ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಲ್ಲದೆ ಹಸಿರು ಮಾಯ: ಮೇವಿಗೆ ಬರ

ಬಾಸೂರು: ಅಮೃತ್ ಮಹಲ್ ಹಸು, ಕೃಷ್ಣಮೃಗಗಳಿಗೆ ಬೇಕಿದೆ ರಕ್ಷಣೆ
Last Updated 4 ಫೆಬ್ರುವರಿ 2017, 5:12 IST
ಅಕ್ಷರ ಗಾತ್ರ
-ಬಾಲು ಮಚ್ಚೇರಿ
 
**
ಕಡೂರು: ಕಡೂರಿನಲ್ಲಿ ಕಾಣಿಸಿಕೊಂಡಿ ರುವ ಬರಗಾಲ ಜನರಿಗೆ ಮಾತ್ರವಲ್ಲ, ಪ್ರಾಣಿಗಳ ಆಹಾರಕ್ಕೂ ಕುತ್ತು ತಂದಿದೆ. ತಾಲ್ಲೂಕಿನಲ್ಲಿ ಇಷ್ಟೊಂದು ತೀವ್ರತೆಯ ಬರಗಾಲ ಕಾಣಸಿಕೊಂಡಿದ್ದು ಇದೇ ಮೊದಲು ಎಂದು ಹೇಳಲಾಗುತ್ತಿದೆ. ಬರ ಗಾಲದಿಂದ ಜನರಿಗೆ ಕುಡಿಯಲು ನೀರು ಸಿಗದೆ ತೊಂದರೆ ಅನುಭವಿಸುತ್ತಿದೆ. ಮತ್ತೊಂದೆಡೆ ನೀರಿಲ್ಲದೆ ಜಾನುವಾರು ಗಳ ಬದುಕು ಕೂಡ ದುಸ್ತರವಾಗಿದೆ. ಈ ನಡುವೆ ತಾಲ್ಲೂಕಿನ ಬಾಸೂರು ಅಮೃತ್ ಮಹಲ್ ಕಾವಲಿನಲ್ಲಿರುವ ಹಸುಗಳು ಮತ್ತು ಅಪರೂಪದ ಕೃಷ್ಣಮೃಗಗಳ ರಕ್ಷಣೆಗೆ ಸಂಬಂಧಪಟ್ಟವರು ಮುಂದಾಗ ಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
 
ಕಡೂರಿನಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಬಾಸೂರು ಅಮೃತ್ ಮಹಲ್ ಕಾವಲು 550 ಹೆಕ್ಟೇ ರ್‌ಗಿಂತ ಹೆಚ್ಚು ವಿಸ್ತೀರ್ಣ ಹೊಂದಿದ ಕಾವಲು. ಸಮೃದ್ಧವಾಗಿ ಬೆಳೆದ ಕುರು ಚಲು ಗಿಡಗಳು ಅಲ್ಪ ಪ್ರಮಾಣದ ದೊಡ್ಡ ಮರಗಳಿಂದಾವೃತವಾದ ಈ ಕಾವಲಿನಲ್ಲಿ ಅಮೃತ್ ಮಹಲ್ ಹಸುಗಳ ಪಾಲನಾ ಕೇಂದ್ರವಿದೆ. 220 ಕ್ಕೂ ಹೆಚ್ಚು ಅಮೃತ್ ಮಹಲ್ ಹಸುಗಳು ಇಲ್ಲಿದ್ದವು. ಮೇವಿನ ಕೊರತೆಯ ಕಾರಣ ಇಲ್ಲಿದ್ದ ಹಸುಗಳನ್ನು ಅಜ್ಜಂಪುರ ಅಮೃತ್ ಮಹಲ್ ಕೇಂದ್ರಕ್ಕೆ ಸಾಗಿಸಲಾಗಿದೆ.
 
ಈ ಕಾವಲಿನಲ್ಲಿ 200ಕ್ಕೂ ಹೆಚ್ಚು ಕೃಷ್ಣಮೃಗಗಳಿವೆ. ಬೆಳಗಾಗುತ್ತಿದ್ದಂತೆಯೇ ಕಾವಲಿನೊಳಕ್ಕೆ ಮೇಯಲು ಹೋಗುವ ಕೃಷ್ಣಮೃಗಗಳು ಮತ್ತೆ ವಾಪಸ್‌ ಬರು ವುದು ಸಂಜೆಯೇ. ಅಮೃತ್ ಮಹಲ್ ಕಾವಲಿನ ಕಚೇರಿಯ ಮುಂದೆ ಅನೇಕ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿದ್ದು ಅಲ್ಲಿ ಈ ಕೃಷ್ಣಮೃಗಗಳು ಬೀಡು ಬಿಡು ತ್ತವೆ. ದೊಡ್ಡ ಕೃಷ್ಣಮೃಗಗಳ ಜತೆಯಲ್ಲಿ ರುವ ಮರಿಗಳು ತುಂಟಾಟವಾಡುವು ದನ್ನು ನೋಡುವುದೇ ಚೆಂದ. ಹಿಂಡು ಹಿಂಡು ಕೃಷ್ಣಮೃಗಗಳು ಒಂದೆಡೆ ಮಲಗಿ ಮೆಲುಕು ಹಾಕುವುದು, ಮನುಷ್ಯರು ನೋಡುತ್ತಿದ್ದಾರೆಂಬ ಅರಿವಾದ ಕೂಡಲೇ ಚಂಗನೆ ನೆಗೆದು ವರ್ಣ ನಾತೀತ ಅನುಭವ ನೀಡುತ್ತದೆ.
 
ಇಲ್ಲಿರುವ ಕೃಷ್ಣಮೃಗಗಳ ಬಗ್ಗೆ ಅರಣ್ಯ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆಯಾದರೂ ಅವುಗಳಿಗೆ ಪೂರ್ಣ ಭದ್ರತೆ ದೊರೆತಿಲ್ಲ ಎಂಬ ಮಾತು ಸ್ಥಳೀಯವಾಗಿ ಕೇಳಿಬರುತ್ತಿದೆ. ಅಮೃತ್ ಮಹಲ್ ಕಾವಲನ್ನು ಅರಣ್ಯ ಇಲಾಖೆಗೆ ವರ್ಗಾಯಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಅದಕ್ಕೆ ಮುನ್ನವೇ ಅರಣ್ಯಇಲಾಖೆ ಅಮೃತ್ ಮಹಲ್ ಕಾವ ಲಿನಲ್ಲಿರುವ ಕೃಷ್ಣಮೃಗಗಳ ಸುರಕ್ಷತೆಗೆ ಕ್ರಮ ಕೈಗೊಂಡಿರುವುದು ಸ್ತುತ್ಯಾರ್ಹ ಕ್ರಮ. ಆದರೆ, ಬರದ ಕಾರಣದಿಂದ ಕೃಷ್ಣ ಮೃಗಗಳಿಗೆ ಕುಡಿಯಲು ಸಮೃದ್ಧವಾಗಿ ನೀರು ಸಿಗದೆ ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಗಿ ಮಾಂಸಪ್ರಿಯರಿಗೆ ಬಲಿ ಯಾಗುವ ಅಪಾಯವಿದೆ. 
 
ಇಲ್ಲಿ ತುರ್ತಾಗಿ ಕಾವಲಿನ ಒಂದು ಭಾಗದಲ್ಲಿ ರಕ್ಷಣಾ ಬೇಲಿ ನಿರ್ಮಿಸಿ ಕೃಷ್ಣಮೃಗಗಳಿಗೆ ಕುಡಿಯುವ ನೀರು ಕಲ್ಪಿಸಬೇಕು. ಅದಕ್ಕಾಗಿಯೇ ಕನಿಷ್ಠ ಇಬ್ಬರು ಕಾವಲುಗಾರರನ್ನು ನೇಮಿ ಸಬೇಕು. ಇಡೀ ಕಾವಲಿನಲ್ಲಿ ನೀರಿಲ್ಲದೆ ಹಸಿರು ಮಾಯವಾಗಿರುವುದರಿಂದ ಅವುಗಳಿಗೆ ತಿನ್ನಲು ಮೇವಿನ ವ್ಯವಸ್ಥೆ ಯಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
 
ಇದೇ ಕಾವಲಿನಲ್ಲಿರುವ ಖಾಲಿ ಜಮೀನಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಮೇವಿನ ಬೆಳೆ ಬೆಳೆಯಲು ಅವಕಾಶ ವಿತ್ತಾದರೂ ಅದನ್ನು ಮಾಡುವಲ್ಲಿ ಅಮೃತ್ ಮಹಲ್ ಅಧಿಕಾರಿಗಳು ಆಸಕ್ತಿ ತೋರಲಿಲ್ಲ. ಈಗ ಅಮೃತ್ ಮಹಲ್ ಕಾವಲಿನಲ್ಲಿರುವ ಕಚೇರಿ ಹಾಳು ಸುರಿ ಯುತ್ತಿದೆ. ನಿಜಕ್ಕೂ ಅಲ್ಲಿ ಯಾರೂ ಇಲ್ಲ. ಅಮೃತ್ ಮಹಲ್ ಹಸುಗಳನ್ನು ಕೂಡಿ ಹಾಕುವ ಕೊಟ್ಟಿಗೆಯೊಳಗೆ ಹಸುಗಳು ಹೋಗಿ ಯಾವುದೋ ಕಾಲವಾಗಿದೆ. ಹಸುಗಳು ಹಾಕಿದ ಸಗಣಿ ಒಣಗಿ 1 ಅಡಿಗಿಂತ ಹೆಚ್ಚು ದಪ್ಪನಾದ ಪದರ ಸೃಷ್ಠಿಯಾಗಿದೆ. ಮತ್ತೆ ಹಸುಗಳು ಬರು ವಷ್ಟರಲ್ಲಿ ಇಲ್ಲಿನ ಕೊಟ್ಟಿಗೆಗೆ ಕಾಯಕಲ್ಪ ವಾಗಬೇಕಿದೆ.
 
ಬಾಸೂರು ಕಾವಲಿನಲ್ಲಿರುವ ಕೃಷ್ಣ ಮೃಗಗಳನ್ನು ಕಾಪಾಡಲು ಅರಣ್ಯ ಇಲಾಖೆ ಕೂಡಲೇ ಕ್ರಮ ಕೈಗೊಂಡು ಅವುಗಳಿಗೆ ಮೇವಿನ ಮತ್ತು ನೀರಿನ ವ್ಯವಸ್ಥೆ ಮಾಡಿದರೆ ಅವುಗಳ ಉಳಿವಿಗೆ ದಾರಿಯಾಗಬಹುದು ಎಂಬುದು ಸ್ಥಳೀಯರ ಅಭಿಪ್ರಾಯ.
 
**
ಒಂದೆರಡು ದಿನಗಳಲ್ಲಿ 20 ಟನ್ ಒಣಮೇವು ಮತ್ತು 250 ಚೀಲ ಪಶು ಆಹಾರವನ್ನು ಸಂಗ್ರಹಿಸಿದ ನಂತರ ಹಸುಗಳನ್ನು ಅಜ್ಜಂಪುರ ಕೇಂದ್ರದಿಂದ ಸ್ಥಳಂತರಿಸುತ್ತೇವೆ 
-ಗಂಗಾಧರ್
ಅಮೃತ್ ಮಹಲ್ ಕೇಂದ್ರದ ವ್ಯವಸ್ಥಾಪಕ
 
**
ಬಾಸೂರು ಕಾವಲಿನಲ್ಲಿ ಮೇವಿನ ಸಂಗ್ರಹಕ್ಕೆ ಕ್ರಮ ಕೈಗೊಂಡಿದೆ. ಶೀಘ್ರದಲ್ಲಿಯೇ ಹಸುಗಳ ನ್ನು ಮತ್ತೆ ಬಾಸೂರು ಕಾವಲಿಗೆ ಕಳುಹಿ ಸುವ ವ್ಯವಸ್ಥೆ ಮಾಡಲಾಗುವುದು.
-ಶೌಕತ್ ಆಲಿ
ಅಧೀಕ್ಷಕ, ಅಜ್ಜಂಪುರ ಅಮೃತ್ ಮಹಲ್ ಕೇಂದ್ರ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT