಮಹಿಳೆಯರಿಗೆ ಕೌಶಲ ಮತ್ತು ಉದ್ಯಮಶೀಲತಾ ತರಬೇತಿಯನ್ನು ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿ ಕೊಡುತ್ತಿದೆ, ಅದರ ಪ್ರಯೋಜನ ಪಡೆದು ಮಹಿಳೆಯರು ಸಬಲರಾಗಬೇಕೆಂದು ಮನವಿ ಮಾಡಿದರು.

ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಭಿವೃದ್ದಿ ಸಲಹೆಗಾರ ಮತ್ತು ಮಾರ್ಗದರ್ಶಕ ಬಿ.ಶಿವಪ್ರಸಾದ್‌ ಮಾತನಾಡಿ, ಕೆನರಾ ಸಂಸ್ಥೆಯು ಅಂಗವಿಕಲ ಮಹಿಳೆಯರಿಗಾಗಿಯೇ ವಿಶೇಷ ಕೌಶಲ ಆಧಾರಿತ ಉದ್ಯಮಶೀಲತಾ ತರಬೇತಿಯನ್ನು 13 ದಿನಗಳ ಕಾಲ ಕೊಡುತ್ತಿದೆ ಎಂದರು.

ಹಾರೋಹಳ್ಳಿ ಕೆನರಾ ಬ್ಯಾಂಕ್‌  ಗ್ರಾಮೀಣ ಮಹಿಳಾ ಸ್ವ–ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕಿ ಸುಮಾ ಗಾಂವಕರ್‌ ಮಾತನಾಡಿ ಸಂಸ್ಥೆಯಲ್ಲಿ ಮಹಿಳೆಯರಿಗಾಗಿ ಮಾತ್ರ ವಿವಿಧ ಕೌಶಲ ತರಬೇತಿ ಕಾರ್ಯಾಗಾರವು ಉಚಿತವಾಗಿ ದೊರೆಯಲಿದೆ. ಕೈ ಕಸೂತಿ, ಸೌಂದರ್ಯ ವರ್ಧನೆ, ಉದ್ಯಮಶೀಲತಾ, ಗೃಹ ಆರೋಗ್ಯ, ಕಂಪ್ಯೂಟರ್‌, ಡಿ.ಟಿ.ಪಿ, ಲಘುವಾಹನ ತರೆಬೇತಿ, ಮೊಬೈಲ್‌ ರಿಪೇರಿ 14 ಬಗೆಯ ತರಬೇತಿ ದೊರೆಯಲಿದೆ ಎಂದು ತಿಳಿಸಿದರು.

ಉಪನ್ಯಾಸಕರಾದ ದೇವೀಂದ್ರಪ್ಪ, ನೇತ್ರಾವತಿ, ಸಂಪನ್ಮೂಲ ವ್ಯಕ್ತಿ ಸುಧಾರಾಣಿ, ಕಚೇರಿಯ ಸಹಾಯಕ ಗವಿರಾಜು, ವಸತಿ ನಿಲಯ ಪಾಲಕಿ ವರಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT