ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಬೂಬು ಸಾಕು; ಬಸ್‌ ನಿಲ್ದಾಣ ನಿರ್ಮಿಸಿ’

ನಗರ ಶಾಸಕರು, ಮಹಾನಗರ ಪಾಲಿಕೆ ಆಡಳಿತ, ವಿಡಿಎ ಅಧ್ಯಕ್ಷ ಇನ್ನಾದರೂ ಕ್ರಮ ತೆಗೆದುಕೊಳ್ಳುವವರೇ?
Last Updated 6 ಫೆಬ್ರುವರಿ 2017, 6:40 IST
ಅಕ್ಷರ ಗಾತ್ರ

ವಿಜಯಪುರ: ಬರೋಬ್ಬರಿ ಎರಡು ಬೇಸಿಗೆ ಕಳೆದಾಗಿದೆ. ಇದೀಗ ಮೂರನೇ ಬೇಸಿಗೆ. ಆದರೂ ನೆರಳಿನ ವ್ಯವಸ್ಥೆ ಕಲ್ಪಿ ಸಲು ಮಹಾನಗರ ಪಾಲಿಕೆ ಆಡಳಿತ, ವಿಜಯಪುರ ನಗರಾಭಿವೃದ್ಧಿ ಪ್ರಾಧಿ ಕಾರ, ನಗರ ಶಾಸಕ ಡಾ.ಮಕ್ಬೂಲ್ ಬಾಗವಾನ ಮುಂದಾಗುತ್ತಿಲ್ಲ ಎಂಬ ದೂರು ಸಾರ್ವತ್ರಿಕವಾಗಿ ನಗರ ವ್ಯಾಪ್ತಿಯಲ್ಲಿ ಕೇಳಿ ಬರುತ್ತಿದೆ.

2014ರ ಸೆಪ್ಟೆಂಬರ್‌ನಲ್ಲಿ ನಗರದ ಮಹಾತ್ಮಗಾಂಧಿ ರಸ್ತೆ ಅಭಿವೃದ್ಧಿಯನ್ನು ಮಾಸ್ಟರ್‌ ಪ್ಲ್ಯಾನ್‌ನಡಿ ಕೈಗೆತ್ತಿಕೊಳ್ಳಲಾ ಯಿತು. ರಸ್ತೆ ವಿಸ್ತರಣೆಗಾಗಿ ಎರಡೂ ಬದಿಯ ಮರಗಳನ್ನು ತೆರವುಗೊಳಿಸ ಲಾಯಿತು.

ಅಂದಿನಿಂದ ಇಂದಿನವರೆಗೂ ರಸ್ತೆ ಬದಿ ಮತ್ತೆ ಸಸಿ ನೆಡುವುದಾಗಲಿ, ನಗರ ಸಾರಿಗೆ ಬಸ್‌ಗಳು ಸ್ಥಗಿತಗೊಳ್ಳುವ ನಿಗದಿತ ಸ್ಥಳಗಳಲ್ಲಿ ಬಸ್‌ ನಿಲ್ದಾಣ ನಿರ್ಮಿಸದಿರುವುದರಿಂದ ನಿತ್ಯವೂ ಅಸದಳ ಸಂಖ್ಯೆಯ ಪ್ರಯಾಣಿಕರು ತ್ರಾಸು ಅನುಭವಿಸಬೇಕಿದೆ.

ಕುಂಟುತ್ತಾ, ತೆವಳುತ್ತಾ ಆಮೆ ವೇಗದಲ್ಲಿ ಸಾಗಿದ ಮಾಸ್ಟರ್‌ ಪ್ಲ್ಯಾನ್‌ ಕಾಮಗಾರಿ ಇದೀಗ ಮಹಾತ್ಮಗಾಂಧಿ ರಸ್ತೆಯಲ್ಲಿ ಪೂರ್ಣಗೊಂಡಿದೆ. ಬಸವೇ ಶ್ವರ ವೃತ್ತದಿಂದ ಶಿವಾಜಿ ವೃತ್ತದವರೆಗೆ ಎರಡು ಹಂತದಲ್ಲಿ ರಸ್ತೆ ಅಭಿವೃದ್ಧಿ ಗೊಂಡಿದೆ.

ಇದರ ವ್ಯಾಪ್ತಿಯಲ್ಲಿ ಬರುವ ಮೂರು ವೃತ್ತಗಳು ಅಲಂಕೃತಗೊಂಡು ಸೌಂದರ್ಯ ಹೆಚ್ಚಿಸಿಕೊಂಡಿವೆ. ರಸ್ತೆ ವಿಭಜಕ ಅಳವಡಿಸಿ ವಿದ್ಯುತ್‌ ದೀಪ ಗಳನ್ನು ಹಾಕಿರುವುದರಿಂದ ರಾತ್ರಿ ವೇಳೆ ಝಗಮಗ ಕಂಗೊಳಿಸುತ್ತವೆ. ಕಾಮ ಗಾರಿ ಗುಣಮಟ್ಟವೋ, ಕಳಪೆಯೋ ಎಂಬುದು ಅರಿಯದಿದ್ದರೂ, ಬಸವೇ ಶ್ವರ ವೃತ್ತದಿಂದ ಶಿವಾಜಿ ವೃತ್ತದವರೆಗಿನ ರಸ್ತೆ ಸಂಚಾರಕ್ಕೆ ಯೋಗ್ಯವಾಗಿದೆ.

ರಸ್ತೆ ಅಭಿವೃದ್ಧಿ ಪೂರ್ಣಗೊಂಡ ಬೆನ್ನಿಗೆ ವಿಜಯಪುರ ನಗರ ಸಂಚಾರ ಪೊಲೀಸರು ಈ ರಸ್ತೆಯಲ್ಲಿ ನಗರ ಸಾರಿಗೆ ಬಸ್‌ ನಿಲ್ದಾಣ ರಚಿಸುವ ಜತೆಗೆ ದ್ವಿಚಕ್ರ, ಕಾರುಗಳ ನಿಲುಗಡೆ ನಿರ್ಮಿಸಿ ದ್ದಾರೆ. ನಗರ ಸಂಚಾರ ಪೊಲೀಸರು ಸೂಚಿಸಿದ ನಿರ್ದಿಷ್ಟ ‘ಬಸ್‌ ಬೇ’ ನಲ್ಲೇ ಇದೀಗ ನಗರ ಸಾರಿಗೆ ಬಸ್‌ಗಳು ನಿಲ್ಲುತ್ತಿವೆ.

ಈ ರಸ್ತೆಯಲ್ಲಿ ಬರುವ ಮೂರ್ನಾಲ್ಕು ನಿಲುಗಡೆ ಸ್ಥಳದಲ್ಲಿ ಮಾತ್ರ ಮೂಲ ಸೌಕರ್ಯ ಕಲ್ಪಿಸಿಲ್ಲ. ಸಂಬಂಧಿಸಿದ ಯಾರೊಬ್ಬರೂ ಇದು ವರೆಗೂ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿಲ್ಲ. ಇದರ ಪರಿಣಾಮ ಜನತೆ ನೆತ್ತಿ ಸುಡುವ ಬಿಸಿಲನ್ನು ಲೆಕ್ಕಿಸದೆ ರಸ್ತೆ ಬದಿಯೇ ನಿಂತು ಬಸ್‌ಗಳಿಗಾಗಿ ಕಾದು ಕೂರಬೇಕಾದ ದಯನೀಯ ಸ್ಥಿತಿ ನಿರ್ಮಾಣಗೊಂಡಿದೆ.

ಇದುವರೆಗೂ ಬಸ್‌ ನಿಲ್ದಾಣಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟವರನ್ನು ಪ್ರಶ್ನಿಸಿದರೆ ನೂರೆಂದು ಸಬೂಬು ಹೇಳುತ್ತಿದ್ದರು. ಇದುವರೆಗೂ ಅಧಿಕಾರಿ ಗಳು ಹೇಳುತ್ತಿದ್ದ ಸಮಸ್ಯೆ ಪರಿಹಾರ ವಾಗಿವೆ. ಇನ್ನಾದರೂ ಸಬೂಬು ಕೇಳುವುದು ನಮಗೆ ಬೇಡವಾಗಿದೆ. ಇಚ್ಚಾಶಕ್ತಿ ಪ್ರದರ್ಶಿಸಿ ಬಸ್‌ ನಿಲ್ದಾಣ ನಿರ್ಮಿಸಿ, ನಗರದ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಬೇಡಿಕೆ ಎಲ್ಲೆಡೆಯಿಂದ ಇದೀಗ ವ್ಯಾಪಕವಾಗಿ ಕೇಳಿ ಬರುತ್ತಿದೆ.

ಲಘು ನೆರಳಿನ ವ್ಯವಸ್ಥೆ ಕಲ್ಪಿಸಿ: ಗಾಂಧಿ ಚೌಕ್‌ ಬಳಿಯ ನಗರ ಸಾರಿಗೆ ಬಸ್‌ ನಿಲ್ದಾಣ ಜನಜಂಗುಳಿಯ ತಾಣ. ಮಾಸ್ಟರ್‌ ಪ್ಲ್ಯಾನ್‌ ಹೆಸರಿನಲ್ಲಿ ರಸ್ತೆ ಬದಿ ಯಿದ್ದ ಬೃಹತ್‌ ಮರ ತೆರವುಗೊಳಿಸಲಾ ಗಿದೆ. ಅಂದಿನಿಂದ ಇಂದಿನವರೆಗೂ ಬಿಸಿಲಲ್ಲೇ ಬಸ್‌ಗೆ ಕಾಯುವ ಅನಿವಾ ರ್ಯತೆ ನಿರ್ಮಾಣಗೊಂಡಿದೆ.

ಇದೀಗ ಇಲ್ಲಿ ನೆರಳಿನ ಆಸರೆಯಿಲ್ಲ ದಾಗಿದೆ. ಕೆಲ ಹೊತ್ತು ಗಾಂಧಿಚೌಕ್‌ ಪೊಲೀಸ್ ಠಾಣೆಯ ನೂತನ ಕಟ್ಟಡದ ನೆರಳಿನಲ್ಲಿ ನಿಂತು ಬಸ್‌ಗೆ ಕಾಯುವ ಶೋಚನೀಯ ಸ್ಥಿತಿ ಇಲ್ಲಿ ನಿರ್ಮಾಣ ಗೊಂಡಿದೆ. ಸಂಬಂಧಿಸಿದ ವರು ಆದಷ್ಟು ಲಘುನೇ ಸ್ಪಂದಿಸಿ, ಬಸ್‌ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಬೇಕು ಎಂಬ ಆಗ್ರಹ ಶಂಕರಪ್ಪ ಬಿರಾದಾರ ಅವರದ್ದು.

ಬಸ್‌ಗಾಗಿ ರಸ್ತೆ ಬದಿಯೇ ನಿಂತು ಕಾಯಬೇಕಿದೆ. ಬೇಸಿಗೆ ಚಾಲು ಆಗಿದೆ. ಮಕ್ಕಳು, ವೃದ್ಧರೂ ವೃಥಾ ತ್ರಾಸು ಪಡುತ್ತಿದ್ದಾರೆ. ನಗರ ಸಂಚಾರ ಪೊಲೀಸರು ಬಸ್ ಬೇ ನಿರ್ಮಿಸಿ ಕೊಟ್ಟಿದ್ದಾರೆ. ಸಾರಿಗೆ ಸಂಸ್ಥೆ ಅಧಿಕಾರಿ ಗಳು ಮಾತ್ರ ಸೂಕ್ತ ಬಸ್‌ ನಿಲ್ದಾಣ ನಿರ್ಮಿಸಿ ಬಸ್‌ ಸಂಚಾರದ ವೇಳಾಪಟ್ಟಿ ಅಳವಡಿಸುವಲ್ಲಿ ಇಂದಿಗೂ ವಿಫಲರಾಗಿದ್ದಾರೆ.

ಯಾವ್ಯಾವ ಬಸ್‌ಗಳು ಯಾವ ಸಮಯದಲ್ಲಿ ಯಾವ ಮಾರ್ಗದಲ್ಲಿ ಸಂಚರಿಸಲಿದ್ದಾವೆ ಎಂಬುದರ ಮಾಹಿತಿಯೇ ಯಾವೊಬ್ಬ ಪ್ರಯಾಣಿಕರಿಗೂ ಇಲ್ಲವಾಗಿದೆ. ಬೇಸಿಗೆ ಚಾಲೂ ಆಗಿ ರುವುದರಿಂದ ಅಪಾರ ಜನದಟ್ಟಣೆಯ ನಿಲ್ದಾಣಗಳ ಬಳಿಯಾದರೂ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಮಾಡಲು ಸಂಬಂಧಿಸಿದವರು ಮುಂದಾಗಬೇಕಿದೆ ಎಂದು ವಿನಾಯಕ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.

*
ಬಿಸಿಲಲ್ಲಿ ಬಸ್‌ಗೆ ಕಾದು ನಿಲ್ಲಲು ಬಹಳ ತ್ರಾಸು ಪಡಬೇಕಿದೆ. ಗಾಂಧಿಚೌಕ್‌ ಪೊಲೀಸ್‌ ಠಾಣೆ ಕಟ್ಟಡ, ಆವರಣ ಗೋಡೆಯ ನೆರಳೇ ಆಸರೆಯಾಗಿದೆ.
-ಶಂಕರಪ್ಪ ಬಿರಾದಾರ,
ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT