ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ, 6–2–1967

Last Updated 5 ಫೆಬ್ರುವರಿ 2017, 19:35 IST
ಅಕ್ಷರ ಗಾತ್ರ

ರಾಜಾಮಿಲ್ಲಿನ ಆರಂಭ: ಆಡಳಿತವರ್ಗಕ್ಕೆ ಸರ್‍ಕಾರದ 20 ಲಕ್ಷ ರೂ. ಮುಂಗಡ
ಬೆಂಗಳೂರು, ಫೆ. 5–
ರಾಜಾ ಮತ್ತು ಮಿನರ್ವಾ ಮಿಲ್ಲುಗಳನ್ನು ಫೆಬ್ರವರಿ 10 ರಂದು ತೆರೆಯಲು ಅನುಕೂಲ ಕಲ್ಪಿಸಿಕೊಡುವುದಕ್ಕಾಗಿ ರಾಜ್ಯ ಸರ್ಕಾರ ಆಡಳಿತವರ್ಗಕ್ಕೆ 20 ಲಕ್ಷ ರೂಪಾಯಿಗಳನ್ನು ಮುಂಗಡವಾಗಿ ನೀಡಿದೆ. ಮಿಲ್ಲುಗಳನ್ನು ಆರಂಭಿಸಲು ಬೇಕಾಗುವ ಹಣವನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಸಾಲದ ರೂಪದಲ್ಲಿ ಕೊಡಲು ಒಪ್ಪಿದೆ.

ಚಂದ್ರಗ್ರಹಕ್ಕೆ ಅಮೆರಿಕದ ಮತ್ತೊಂದು ಮಾನವರಹಿತ ನೌಕೆ
ಕೇಪ್‌ ಕೆನೆಡಿ, ಫ್ಲೋರಿಡ, ಫೆ. 5–
ಎಂಟು ದಿನಗಳ ಹಿಂದೆ ಬಾಹ್ಯಾಕಾಶ ನೌಕೆ ‘ಅಪೊಲೊ–1’ರ ದುಃಖಾಂತ್ಯವಾಗಿದ್ದರೂ ಸಹ ಚಂದ್ರ ಗ್ರಹಕ್ಕೆ ಮಾನವನನ್ನು ಕಳುಹಿಸುವ ಕಾರ್ಯಕ್ರಮವನ್ನು ಕಾರ್‍ಯಗತಗೊಳಿಸಬೇಕೆಂಬ ಒತ್ತಡ ಹೆಚ್ಚಿರುವುದರಿಂದ, ಅಮೆರಿಕದ ಗಗನ ಸಂಚಾರಿಗಳು ಖಚಿತವಾಗಿ ಇಳಿಯಬಹುದಾದ ನಿವೇಶನಗಳ ಚಿತ್ರಗಳನ್ನು ತೆಗೆಯುವ ಸಲುವಾಗಿ, ಮಾನವರಹಿತ ಚಂದ್ರಗ್ರಹ ನೌಕೆ ಲೂನಾರ್‌ ಅರ್ಬಿಟರ್‌–3ನ್ನು ನಿನ್ನೆ ರಾತ್ರಿ ಅಂತರಿಕ್ಷಕ್ಕೆ ಕಳುಹಿಸಲಾಯಿತು.

ಚತುರ್ಥ ಯೋಜನೆಯ ಅಂತ್ಯದ ವೇಳೆಗೆ ಅಖಿಲ ಭಾರತ ವಿದ್ಯುಜ್ಜಾಲ ಸಿದ್ಧ
ನವದೆಹಲಿ, ಫೆ. 5–
ದೇಶದ ಐದು ವಲಯ ವಿದ್ಯುತ್‌ ಜಾಲಗಳನ್ನು ಸಮಗ್ರ ಹಾಗೂ ಸಮನ್ವಯಿತ ಅಧಿಕಾರವೊಂದರ ಮೇಲೆ ಚಾಲನೆ ಮಾಡಲು, ಆ ವಿದ್ಯುತ್‌ ಜಾಲಗಳಲ್ಲಿ ಆಂತರಿಕ ಸಂಪರ್ಕವಿರುವಂತಹ ಅಖಿಲ ಭಾರತ ವಿದ್ಯುತ್‌ ಜಾಲವೊಂದು ನಾಲ್ಕನೆ ಪಂಚವಾರ್ಷಿಕ ಯೋಜನೆಯ ಅಂತ್ಯದ ವೇಳೆಗೆ ಸಿದ್ಧವಾಗುವುದು ಎಂದು ಅಧಿಕೃತವಾಗಿ ಗೊತ್ತಾಗಿದೆ.

‘ಚಂದ್ರನ ಮೇಲೆ ಇಳಿದರು’ ಕನ್ನಡ ಹಸ್ತಪ್ರತಿಗೆ ಪ್ರಶಸ್ತಿ
ನವದೆಹಲಿ, ಫೆ. 5–
ಭಾರತೀಯ ಭಾಷೆಗಳಲ್ಲಿನ 12 ಪುಸ್ತಕಗಳಿಗೆ ಮತ್ತು ಎರಡು ಹಸ್ತಪ್ರತಿಗಳಿಗೆ ಕೇಂದ್ರ ಶಿಕ್ಷಣ ಸಚಿವ ಶಾಖೆಯು 1966ನೇ ಸಾಲಿಗೆ ಏರ್ಪಡಿಸಿದ್ದ ಮಕ್ಕಳ ಸಾಹಿತ್ಯ ಕುರಿತ 12ನೆಯ ಸ್ಪರ್ಧೆಯಲ್ಲಿ ಬಹುಮಾನ ನೀಡಲು ಆಯ್ಕೆ ಮಾಡಲಾಗಿದೆ. ಪ್ರತಿ ಕೃತಿಗೂ 1,000 ರೂಪಾಯಿಗಳ ನಗದು ಹಣವನ್ನು ಬಹುಮಾನವನ್ನಾಗಿ ನೀಡಲಾಗುವುದು. ಕನ್ನಡದಲ್ಲಿ ಶ್ರೀ ಶಶಿಕುಮಾರ್‌ ಅವರ ‘ಚಂದ್ರನ ಮೇಲೆ ಇಳಿದರು’ ಎಂಬ ಹಸ್ತಪ್ರತಿಗೆ ಬಹುಮಾನ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT