ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದು ವಿಡಿಯೊ ಕ್ಯಾಸೆಟ್ 'ಚಿನ್ನಮ್ಮ' ಇಂದು ಮುಖ್ಯಮಂತ್ರಿ!

Last Updated 7 ಫೆಬ್ರುವರಿ 2017, 7:09 IST
ಅಕ್ಷರ ಗಾತ್ರ
ADVERTISEMENT

'ಜಯಾ ನಿಧನದ ನಂತರ ನೀವೇ ಮುಖ್ಯಮಂತ್ರಿಯಾಗಿ ಎಂದು ಪನ್ನೀರ್‍ ಸೆಲ್ವಂ ಒತ್ತಾಯಿಸಿದ್ದರು' ಎಂದು ಶಶಿಕಲಾ ಅವರು ಮಾಧ್ಯಮದವರಿಗೆ ಹೇಳಿಕೆ ನೀಡುವವರೆಗೂ ಶಶಿಕಲಾ ಏನೂ ಮಾತನಾಡದೆ ಎಲ್ಲವನ್ನೂ ನಿಯಂತ್ರಿಸುತ್ತಾ ಬಂದರು.

ಶಾಲಾ ಶಿಕ್ಷಣವನ್ನು ಅರ್ಧಕ್ಕೇ ಕೈ ಬಿಟ್ಟಿದ್ದ ಶಶಿಕಲಾ ಎಂಬಾಕೆ ಬದುಕಿನ ಬಂಡಿ ಎಳೆಯಲು ಒಂದಷ್ಟು ಕಷ್ಟಪಟ್ಟ ಕಾಲವೊಂದಿತ್ತು. ಆಗ ಶಶಿಕಲಾಳ ವಯಸ್ಸು 25. ನಂತರದ 33 ವರ್ಷಗಳಲ್ಲಿ ಈಕೆ ಜೆ.ಜಯಲಲಿತಾ ಅವರ ಆಪ್ತ ಗೆಳತಿಯಾಗಿ ಗುರುತಿಸಿಕೊಂಡರು. ಜಯಲಲಿತಾ ಪಾಲಿಗೆ ಈಕೆ ಅಮ್ಮ, ಸಹೋದರಿ, ಸಖಿ ಎಲ್ಲವೂ ಆಗಿದ್ದರು.

ಬದುಕಿನ ಪಯಣ: ಕ್ಯಾಸೆಟ್ ಮಾರಾಟದ ನಡುವೆ ಫೋಟೊಗ್ರಫಿ, ವಿಡಿಯೊಗ್ರಫಿ ಕಲಿತು ಮದುವೆ ಸಮಾರಂಭಗಳ ವಿಡಿಯೊ ಮಾಡಲು ತೊಡಗಿಕೊಂಡಾಗ ವ್ಯಾಪಾರ ಇನ್ನೂ ಹೆಚ್ಚಾಯಿತು.

80ರ ದಶದಲ್ಲಿ ಜಯಾ ಎಐಎಡಿಎಂಕೆ ಪ್ರಚಾರ ಕಾರ್ಯದರ್ಶಿಯಾಗಿದ್ದಾಗ ಶಶಿಕಲಾ ಕಾರ್ಯಕ್ರಮಗಳನ್ನು ರೆಕಾರ್ಡ್ ಮಾಡುತ್ತಿದ್ದರು. ಅಲ್ಲಿಂದ ಶುರುವಾಯಿತು ಶಶಿ- ಜಯಾ ಗೆಳೆತನ.

ಈಗ ಜಯಾ ಅವರ ಆಪ್ತೆ 'ಚಿನ್ನಮ್ಮ' ತಮಿಳುನಾಡಿನ ಮುಖ್ಯಮಂತ್ರಿ ಸ್ಥಾನವೇರುತ್ತಿದ್ದಾರೆ. ತಮಿಳುನಾಡಿನ ಜನತೆ ಅಮ್ಮನಿಗೆ ನೀಡಿದ ಬೆಂಬಲವನ್ನು ಚಿನ್ನಮ್ಮನಿಗೂ ನೀಡುತ್ತಾ? ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT