ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಚುನಾವಣೆ: ಶೇ 89 ಮತದಾನ

ಶಾಂತಿಯುತ ಮತದಾನ, ಜಿಲ್ಲೆಯಲ್ಲಿರುವ 2,818 ಮತದಾರರ ಪೈಕಿ ಹಕ್ಕು ಚಲಾಯಿಸಿದ 2,521 ಮತದಾರರು
Last Updated 4 ಫೆಬ್ರುವರಿ 2017, 6:19 IST
ಅಕ್ಷರ ಗಾತ್ರ
ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ಶುಕ್ರವಾರ ವಿಧಾನ ಪರಿಷತ್ತಿನ ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯ ಮತದಾನ ಶಾಂತಿಯುತವಾಗಿ ನಡೆಯಿತು. ಎಲ್ಲಿ ಕೂಡ ಅಹಿತಕರ ಘಟನೆಗಳು ನಡೆದ ವರದಿಯಾಗಿಲ್ಲ. ಶೇ 89.46 ರಷ್ಟು ಮತದಾನವಾಗಿದೆ. 
 
ಪ್ರತಿ ತಾಲ್ಲೂಕಿಗೆ ಒಂದರಂತೆ ತಾಲ್ಲೂಕು ಕಚೇರಿಯಲ್ಲಿ ಮತದಾನ ಕೇಂದ್ರ ತೆರೆಯಲಾಗಿತ್ತು. ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಿತು. ಜಿಲ್ಲೆಯಲ್ಲಿರುವ 2,818 ಮತದಾರರ ಪೈಕಿ ಶುಕ್ರವಾರ 2,521ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಜಿಲ್ಲೆಯಲ್ಲಿ ಗುಡಿಬಂಡೆ ತಾಲ್ಲೂಕಿನಲ್ಲಿ (94.25) ಅತಿ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಮತದಾನ ಮಾಡಿದ್ದಾರೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿ (85.60) ಅತಿ ಕಡಿಮೆ ಮತದಾನವಾಗಿದೆ. 
 
ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಬಿರುಸಿನಿಂದ ನಡೆದ ಮತದಾನ ಮಧ್ಯಾಹ್ನ ಹೊತ್ತಿಗೆ ನೀರಸವಾಗಿತ್ತು. ಮತದಾನದ ಅವಧಿ ಮುಗಿಯುವ ಹೊತ್ತಿಗೆ ಮತ್ತೆ ಚುರುಕುಗೊಂಡಿತ್ತು. ಇತರೆ ಚುನಾವಣೆಗಳಲ್ಲಿ ಕಾಣುವಂತೆ ಮತದಾನ ಕೇಂದ್ರದ ಬಳಿ ಮತದಾರರನ್ನು ಓಲೈಸುವ ದೃಶ್ಯಗಳು ಕಂಡುಬರಲಿಲ್ಲ. ಪಕ್ಷದ ಮುಖಂಡರು, ಕಾರ್ಯಕರ್ತರು ಮತದಾನ ಕೇಂದ್ರಗಳತ್ತ ಸುಳಿಯಲಿಲ್ಲ. ಮತಗಟ್ಟೆಗಳ ಸುತ್ತ 200 ಮೀಟರ್ ನಿಷೇದಾಜ್ಞೆ ಜಾರಿಗೊಳಿಸಿ,ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
 
**
ಆಗ್ನೇಯ ಶಿಕ್ಷಕರ ಕ್ಷೇತ್ರ:  ಶೇ 85 ಮತದಾನ
ಬೆಂಗಳೂರು: ವಿಧಾನ ಪರಿಷತ್ತಿನ ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಶುಕ್ರವಾರ ಶಾಂತಿಯುತವಾಗಿ ನಡೆಯಿತು. ಒಟ್ಟು ಶೇ 85.46 ಮತದಾನ ಆಗಿದೆ.
 
ಕ್ಷೇತ್ರದ ಒಟ್ಟು 21 ಸಾವಿರ ಮತದಾರರ ಪೈಕಿ 7,508 ಮತದಾರರು ತುಮಕೂರು ಜಿಲ್ಲೆಯೊಂದರಲ್ಲೇ ಇದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ.
 
ಕಾಂಗ್ರೆಸ್ ಪಕ್ಷದ ಟಿ.ಎಸ್. ನಿರಂಜನ್, ಬಿಜೆಪಿಯ ಪಿ.ಆರ್.ಬಸವರಾಜು, ಜೆಡಿಎಸ್‌ನ  ರಮೇಶ್ ಬಾಬು, ಹಾಗೂ14 ಪಕ್ಷೇತರರು ಸೇರಿ 17 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಫೆ. 6ರಂದು ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT