ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೃಶ್ಯಭೂಷಣ’ ಪ್ರಶಸ್ತಿ ಪ್ರದಾನ ಫೆ.10ಕ್ಕೆ

Last Updated 8 ಫೆಬ್ರುವರಿ 2017, 7:22 IST
ಅಕ್ಷರ ಗಾತ್ರ

ಕಲಬುರ್ಗಿ: ದೃಶ್ಯಕಲೆಯ ಪರಂಪರೆ­ಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಿದ ದಿ.ಶಾಂತಲಿಂಗಪ್ಪ ಪಾಟೀಲರ 135ನೇ ವರ್ಷಾಚರಣೆ ಪ್ರಯುಕ್ತ ಫೆ.10 ಮತ್ತು 11 ರಂದು  2015ನೇ ಸಾಲಿನ ಹಿರಿಯರ ನೆನಪು ‘ದೃಶ್ಯಭೂಷಣ’ ಪ್ರಶಸ್ತಿ ಪ್ರದಾನ, ಕೃತಿಗಳ ಪ್ರದರ್ಶನ ಹಾಗೂ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ದಿ ಐಡಿಯಲ್ ಫೈನ್ ಆರ್ಟ್ ಸಂಸ್ಥೆ ಕಾರ್ಯದರ್ಶಿ ಡಾ. ವಿ.ಜಿ.ಅಂದಾನಿ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ ಐಡಿಯಲ್ ಫೈನ್ ಆರ್ಟ್ ಹಾಗೂ ಬೆಂಗಳೂರಿನ ಚಿತ್ರಕಲಾ ಪರಿಷತ್ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

2015ನೇ ಸಾಲಿನ ‘ದೃಶ್ಯಭೂಷಣ’ ಪ್ರಶಸ್ತಿಯನ್ನು ಯುವ ಕಲಾವಿದ ಜಿ.ಆರ್ ಈರಣ್ಣ ಅವರಿಗೆ ಪ್ರದಾನ ಮಾಡಲಾಗುತ್ತಿದೆ. ಅಲ್ಲದೆ ವಿವಿಧ ಪ್ರಕಾರದ ಕಲೆಗಳಲ್ಲಿ ಗುರುತಿಸಿಕೊಂಡಿರುವ 20 ವಿದ್ಯಾರ್ಥಿಗಳಿಗೆ ತಲಾ ₹3 ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಗುತ್ತಿದೆ ಎಂದರು. 

1882 ರಿಂದ1977ರ ಅವಧಿಯಲ್ಲಿ ಪ್ರಕಟಗೊಂಡ ದಿ.ಶಾಂತಲಿಂಗಪ್ಪ ಪಾಟೀಲ ನಿಂಬಾಳ ಅವರ ಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗುವುದು. ಫೆ.10 ರಂದು ಕರ್ನಾಟಕ ಕೇಂದ್ರಿಯ ವಿಶ್ವ­ವಿದ್ಯಾಲಯದ ಕುಲಪತಿ ಪ್ರೊ.ಎಚ್.ಎಂ. ಮಹೇಶ್ವರಯ್ಯ ಪ್ರದರ್ಶನ ಉದ್ಘಾಟಿಸಲಿ­ದ್ದಾರೆ.

ಕಲಾವಿದ ವಿಜಯ ಸಿಂಧೂರ ಕ್ಯಾಟಲಾಗ್ ಬಿಡುಗಡೆಗೊಳಿಸುವರು. ಗುಲಬರ್ಗಾ ವಿಶ್ವವಿದ್ಯಾಲಯ ಕುಲಸಚಿವ ಪ್ರೊ.ದಯಾನಂದ ಅಗಸರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ವಿಚಾರ ಸಂಕಿರಣ: ಮೊದಲನೆ ದಿನ ಸೃಜನ ಶೀಲತೆ, ಜಲವರ್ಣ ಮಾಧ್ಯಮ, ಕಲಾವಿದ ಹಾಗೂ ಪೋಸ್ಟರ್ ಕಲರ್ ವಿಷಯಗಳ ಕುರಿತು ಗೋಷ್ಠಿಗಳು ನಡೆಯಲಿವೆ. ಫೆ.11 ರಂದು ಕಲಾವಿದ ಮತ್ತು ಕವಿ, ಭಾವಚಿತ್ರ ಪರಂಪರೆ ಮತ್ತು ಡ್ರಾಯಿಂಗ್ ವಿಷಯಗಳನ್ನೊಳಗೊಂಡ ಗೋಷ್ಠಿಗಳು ನಡೆಯಲಿವೆ ಎಂದು ವಿವರಿಸಿದರು.

ದಿ ಐಡಿಯಲ್ ಫೈನ್ ಆರ್ಟ್ ಕಾಲೇಜಿನ ಪ್ರಾಚಾರ್ಯ ಪೂರ್ಣಿಮಾ ಪಾಟೀಲ, ಡಾ.ಸತೀಶ, ಅಮರಮ್ಮ ಪಾಟೀಲ, ರಾಜಶೇಖರ ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT