ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯಕರ ಕೂದಲು, ತ್ವಚೆಗೆ ಲೋಳೆಸರ

Last Updated 7 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಸುಲಭವಾಗಿ ಸಿಗುವ ಲೋಳೆಸರ (ಅಲೊವೆರಾ)ದಿಂದ  ಚರ್ಮ ಮತ್ತು ಕೂದಲಿನ ಸೌಂದರ್ಯಕ್ಕೆ ಹಲವು ಲಾಭಗಳಿವೆ. ಲೋಳೆಸರ ಹರ್ಬಲ್ ಆಗಿರುವುದರಿಂದ ಯಾವುದೇ ದುಷ್ಪರಿಣಾಮವೂ ಉಂಟಾಗದು.

ಲೋಳೆಸರದ ತಿರುಳನ್ನು ಸನ್‌ಬರ್ನ್‌ ಆಗಿರುವ ಭಾಗಕ್ಕೆ ಹಚ್ಚಿಕೊಂಡಲ್ಲಿ, ಕಪ್ಪಾದ ಭಾಗ ತಿಳಿಯಾಗಿ, ಚರ್ಮ ನಯವಾಗುತ್ತದೆ.

ಕಣ್ಣುರೆಪ್ಪೆ ಉದ್ದವಾಗಿ ಕಾಣಬೇಕೆ? ಹಾಗಿದ್ದಲ್ಲಿ ರೆಪ್ಪೆಗೆ ಲೋಳೆಸರ ಹಚ್ಚಿ.

ಸಣ್ಣಪುಟ್ಟ ಗಾಯವಾದಾಗ ಆ ಭಾಗದಲ್ಲಿ ಕಲೆಗಳು ಹಾಗೆ ಉಳಿದುಬಿಡುತ್ತವೆ. ಇಂಥ ಕಲೆಗಳ ನಿವಾರಣೆಗೆ ಲೋಳೆಸರ ಬಳಸಬಹುದು.
ಲೋಳೆಸರ ಐಬ್ರೋ ಜೆಲ್ ಆಗಿಯೂ  ಉಪಯುಕ್ತ.

ಲೋಳೆಸರದ ನಿಯಮಿತ ಬಳಕೆಯಿಂದ ತ್ವಚೆಯನ್ನು ಸ್ವಚ್ಛವಾಗಿಡಬಹುದು. ಮುಖದಲ್ಲಿ ಮೂಡುವ ನೆರಿಗೆಗಳನ್ನೂ ತಡೆಗಟ್ಟಬಹುದು.

ಲೋಳೆಸರದ ತಿರುಳನ್ನು ಮಿಕ್ಸಿಗೆ ಹಾಕಿ ಪೇಸ್ಟ್‌ ತರಹ ಮಾಡಿಕೊಂಡು ತಲೆ ಕೂದಲಿಗೆ ಹಚ್ಚಿ ಸ್ನಾನ ಮಾಡಿ. ಇದು ಕೂದಲಿನ ಬುಡವನ್ನು ಭದ್ರ ಮಾಡುವುದಲ್ಲದೆ, ಹೊಳಪನ್ನೂ ನೀಡುತ್ತದೆ.

ಕಣ್ಣಿಗೆ ಕೆಳಗಿನ ಕಪ್ಪುವರ್ತುಲಗಳ ಕಲೆ ಹೋಗಲಾಡಿಸಲು ಲೋಳೆಸರ ಅತ್ಯುತ್ತಮ ಔಷಧಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT