ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉದ್ಯೋಗ ಖಾತ್ರಿ: ಗ್ರಾಮಾಭಿವೃದ್ಧಿಗೆ ಪೂರಕ’

ಕಲ್ಲಿಗನೂರ ಗ್ರಾಮದಲ್ಲಿ ಯೋಜನೆಯ ಮಾಹಿತಿ, ಸಾಮೂಹಿಕ ಅರ್ಜಿ ಸಲ್ಲಿಕೆ ಕಾರ್ಯಕ್ಕೆ ಚಾಲನೆ
Last Updated 8 ಫೆಬ್ರುವರಿ 2017, 9:04 IST
ಅಕ್ಷರ ಗಾತ್ರ

ಗಜೇಂದ್ರಗಡ: ಸಮೀಪದ ಲಕ್ಕಲಕಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಲ್ಲಿಗ­ನೂರ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಮಾಹಿತಿ ನೀಡಿ, ಕೂಲಿಗಾಗಿ ಸಾಮೂಹಿಕ ಅರ್ಜಿ  ಸಲ್ಲಿಸುವ ಕಾರ್ಯಕ್ರಮ ಸೋಮವಾರ ನಡೆಯಿತು.

ರೋಣ ತಾಲ್ಲೂಕು ಪಂಚಾಯ್ತಿ ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿ­ಕಾರರ ಸಂಘ ತಾಲ್ಲೂಕು ಸಮಿತಿ ಆಶ್ರಯ­ದಲ್ಲಿ ಕಾರ್ಯಕ್ರಮ ಆಯೋಜಿಸ­ಲಾಗಿತ್ತು. ಈ ಸಂದರ್ಭದಲ್ಲಿ ಕೃಷಿಕೂಲಿ­ಕಾರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಾಲು ರಾಠೋಡ ಮಾತನಾಡಿ ’ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಖಾತ್ರಿ ಯೋಜನೆ ಮಹತ್ವದ ಯೋಜನೆ­ಯಾಗಿದೆ. ಇದು ಗ್ರಾಮೀಣ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ­ವಾಗಿದೆ. 

ಇದರಿಂದಾಗಿ ಹಳ್ಳಿಗಳ ರಸ್ತೆ, ಕೆರೆ, ಶೌಚಾಲಯ, ಬದುವು ನಿರ್ಮಾಣ, ಸಸಿ ಬೆಳೆಸುವಿಕೆ, ಆಟದ ಮೈದಾನ, ಉದ್ಯಾನ, ಸಮುದಾಯ ಭವನ, ಒಕ್ಕ­ಲು­ತನದ ಕಣ ನಿರ್ಮಾಣದಂತಹ  ಒಟ್ಟು 21 ಅಂಶಗಳ ಕಾರ್ಯಕ್ರಮಗಳನ್ನು ಸರ್ಕಾರವು ಅನುಷ್ಠಾನಗೊಳಿಸಲು ಗ್ರಾಮ ಪಂಚಾಯ್ತಿಗಳಿಗೆ ಅಧಿಕಾರ ನೀಡಲಾಗಿದೆ ಎಂದರು.

ಯೋಜನೆಯ ಲಾಭ ಗ್ರಾಮೀಣ ಜನರಿಗೆ ತಲುಪದೇ ಅವರು ಗುಳೇ ಹೋಗುವದು ಇಂದಿಗೂ ತಪ್ಪಿಲ್ಲ. ಈ ಯೋಜನೆಯನ್ನು ಸಮರ್ಪಕವಾಗಿ ಬಳಸಿ­ಕೊಳ್ಳಲು ಗ್ರಾಮೀಣರು  ಮುಂದಾ­ಗ­ಬೇಕು. ಒಂದು ಕುಟುಂಬಕ್ಕೆ 150 ದಿನ ಕೆಲಸ ನೀಡಿ ದಿನಕ್ಕೆ ₹ 224 ಕೂಲಿ ಪಡೆಯಬಹುದು. ಕಾರಣ ಗ್ರಾಮೀ­ಣರು ಸಂಘಟನೆಯ ಮೂಲಕ ಸಂಘಟಿತರಾಗಬೇಕಾಗಿದೆ ಎಂದು ಹೇಳಿದರು.

ಪುರಸಭೆ ಸದಸ್ಯ ಎಂ.ಎಸ್. ಹಡಪದ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ಬಂದು 10 ವರ್ಷ ಕಳೆದರೂ ಕೃಷಿಕೂಲಿಕಾರರಿಗೆ ಉದ್ಯೋಗ ಮಾಹಿತಿ ನೀಡುವಲ್ಲಿ ಹಾಗೂ ಕೆಲಸ ನಿರ್ವಹಿಸುವಲ್ಲಿ ಗ್ರಾಮ ಪಂಚಾಯ್ತಿಗಳು ಸಂಪೂರ್ಣ ವಿಫಲ­ವಾಗಿವೆ.

ಅಧಿಕಾರ ವಿಕೇಂದ್ರೀ­ಕರಣ­ವನ್ನು ವ್ಯವಸ್ಥಿತವಾಗಿ ಜಾರಿಗೆ ತಂದ ಕೀರ್ತಿ ಕರ್ನಾಟಕ ಸರ್ಕಾರಕ್ಕೆ ಸಲ್ಲುತ್ತದೆ. ಗ್ರಾಮೀಣ ಅಭಿವೃದ್ಧಿಗಾಗಿ ಎಲ್ಲರ ಸಹ­ಕಾರ, ಪಾಲ್ಗೊಳ್ಳುವಿಕೆ ಅತ್ಯಗತ್ಯ, ಗಾಂಧೀಜಿ ಅವರ ಕನಸನ್ನು ನನಸಾ­ಗಿಸಲು ಪಣತೊಟ್ಟು  ಕೈಜೋಡಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ರೈತ ಮುಖಂಡ ಕೂಡ್ಲೆಪ್ಪ ಗುಡಿಮನಿ, ಪೀರು ರಾಠೋಡ ಮಾತನಾಡಿದರು.  ಸಭೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರು, ಪಿಡಿಓ ಹಾಗೂ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT