ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದ್ದೂರಿ ಸೇವಾಲಾಲ ಜಯಂತಿಗೆ ನಿರ್ಧಾರ

Last Updated 8 ಫೆಬ್ರುವರಿ 2017, 7:37 IST
ಅಕ್ಷರ ಗಾತ್ರ

ಹುಣಸಗಿ: ಸಮೀಪದ ಕೊಡೇಕಲ್ಲ ಗ್ರಾಮದ ಪ್ಯಾಟಿ ಬಸವೇಶ್ವರ ದೇವಾಲಯದ ಕಲ್ಯಾಣ ಮಂಟಪದಲ್ಲಿ ಬಂಜಾರ ಸಮುದಾಯದ ಸಭೆ ನಡೆಸಿ, ಸತ್ಯ ಸೇವಾಲಾಲ ಜಯಂತಿ ಆಚರಣೆ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ಯುವ ಮುಖಂಡ ತಾರಾನಾಥ ಚವಾಣ ಮಾತನಾಡಿ, ಸುರಪುರ ತಾಲ್ಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂಜಾರ ಸಮುದಾಯ ದವರು ಇದ್ದಾರೆ. ಆದರೆ, ಈ ಜನಾಂಗ ಇಂದಿಗೂ ಅಲ್ಲಲ್ಲಿ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿಲ್ಲ. ಆದ್ದರಿಂದ ಸೇವಾಲಾಲ ಗುರುಗಳ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡುವ ಮೂಲಕ ಸಮಾಜವನ್ನು ಒಗ್ಗುಡಿಸುವ ಕೆಲಸ ಮಾಡಬೇಕು ಎಂದು ಸಭೆಯಲ್ಲಿ ತಿಳಿಸಿದರು.

ಇದು ತಾಲ್ಲೂಕು ಮಟ್ಟದ ಕಾರ್ಯ ಕ್ರಮವಾಗಿ ಹಮ್ಮಿಕೊಳ್ಳುವ ಅಗತ್ಯವಿದೆ. ಇದರಿಂದಾಗಿ ಪ್ರತಿಯೊಬ್ಬರೂ ತನು, ಮನ, ಧನದಿಂದ ಹಾಗೂ ಸಹಕಾರ ಮನೋಭಾವನೆಯಿಂದ ಕೆಲಸ ಮಾಡುವುದು ಅಗತ್ಯ ಎಂದರು.

ಮುಖಂಡ ಶಾಂತಿಲಾಲ ಮಾತ ನಾಡಿ, ಯುವಕರು ಮುಂದೆ ಬಂದು ಹಿರಿಯರ ಮಾರ್ಗದರ್ಶನದಲ್ಲಿ ಅಚ್ಚುಕ ಟ್ಟಾದ ಕಾರ್ಯಕ್ರಮ ರೂಪಿಸಬೇಕು. ಇದಕ್ಕೆ ತಾಲ್ಲೂಕಿನ ಬಂಜಾರ ಮುಖಂ ಡರ ಸಹಕಾರ ಇರುತ್ತದೆ ಎಂದರು.

ಸಮಾಜದ ಹಿತದೃಷ್ಟಿಯಿಂದ ಪಕ್ಷಬೇಧ ಮರೆತು ಪ್ರತಿಯೊಬ್ಬರೂ ಒಗ್ಗೂಡಿ ಸಭೆ ಹಾಗೂ ಜಯಂತಿ ಯಶಸ್ವಿಗೆ ಸಹಕರಿಸಬೇಕು ಎಂದರು. ಈ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಚರ್ಚಿಸಿ ಫೆ.15ರಂದು ಹುಣಸಗಿಯಲ್ಲಿ ತಾಲ್ಲೂಕು ಮಟ್ಟದ ಸೇವಾಲಾಲ ಜಯಂತಿ ಆಚರಿಸಲು ತಿರ್ಮಾನಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಎನ್.ಡಿ. ನಾಯಕ, ಬಂಜಾರ ಸಮಾಜದ ಜಿಲ್ಲಾ ಘಟಕದ ಉಪಾಧ್ಯಕ್ಷ ಬಾಸುನಾಯಕ ಚವಾಣ, ತಾಲ್ಲೂಕು ಘಟಕದ ಬಂಜಾರ ಅಧ್ಯಕ್ಷ ನಿಂಗಾನಾಯಕ ರಾಠೋಡ, ವೆಂಕಟೇಶ ಸಾಹುಕಾರ ರಾಠೋಡ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಶೇಖರನಾಯಕ, ಚಂದ್ರಶೇಖರ ಚವಾಣ, ಭೀಮಾನಾಯಕ, ಬಾಸುನಾಯಕ, ವಿಠ್ಠಲ್ ಪವಾರ, ಲಕ್ಷ್ಮಣ ಕೋಳಿಹಾಳ, ಬಾಬು ಚವ್ವಾಣ, ಗುಂಡು ಗೆದ್ದಮರಿತಾಂಡಾ, ಬಾಬು ಹುಣಸಗಿ, ಗುರು ರಾಠೋಡ, ಶಂಕರ ಲಮಾಣಿ, ತಿರುಪತಿ ಪವಾರ, ಬಾಲಾಜಿ ಚವ್ವಾಣ, ಲಾಲುನಾಯಕ, ತಿಪ್ಪಣ್ಣ ಗೆದ್ದಲಮರಿ, ಮೋತಿಲಾಲ್, ತಿರುಪತಿ ಕಕ್ಕೇರಾ ಪಾಲ್ಗೊಂಡಿದ್ದರು. ಬಾಸುನಾಯಕ ಚವ್ವಾಣ ಸ್ವಾಗತಿಸಿ, ಗುರುನಾಥ ರಾಠೋಡ ನಿರೂಪಿಸಿ, ಬಾಲಾಜಿ ಚವಾಣ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT