ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಳಿ ಅಂಗಡಿ ತ್ಯಾಜ್ಯದಿಂದ ದುರ್ವಾಸನೆ

ಐತಿಹಾಸಿಕ ದೇವಾಲಯದ ಪಕ್ಕದಲ್ಲೇ ಕಸದ ರಾಶಿ, ಮೂಗು ಮುಚ್ಚಿಕೊಂಡು ಓಡಾಡುವ ಜನರು
Last Updated 8 ಫೆಬ್ರುವರಿ 2017, 9:02 IST
ಅಕ್ಷರ ಗಾತ್ರ

ಡಂಬಳ: ಗ್ರಾಮದ ಹೊರವಲಯದಲ್ಲಿ ರಾಶಿರಾಶಿಯಾಗಿ ಬಿದ್ದಿರುವ ಕೋಳಿ ಅಂಗಡಿ ತಾಜ್ಯ ಸಹಿಸಲಾಗದ ದುರ್ವಾ­ಸನೆ ಬೀರುತ್ತಿದೆ. ಇದರಿಂದಾಗಿ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾಮದ ವಿವಿಧ ಓಣಿಯ ಸ್ವಚ್ಛತೆ ಕಾಪಾಡಲು ಯತ್ನಿಸುವ ಪಂಚಾಯ್ತಿ ಅಧಿಕಾರಿಗಳಿಗೆ ಗ್ರಾಮದ ಹೊರವಲಯ ಕಾಣಿಸುತ್ತಿಲ್ಲ. ಹೀಗಾಗಿ ಹೊರವಲಯ­ದಲ್ಲಿ ಸಂಚರಿಸುವವರಿಗೆ ದುರ್ವಾಸನೆ ಸಹಿಸಲು ಅಸಾಧ್ಯವಾಗಿದೆ.

ಗ್ರಾಮದ ಹೊರವಲಯದಲ್ಲಿ  ಐತಿ­ಹಾಸಿಕ ಹಿನ್ನೆಲೆಯುಳ್ಳ ದೊಡ್ಡಬಸವೇಶ್ವರ ದೇವಸ್ಥಾನ, ಸೋಮೆಶ್ವರ ದೇವಸ್ಥಾನ ಸೇರಿ ಹಲವು ಪ್ರೇಕ್ಷಣೀಯ ಸ್ಥಳಗಳಿವೆ. ನಿತ್ಯ ವಿವಿಧ ಭಾಗದಿಂದ ಪ್ರವಾಸಿಗರು ಬರುತ್ತಾರೆ. ಆದರೆ ಈ ಕೋಳಿ ತ್ಯಾಜ್ಯ­ದಿಂದಾಗಿ ಪ್ರವಾಸಿಗರಲ್ಲಿ ಅಸಹ್ಯ ಸೃಷ್ಟಿ­ಯಾಗಿದೆ. ಅಲ್ಲದೆ ವಾಯುವಿಹಾರಕ್ಕೆ ಹೋಗು­ವವರಿಗೆ, ವಾಹನ ಸವಾರರಿಗೆ, ರೈತರಿಗೆ, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಈ ತ್ಯಾಜ್ಯದಿಂದಾಗಿ ಕಿರಿಕಿರಿ ಉಂಟಾಗಿದೆ.

ಈ ಮಾರ್ಗದಲ್ಲಿ ಬಸ್‌ ಮೂಲಕ ಪ್ರಯಾಣಿಸುವವರಿಗೂ ಕೆಟ್ಟ­ವಾಸನೆ ಬೀರುತ್ತಿದೆ. ತ್ಯಾಜ್ಯ ಬಿದ್ದಿರುವ ಸ್ಥಳ ಬಂದೊಡನೆ ಬಸ್‌ ಪ್ರಯಾಣಿಕರು ಮೂಗು ಮುಚ್ಚಿಕೊಳ್ಳುತ್ತಾರೆ. 

‘ಕೋಳಿ ಅಂಗಡಿಗಳ ತ್ಯಾಜ್ಯ­ದಿಂದಾಗಿ ಜನರಿಗೆ ರೋಗಭೀತಿ ಉಂಟಾ­­ಗಿದೆ. ತಕ್ಷಣ ಪಂಚಾಯ್ತಿ  ಅಧಿ­ಕಾರಿಗಳು  ಕೋಳಿ ತ್ಯಾಜ್ಯ ವಿಲೇವಾರಿ ಮಾಡಲು ಕ್ರಮ ತಗೆದುಕೊಳ್ಳಬೇಕು’ ಎಂದು ಗ್ರಾಮದ ನಿಂಗಬಸಪ್ಪ ಪ್ಯಾಟಿ ಒತ್ತಾಯಿಸಿದರು.

‘ಈ ದಾರಿಯಲ್ಲಿ ಅತ್ಯಂತ ಖುಷಿ­ಯಿಂದ ವಾಯು ವಿಹಾ­ರಕ್ಕೆ ತೆರಳುತ್ತಿ­ದ್ದೆವು. ಆದರೆ ಈಗ ದುರ್ವಾಸನೆಯಿಂದ ವಿಹಾರಕ್ಕೆ ಹೋಗ­ದಂತಾಗಿದೆ.  ಇಲ್ಲಿ ಕೋಳಿ ಅಂಗಡಿಗಳ ತ್ಯಾಜ್ಯ ಸುರಿಯು­ವುದನ್ನು ಮುಂದುವರಿ­ಸಿದರೆ ಸಾಂಕ್ರಾ­ಮಿಕ ರೋಗ ಹರಡುವ ಸಾಧ್ಯತೆ ಇದೆ. 

ಅಲ್ಲದೆ ತ್ಯಾಜ್ಯ ವಿಲೇವಾರಿ ಮಾಡದ ಕಾರಣ ನೊಣ, ಸೊಳ್ಳೆಗಳು ಉತ್ಪತ್ತಿ­ಯಾಗುತ್ತಿವೆ. ಇದರಿಂದ ಸಾಂಕ್ರಾ­ಮಿಕ ರೋಗ  ಹರಡುತ್ತವೆ’  ಗ್ರಾಮದ ವಿರೂಪಾಕ್ಷಪ್ಪ ಲಕ್ಕುಂಡಿ  ಹಾಗೂ ಸಿದ್ದು ಹಡಪದ ಒತ್ತಾಯಿಸಿದರು.
-ಲಕ್ಷ್ಮಣ ದೊಡ್ಡಮನಿ

*
ಕೋಳಿ ಅಂಗಡಿ ಮಾಲೀಕರಿಗೆ ಹಲವು ಸಲ ನೋಟಿಸ್‌ ನೀಡಿ­ದ್ದೇವೆ.  ಆದರೂ ಅವರು ಎಚ್ಚೆತ್ತು­ಕೊಂಡಿಲ್ಲ. ಸ್ವಚ್ಛತೆ ದೃಷ್ಟಿ­ಯಿಂದ ಕೂಡಲೇ  ಕ್ರಮ ಕೈಗೊಳ್ಳಲಾಗುವುದು.
-ಎಸ್.ಕೆ ಕವಡೆಲೆ,
ಪಿಡಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT