ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾಮ್ ಶಬಾನಾ’ ಪೋಸ್ಟರ್ ಔಟ್‌

Last Updated 7 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ನಟಿ ತಾಪ್ಸಿ ಪನ್ನು ಅಭಿನಯದ ‘ನಾಮ್‌ ಶಬಾನಾ’ ಚಿತ್ರದ ಪೋಸ್ಟರ್ ಈಚೆಗೆ ಬಿಡುಗಡೆಯಾಗಿದ್ದು, ಬಾಲಿವುಡ್ ಅಂಗಳದಲ್ಲಿ ಭಾರಿ ಸುದ್ದಿ ಮಾಡುತ್ತಿದೆ.
ಶಿವಂ ನಾಯರ್ ನಿರ್ದೇಶನದ ಈ ಚಿತ್ರದ ಪೋಸ್ಟರ್ ಅನ್ನು ನಟ ಅಕ್ಷಯ್ ಕುಮಾರ್ ಟ್ವಿಟರ್‌ನಲ್ಲಿ ಶೇರ್ ಮಾಡಿ, ಮೆಚ್ಚುಗೆ ಮಾತನಾಡಿದ್ದಾರೆ.

‘ಹೆಂಗಸರು ತಮ್ಮ ಉಗುರಿನ ಬಣ್ಣ ಆರುವಾಗ ಮಾತ್ರ ಅಸಹಾಯಕರಾಗಿರುತ್ತಾರೆ ಎನ್ನುವ ಮಾತನ್ನು ಶಬಾನಾ ಸಿನಿಮಾ ನನಗೆ ನೆನಪಿಸಿತು...’ ಎಂದು ಅಕ್ಷಯ್ ಟ್ವೀಟ್ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ತಾಪ್ಸಿ ಜತೆಗೆ ಅಕ್ಷಯ್‌ಕುಮಾರ್, ಅನುಪಮ್  ಖೇರ್, ಡ್ಯಾನಿ ಡೆನ್ಜೊಪಾ, ಮಧುರಿಮಾ, ಮನೋಜ್ ಬಾಜಪೇಯಿ, ಎಲ್ಲಿ ಅವರಂ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರು ಚಿತ್ರದಲ್ಲಿದ್ದಾರೆ.

ಈ ಸಿನಿಮಾಕ್ಕಾಗಿ  ತಾಪ್ಸಿ ಮಾರ್ಷಲ್ ಆರ್ಟ್ ಕೂಡಾ ಕಲಿತಿದ್ದಾರಂತೆ. ಶಬಾನಾ ಕೈಫ್ ಎನ್ನುವ ಆ್ಯಕ್ಷನ್‌ ಥ್ರಿಲ್ಲರ್ ಪಾತ್ರದಲ್ಲಿ ನಟಿಸುತ್ತಿರುವ ತಾಪ್ಸಿ  ಈಗಾಗಲೇ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಹುಟ್ಟಿಸಿದ್ದಾಳೆ.

ಮುಂಬೈ ಮತ್ತು ಮಲೇಷ್ಯಾಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದ್ದು, ಫ್ರೆಂಚ್ ಸ್ಟಂಟ್‌ ಮ್ಯಾನ್‌ ಸೈರಿಲ್ ರಫೇಲಿ ಮತ್ತು ಸ್ಟಂಟ್‌ ನಿರ್ದೇಶಕ ಅಬ್ಬಾಸ್‌ ಅಲಿ ಖಾನ್ ತಾಪ್ಸಿಗೆ ತರಬೇತಿ ನೀಡಿದ್ದಾರಂತೆ. ಮಾರ್ಚ್‌ 31ರಂದು ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆ ಇದೆ. v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT