ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಚನ ಸಾಹಿತ್ಯ ಶ್ರೀಮಂತಗೊಳಿಸಿದ ಸಿದ್ಧರಾಮರು’

Last Updated 8 ಫೆಬ್ರುವರಿ 2017, 9:01 IST
ಅಕ್ಷರ ಗಾತ್ರ

ಗಜೇಂದ್ರಗಡ: ವಚನ ಸಾಹಿತ್ಯವನ್ನು ತಮ್ಮ ಬದುಕಿನ ಸಾರವನ್ನಾಗಿಸಿ ಆ ಅನು­ಭವಗಳನ್ನು ಭಟ್ಟಿ ಇಳಿಸದ ಶಿವಯೋಗಿ ಸಿದ್ಧರಾಮರು ಒಂದು ಜಾತಿಗೆ ಸೀಮಿತವಾಗದೆ ಮನುಕುಲ ಉದ್ಧಾರ ಮಾಡಿದ ದಾರ್ಶನಿಕ ಶರಣರು ಎಂದು ಮೈಸೂರ ಮಠದ ವಿಜಯಮಹಾಂತ ಸ್ವಾಮೀಜಿ ಹೇಳಿದರು.

ಅವರು ಸೂಡಿ ಗ್ರಾಮದಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ತಾಲ್ಲೂಕು ಆಡಳಿತದಿಂದ ಶನಿವಾರ ನಡೆದ ಶಿವಯೋಗಿ ಸಿದ್ಧರಾಮೇಶ್ವರರ 845ನೇ ಜಯಂತಿ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಶರಣ ಶ್ರೇಷ್ಠ ಬಸವಣ್ಣನವರ  ಶರಣ ಸಮೂಹದಲ್ಲಿ ಅಗ್ರ ಗಣ್ಯರಾದ ಸಿದ್ಧ­ರಾಮೇಶ್ವರರು ಕಾಯಕ ಪ್ರೇಮಿ­ಯಾಗಿ, ಬಿಜ್ಜಳನ ಕರೆಯನ್ನು ಧಿಕ್ಕರಿಸಿ ಅಧಿಕಾರ ವಿಮುಖರಾಗಿ ಶರಣ ಧರ್ಮದಲ್ಲಿ ಬಾಳಿ ಬದುಕಿದವರು ಎಂದು ಹೇಳಿದರು. ಭೋವಿ ಸಮಾಜದ ಗುರುಗಳಾದ ಇಮ್ಮಡಿ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಂತರ ಎಪಿಎಂಸಿ ಅಧ್ಯಕ್ಷ ವೀರಣ್ಣ ಶೆಟ್ಟರ ಮಾತನಾಡಿದರು.

ಸಮಾರಂಭದಲ್ಲಿ ಮಾಜಿ ಸಂಸದ ಆರ್.ಎಸ್.ಪಾಟೀಲ, ಐ.ಎಸ್.ಪಾಟೀಲ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ರೂಪಾ ಅಂಗಡಿ, ಸೂಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಅಂಬಿಕಾ ಕುಲಕರ್ಣಿ, ಉಪಾಧ್ಯಕ್ಷ ಪ್ರದೀಪ ನೂಲ್ವಿ, ತಾಲ್ಲೂಕು ಪಂಚಾಯ್ತಿ ಸದಸ್ಯ ಶಶಿಧರ ಹೂಗಾರ, ಸಮಾಜದ ಅಧ್ಯಕ್ಷ ಯಲ್ಲಪ್ಪ ಬಂಕದ, ಬಸವರಾಜ ಬಂಕದ, ಶರಣಪ್ಪ ಚಳಗೇರಿ, ಶಿವಬಸವ ಬೆಲ್ಲದ, ನಿಂಗಪ್ಪ ಕಾಶಪ್ಪನವರ, ಎಫ್.ಎಸ್. ಕರಿದುರಗನವರ, ಜೆ.ಎಸ್. ವಡ್ಡರ ಇತರರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಸೂಡಿ ಗ್ರಾಮದಲ್ಲಿ ಶಿವಯೋಗಿ ಸಿದ್ಧರಾಮರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT