ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಸಾಗಿದೆ ಸಮರೋಪಾದಿ ಪ್ರಯತ್ನ

ದಕ್ಷಿಣ ಕನ್ನಡ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ದಿನಗಣನೆ– ಫಲಿತಾಂಶ ಸುಧಾರಣೆಯ ಆಶಾಭಾವ
Last Updated 8 ಫೆಬ್ರುವರಿ 2017, 6:54 IST
ಅಕ್ಷರ ಗಾತ್ರ

ಮಂಗಳೂರು: 2016ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 3ನೇ ಸ್ಥಾನಕ್ಕೇರಿದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಫಲಿತಾಂಶ ವನ್ನು ಇನ್ನಷ್ಟು ಸುಧಾರಿಸುವ ಉದ್ದೇಶ ದಿಂದ ಸಮರೋಪಾದಿಯ ಪ್ರಯತ್ನಗಳು ನಡೆಯುತ್ತಿವೆ. ಪಕ್ಕದ ಕೊಡಗು, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೂ ಅನ್ವಯಿಸುವಂತೆ ‘ಶೂನ್ಯ ಅನುತ್ತೀರ್ಣತೆಯತ್ತ’ ಎಂಬ ಪರಿಕಲ್ಪನೆ ಯನ್ನು ರೂಪಿಸಲಾಗಿದ್ದು,  ವಿದ್ಯಾರ್ಥಿ ಗಳು ಬಿಡುವಿಲ್ಲದೆ ಓದುತ್ತಿದ್ದಾರೆ.

2016 ರ ಎಸೆಸೆಲ್ಸಿ ಪರೀಕ್ಷೆಯಲ್ಲಿ 25 ಕ್ಕಿಂತ ಹೆಚ್ಚು ಮಂದಿ ಅನುತ್ತೀರ್ಣ ಅಭ್ಯರ್ಥಿಗಳಿರುವ ಶಾಲೆಗಳು – ರೆಡ್ 2 ಎಂದು ಗುರುತಿಸಲಾಗಿದೆ. 13 ರಿಂದ 24 ಮಂದಿ ಅನುತ್ತೀರ್ಣ ಅಭ್ಯರ್ಥಿಗಳಿರುವ ಶಾಲೆಗಳು – ರೆಡ್1 ಎಂದು ಗುರುತಿಸ ಲಾಗಿದ್ದು, ರೆಡ್‌ 2 ವಿಭಾಗದಲ್ಲಿ ಅತೀ ಹೆಚ್ಚಿನ ಶಾಲೆಗಳು ದಕ್ಷಿಣ ಕನ್ನಡದ ಲ್ಲಿಯೇ ಇರುವುದು ಅಚ್ಚರಿ ಮೂಡಿಸಿದೆ.

ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಂಶುಪಾಲ ನಾಗೇಂದ್ರ ಮಧ್ಯಸ್ಥ ಅವರ ನೇತೃತ್ವದಲ್ಲಿ  ಈ ಗುರುತಿಸುವಿಕೆಯನ್ನು ನಡೆಸಿದ್ದು, ಶಾಲಾ ಮಟ್ಟದಲ್ಲಿ ಮತ್ತು ಕ್ಷೇತ್ರ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಭ್ಯಾಸ ಮಾಡಿಸಲಾಗುತ್ತಿದೆ. ದಕ್ಷಿಣ ಕನ್ನಡದಲ್ಲಿ ರೆಡ್‌ 1 ವಿಭಾಗದಲ್ಲಿ 55 ಶಾಲೆ ಹಾಗೂ 2 ವಿಭಾಗದಲ್ಲಿ 22 ಶಾಲೆಗಳಿದ್ದರೆ, ಚಿಕ್ಕಮಗಳೂರಿನಲ್ಲಿ ರೆಡ್‌ 1 ನೇ ವಿಭಾಗದಲ್ಲಿ 29 ಶಾಲೆ ಮತ್ತು 2 ವಿಭಾಗದಲ್ಲಿ 14 ಶಾಲೆಗಳಿವೆ.

ಉಡುಪಿ ಯಲ್ಲಿ1ನೇ ವಿಭಾಗದಲ್ಲಿ 18 ಮತ್ತು ಎರಡನೇ ವಿಭಾಗದಲ್ಲಿ 8 ಶಾಲೆಗಳನ್ನು ಗುರುತಿಸಲಾಗಿದ್ದು, ಕೊಡಗಿನಲ್ಲಿ ಒಂದ ನೇ ವಿಭಾಗದಲ್ಲಿ 27 ಶಾಲೆ ಹಾಗೂ 2ನೇ ವಿಭಾಗದಲ್ಲಿ 15 ಶಾಲೆಗಳನ್ನು ಗುರುತಿ ಸಲಾಗಿದೆ.  ಪ್ರತಿ ರೆಡ್ 2 ಶಾಲೆಗಳಿಗೆ ಒಬ್ಬ ಶಿಕ್ಷಣ ಇಲಾಖಾ ಅಧಿಕಾರಿಯನ್ನು ಉಸ್ತುವಾರಿಗಾಗಿ ನೇಮಿಸಲಾಗಿದೆ.

ಸಾಲು ಸಾಲು ಕಾರ್ಯಾಗಾರಗಳು: ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ಪಡೆಯಬೇಕು ಎಂಬ ಜಾಗೃತಿಯನ್ನು ಪೋಷಕರಲ್ಲಿ ಮೂಡಿಸುವ ದೃಷ್ಟಿ ಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕಾರ್ಯಾಗಾರಗಳನ್ನು ನಡೆಸಲಾಗಿದೆ. 2016ರ ಜೂನ್‌ ತಿಂಗಳಿ ನಿಂದಲೇ ಸರಣಿ ಕಾರ್ಯಾಗಾರಗಳು ನಡೆದಿವೆ. ಸ್ಥಳೀಯ ಶಾಸಕರು ಮತ್ತು ಜನಪ್ರತಿನಿಧಿಗಳ ಸಹಭಾಗಿತ್ವದಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳ ಪಾಠ ಪ್ರವಚನದ ಬಗ್ಗೆ ನಿಗಾ ಇಡಲಾಗಿದೆ ಎನ್ನುತ್ತಾರೆ ಜಿಲ್ಲೆಯ  ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು.

ಬಂಟ್ವಾಳದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್‌ ಅವರು ಹೇಳುವ ಪ್ರಕಾರ, ತಾಲ್ಲೂಕು ವ್ಯಾಪ್ತಿಯ ಎಲ್ಲ ಶಾಲೆಗಳಲ್ಲಿ ಎಂಟನೇ ತರಗತಿಯಿಂದಲೇ ವಿದ್ಯಾರ್ಥಿ ಗಳನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಜ್ಜುಗೊಳಿ ಸಲಾಗುತ್ತದೆ. ಬಂಟ್ವಾಳದಲ್ಲಿ 11 ರೆಡ್‌ 2 ವಿಭಾಗದ ಶಾಲೆಗಳಿದ್ದು, ಸ್ಥಳೀಯ ಸಮುದಾಯಗಳ ಸಹಭಾಗಿತ್ವದಲ್ಲಿ ಕಾರ್ಯಾಗಾರಗಳನ್ನು ನಡೆಸಲಾಗಿದೆ.

ಸ್ಥಳೀಯ ಸಂಘಟನೆಗಳ ಸಹಭಾಗಿತ್ವ: ಮೂಡುಬಿದರೆಯಲ್ಲಿಯೂ ಸ್ಥಳೀಯ ವಾಗಿ ಜಮೀಯತ್‌ ಉಲ್‌ ಫಲಾಹ್‌ ಮತ್ತು ಜೇಸೀಸ್‌ ಸಂಘಟನೆಗಳು ಮುತು ವರ್ಜಿ ವಹಿಸಿದ್ದು, ಕಾರ್ಯಾಗಾರಗಳನ್ನು ನಡೆಸಿವೆ. 6 ಕೇಂದ್ರಗಳನ್ನು ಮಾಡಿ, ಓದಿನಲ್ಲಿ ತುಸು ಹಿಂದೆ ಇರುವ ವಿದ್ಯಾ ರ್ಥಿಗಳಿಗೆ ಎಲ್ಲ ವಿಷಯಗಳ ಹೆಚ್ಚುವರಿ ಅಭ್ಯಾಸವನ್ನು ಮಾಡಿಸಲಾಗಿದೆ. ಫೆಬ್ರುವರಿಯಲ್ಲಿ ಮತ್ತೆ ಕಾರ್ಯಾಗಾರ ಮತ್ತು ಬೋಧನಾ ತರಗತಿಗಳನ್ನು ಆಯೋಜಿಸಲಾಗಿದೆ ಎಂದು ಬಿಇಒ  ಬಿ. ರಾಜಶ್ರೀ ಹೇಳುತ್ತಾರೆ.

ಬೆಳ್ತಂಗಡಿಯಲ್ಲಿಯೂ ಎಂಟು ಕೇಂದ್ರಗಳಲ್ಲಿ ಒಟ್ಟು 467 ಮಕ್ಕಳನ್ನು ಗುರುತಿಸಿ, ವಿಶೇಷ ಬೋಧನಾ ತರಗತಿಗಳನ್ನು ಎರಡು ಹಂತಗಳಲ್ಲಿ ನಡೆಸಲಾಗಿದೆ. ಪ್ರತಿಶನಿವಾರ ಈ ತರಗತಿಗಳು ನಡೆದಿದ್ದು ಜಮೀಯತ್‌ ಫಲಾಹ್‌ ಸಂಘಟನೆ ಈ ಕ್ರಮಕ್ಕೆ ಕೈ ಜೋಡಿಸಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿ ಗಳು ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳತ್ತ ಶಿಕ್ಷಕರು ಹೆಚ್ಚಿನ ಗಮನ ಹರಿಸುತ್ತಿದ್ದಾರೆ ಎನ್ನುತ್ತಾರೆ ಬಿಇಒ ತಾರಕೇಸರಿ.

ಕಳೆದ ಬಾರಿ 95 ಪ್ಲಸ್‌ ಮಿಷನ್‌ ಎಂಬ ಪರಿಕಲ್ಪನೆಯನ್ನು ಆರಂಭಿಸಿದ ಪುತ್ತೂರು ಕ್ಷೇತ್ರ ಈ ಬಾರಿಯೂ ಅದೇ ಮಾದರಿ ಅನುಸರಿಸುತ್ತಿದೆ. ಜೊತೆಗೆ ಜಮೀಯತ್‌ ಉಲ್‌ ಫಲಾಹ್‌ ಮತ್ತು ಸ್ಥಳೀಯ ಸಂಘಗಳು ಕೂಡ ವಿದ್ಯಾರ್ಥಿ ಗಳ ಕೋಚಿಂಗ್‌ಗೆ ಕೈ ಜೋಡಿಸುತ್ತಿವೆ ಎಂದು ಪ್ರಭಾರ ಬಿಇಒ ವಿವರಿಸುತ್ತಾರೆ.

ಪುತ್ತೂರು, ಸುಳ್ಯ ಮತ್ತು ಮಂಗ ಳೂರು ಉತ್ತರ ಹಾಗೂ ದಕ್ಷಿಣ ವಿಭಾಗದಲ್ಲಿಯೂ ಪರೀಕ್ಷಾ ತಯಾರಿ ಗಳು ಭರದಿಂದ ಸಾಗಿದ್ದು, ವಿದ್ಯಾರ್ಥಿಗಳಿಗೆ ಪೂರಕ ವಾತಾವರಣ ಕಲ್ಪಿಸಲು ಶಿಕ್ಷಕರು ಮತ್ತು ಪೋಷಕರು ಹಾಗೂ ಸಾಮಾಜಿಕ ಸಂಘಟನೆಗಳು ಎಲ್ಲ ಪ್ರಯತ್ನಗಳನ್ನೂ ನಡೆಸುತ್ತಿದ್ದಾರೆ.

*
ಎಸ್ಸೆಸ್ಸೆಲ್ಸಿಯಲ್ಲಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆ ಯಲು ಈ ಬಾರಿ ಸ್ಥಳೀಯ ಸಂಸ್ಥೆಗಳೂ ಕೈ ಜೋಡಿಸಿವೆ. ಅಗತ್ಯವಿರುವ ಕಡೆ ಸನಿವಾಸ ಶಿಬಿರ ನಡೆಸಲಾಗುವುದು.
-ವಾಲ್ಟರ್‌ ಡಿಮೆಲ್ಲೋ,
ಡಿಡಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT