ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹ ಬಳಕೆ ಸಾಧನ ಹ್ಯಾಕ್‌ ಆಗದಿರಲಿ

Last Updated 7 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಆಧುನಿಕ ಮನೆಗಳಲ್ಲಿ ಇಂಟರ್ನೆಟ್ ಸಂಪರ್ಕ ಹೊಂದಿರುವ ವಿದ್ಯುತ್‌ ಬಲ್ಬ್‌,  ಟಿ.ವಿ ಮತ್ತು ಸ್ಪೀಕರ್‌ಗಳಿರುತ್ತವೆ. ಕೇವಲ ಒಂದು ಸರಳವಾದ ಧ್ವನಿ ಆಜ್ಞೆ ಮೂಲಕ ಅಥವಾ ಸ್ಮಾರ್ಟ್‌ಫೋನ್‌ನ ಒಂದು ಬಟನ್‌ ಒತ್ತುವ ಮೂಲಕ ಕೊಠಡಿಯ ಉಷ್ಣಾಂಶ ನಿಯಂತ್ರಿಸಬಹುದು, ಸ್ವಿಚ್‌ ಆನ್‌ ಮಾಡಬಹುದು ಇಲ್ಲವೇ ಟಿ.ವಿ ಕಾರ್ಯಕ್ರಮವನ್ನು ರೆಕಾರ್ಡ್ ಮಾಡಬಹುದು.

ತಪ್ಪು ಎಲ್ಲಿ ಆಗುತ್ತದೆ
ಈ ಎಲ್ಲ ಸಾಧನಗಳನ್ನು ಬಳಸುವ ಬಗ್ಗೆ ಜನ ತಿಳಿದುಕೊಂಡಿರುತ್ತಾರೆ. ಆದರೂ ಕೆಲವು ಬಾರಿ ಇವು ಕೈಕೊಡು ತ್ತವೆ. ಇಲ್ಲವೇ ಇವುಗಳಲ್ಲಿ ಒಂದು ದುರ್ಬಳಕೆ ಆಗುತ್ತದೆ. ಈ ಅತ್ಯಾಧುನಿಕ ಸಾಧನಗಳ ಮೇಲೆ ದೂರದಿಂದಲೇ ತಮ್ಮ ನಿಯಂತ್ರಣ ಹೊಂದುವವರು  ಉಪಕರಣ ಬಳಸುವವರ ಖಾಸಗಿ ವಿವರ, ಹಣಕಾಸು ಸ್ಥಿತಿಗತಿ, ಆರೋಗ್ಯ ಮುಂತಾದ ಮಾಹಿತಿ  ಸಂಗ್ರಹಿಸಿಟ್ಟು ಕೊಂಡಿರುತ್ತಾರೆ.  ಇದೊಂದು ಖಾಸಗಿ ಮಾಹಿತಿ ಸೋರಿಕೆ ಮತ್ತು ಭದ್ರತಾ ಲೋಪವೂ ಆಗಿರುತ್ತದೆ.

ಸಂತಸದ ಸುದ್ದಿ 
ಇಂತಹ   ತೊಂದರೆಗಳನ್ನು ಎದುರಿಸುವವರಿಗೆ ಈಗ ಒಂದು ಸಂತಸದ ಸುದ್ದಿ ಬಂದಿದೆ. ಗೃಹ ಬಳಕೆ ಸಾಧನಗಳಿಗೆ ಆನ್‌ಲೈನ್‌ ದಾಳಿ ಮಾಡುವುದನ್ನು ತಡೆಯಬಹುದಾಗಿದೆ.  ಇತ್ತೀಚೆಗೆ ನಡೆಸಿದ ಅಧ್ಯಯನವೊಂದರ  ಪ್ರಕಾರ ಅಮೆರಿಕದಲ್ಲಿ ಶೇ 10 ರಷ್ಟು ಗ್ರಾಹಕರು ಇಂತಹ ಆನ್‌ಲೈನ್ ದಾಳಿಯಿಂದ ಕಷ್ಟ ಅನುಭವಿಸಿದ್ದಾರೆ.
ಗೃಹ ಬಳಕೆ ಉಪಕರಣಗಳು ಸ್ಮಾರ್ಟ್ ಆದಷ್ಟೂ ಇವುಗಳನ್ನು ಹ್ಯಾಕರ್‌ಗಳು ದೊಡ್ಡ ಗುರಿಯಾಗಿರಿಸಿಕೊಳ್ಳುತ್ತಾರೆ.  ಮನೆಯ ಸಾಧನಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳಬೇಕಾದರೆ ಅವುಗಳ ಬಗ್ಗೆ ಭದ್ರತಾ ತಜ್ಞರಿಂದ ಮಾಹಿತಿ ಪಡೆದುಕೊಳ್ಳಬೇಕು.

ಖರೀದಿ ಮುನ್ನ  ಅಧ್ಯಯನ  ನಡೆಸಿ
ಅಂತರ್ಜಾಲ ಸಂಪರ್ಕದ ಗೃಹ ಬಳಕೆ ಸಾಧನಗಳಾದ ಸ್ಮಾರ್ಟ್ ಸ್ಪೀಕರ್‌, ಬೆಳಕಿನ ಉಪಕರಣಗಳು, ಟಿ.ವಿ ಮುಂತಾದ ವುಗಳನ್ನು ಕೊಳ್ಳುವ ಮೊದಲು  ಅಧ್ಯಯನ ನಡೆಸುವುದು ಒಳ್ಳೆಯದು.

ಒಳ್ಳೆಯ ಹೆಸರು ಪಡೆದಿರುವ ಕಂಪೆನಿಗಳಾದ ಅಮೆಜಾನ್ ಮತ್ತು ಗೂಗಲ್, ಭದ್ರತೆಯನ್ನು ಗಮನದಲ್ಲಿ ಇಟ್ಟುಕೊಂಡು ಇಂತಹ ಉಪಕರಣ ಗಳನ್ನು ತಯಾರು ಮಾಡಿ ಮಾರಾಟ ಮಾಡುತ್ತವೆ. ‘ಈ ರೀತಿಯ ಸಾಧನಗಳನ್ನು ಕೊಳ್ಳುವ ಮೊದಲು ಅಂತರ್ಜಾಲ ತಾಣದಲ್ಲಿ ಮಾಹಿತಿ ಹುಡುಕಾಟ ನಡೆಸಬೇಕು.  ಉಪಕರಣ  ತಯಾರಿಸಿದ ಕಂಪೆನಿ ಸಾಫ್ಟ್‌ವೇರ್ ಅನ್ನು ಅಪ್‌ಡೇಟ್ ಮಾಡುತ್ತದೆಯೇ ಇಲ್ಲವೇ  ಎಂಬುದನ್ನು ನೋಡಬೇಕು’ ಎಂದು  ಸಂಶೋಧಕ ಲಿವಿವು ಆರ್ಸೇನ್‌ ಹೇಳುತ್ತಾರೆ.

ಕಂಪೆನಿಗಳ ಖಾಸಗಿ ನೀತಿಯನ್ನು ಗ್ರಾಹಕರು ತಿಳಿದುಕೊಂಡಿರಬೇಕು. ಕಂಪೆನಿಗಳೇ ಹ್ಯಾಕರ್‌ಗಳಿಗೆ ನೆರವು ನೀಡ ದಂತೆ ಇವೆಯೇ ಇಲ್ಲವೇ ಎಂಬುದನ್ನು ರಹಸ್ಯವಾಗಿ ತಿಳಿದುಕೊಂಡಿರಬೇಕು.

ಅಮೆಜಾನ್‌ ಮತ್ತು ಗೂಗಲ್‌ನ ಸ್ಮಾರ್ಟ್‌ ಸ್ಪೀಕರ್‌ಗಳನ್ನೇ ತೆಗೆದುಕೊಳ್ಳಿ. ಅಮೆಜಾನ್‌ನಲ್ಲಿ ಅಲೆಕ್ಸಾ ಸ್ಮಾರ್ಟ್‌ ಅಸಿಸ್ಟೆಂಟ್‌ ಎಂಬುದನ್ನು ಎಕೊ ಸ್ಪೀಕರ್‌ಗಳಲ್ಲಿ ಬಳಸಲಾಗುತ್ತದೆ. ಇದು ಸ್ವಯಂಚಾಲಿತವಾಗಿ ಸಾಫ್ಟ್‌ವೇರ್‌ ಅನ್ನು  ಮೇಲ್ದರ್ಜೆಗೇರಿಸಿ ಕೊಂಡು ಯಾವುದೇ ಭದ್ರತಾ ಬೆದರಿಕೆಯನ್ನು ತಡೆದುಕೊಳ್ಳು ತ್ತದೆ. ಈ ಮಾಹಿತಿ ಅಮೆಜಾನ್‌ನ ಸರ್ವರ್‌ಗಳಲ್ಲಿ ಸಂಗ್ರಹವಾಗುತ್ತದೆ.

ಗೂಗಲ್‌ ಕಂಪೆನಿಯ  ಹೋಂ ಸ್ಪೀಕರ್‌ ಸಹ ತನ್ನಿಂತಾನೆ ತಂತ್ರಾಂಶ ಗಳನ್ನು ಉನ್ನತೀಕರಿಸಿಕೊಳ್ಳುತ್ತದೆ. ಇದರಿಂದ ಅತ್ಯಾಧುನಿಕ ಭದ್ರತಾ ವ್ಯವಸ್ಥೆಗಳು ಇರುತ್ತವೆ. ಧ್ವನಿ ಆಜ್ಞೆಗಳನ್ನು ನೀಡಿದ್ದರೆ ಅವುಗಳ ಮೂಲಕ ಮಾತ್ರವೇ ತೆರೆಯಬಹುದು.

ಆದರೆ, ಕೆಲವು ಖ್ಯಾತಿ ಪಡೆದ ಬ್ರ್ಯಾಂಡ್‌ಗಳ ಉತ್ಪನ್ನಗಳ ಬಗ್ಗೆ ಗ್ರಾಹಕರು ಆಕ್ಷೇಪವ್ಯಕ್ತಪಡಿಸಿದ್ದಾರೆ. ಸ್ಮಾರ್ಟ್ ಟಿ.ವಿ  ತಯಾರಕಾ ಕಂಪೆನಿ ವಿಜಿಯೊ (Vizio) ಕೆಲ ದಿನಗಳ ಹಿಂದೆ ಸುದ್ದಿಯಾಗಿತ್ತು. ಗ್ರಾಹಕರ ವೀಕ್ಷಣಾ ಹವ್ಯಾಸಗಳನ್ನು ಇದು ದಾಖಲು ಮಾಡಿಕೊಂಡು ಅದನ್ನು ಜಾಹೀರಾತುದಾರರೊಂದಿಗೆ ಹಂಚಿಕೊಂಡಿತ್ತು.

ವೈಫೈ ಭದ್ರತೆ ಬಲಪಡಿಸಿಕೊಳ್ಳಿ
ನಿಮ್ಮ ವೈಫೈ ಜಾಲವೇ ಮನೆಯ  ಭದ್ರತೆಯ ನಾಡಿ. ಇದುವೇ ದಾಳಿಯ ಪ್ರಮುಖ ಕೇಂದ್ರವೂ ಹೌದು. ಆದ್ದರಿಂದ  ಎರಡು ವಿಶಿಷ್ಟ ವೈಫೈ ಜಾಲವಿದ್ದರೆ ಹ್ಯಾಕರ್‌ಗಳಿಗೆ ಅಷ್ಟು ಸುಲಭವಾಗುವುದಿಲ್ಲ. ಇದಕ್ಕಾಗಿ ಅತಿಥಿ ವೈಫೈ ಜಾಲ ಇಟ್ಟುಕೊಂಡಿರಬೇಕು. ಆಗ ಯಾವುದೇ ಮುಖ್ಯ ವೈಫೈ ಜಾಲಕ್ಕೆ ಕನ್ನ ಹಾಕಿದಾಗ ಮತ್ತೊಂದು ಜಾಲಕ್ಕೆ ಬದಲಾಯಿಸಿಕೊಳ್ಳಬಹುದು. ವೈಫೈ ಜಾಲದ ಬಗ್ಗೆ ನಿಮಗೆ ಸಂಶಯ ಇದ್ದರೆ ಅದರ ರೂಟರ್‌ ಜಾಲದ ಸೆಟ್ಟಿಂಗ್ ಅನ್ನು ಬದಲಿಸಿಕೊಳ್ಳಬಹುದು.

ಪಾಸ್‌ವರ್ಡ್‌ ಬಲವಾಗಿರಲಿ
ಎಲ್ಲ ರೀತಿಯ ವ್ಯವಹಾರಗಳಿಗೆ ಪಾಸ್‌ವರ್ಡ್‌ ಇರಲೇ ಬೇಕು. ಅದರಲ್ಲೂ ಇಂಟರ್‌ನೆಟ್ ಆಧಾರಿತ ಲಾಗಿನ್‌ಗಳಿಗೆ ಕಡ್ಡಾಯ. ಮನೆಯ ರಕ್ಷಣಾ ಸಾಧನಗಳಿಗೂ ಬಲವಾದ, ವಿಶಿಷ್ಟವಾದ ಪಾಸ್‌ವರ್ಡ್‌ಗಳನ್ನು ಇಟ್ಟಿರಬೇಕು. ಅದರಲ್ಲಿ ಅಕ್ಷರಗಳು, ಅಂಕಿಗಳು ಮತ್ತು ವಿಶೇಷ ಕೀಲಿ ಮಣಿ ಚಿಹ್ನೆಗಳು ಇರಬೇಕು. ನೀವೇ ಇಟ್ಟ ಪಾಸ್‌ವರ್ಡ್‌ ಅನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ ಎಂದಾರೆ ಇನ್ನು ಹ್ಯಾಕರ್ ಹೇಗೆ ಪತ್ತೆಹಚ್ಚುತ್ತಾನೆ. ಪಾಸ್‌ವರ್ಡ್‌ಗಳನ್ನು ರಹಸ್ಯವಾಗಿ ಬರೆದಿಡಿ.

ಸಾಧನಗಳ ತಪಾಸಣೆ ಮಾಡುತ್ತೀರಿ: 
ಮನೆಯ ರಕ್ಷಣಾ ಸಾಧನಗಳ ಖರೀದಿಯಲ್ಲಿ ತೋರಿದ ಆಸಕ್ತಿಯನ್ನೇ ಅವುಗಳ ದುರಸ್ತಿ, ಸ್ವಚ್ಛತೆ ಕಡೆ ತೋರಬೇಕು. ವಿದ್ಯುತ್ ಸಂಪರ್ಕದ ಸಾಧನಗಳಾದ ಕಾರಣ ಅವುಗಳು ದಿನ ಕಳೆದಂತೆ ಕಾರ್ಯನಿರ್ವಹಣಾ ಶಕ್ತಿ ಕಳೆದುಕೊಳ್ಳಬಹುದು.

- ಬ್ರಿಯಾನ್‌ ಎಕ್ಸ್  ಚೆನ್‌, ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT