ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಭ್ಯ ವರ್ತನೆ; ಇಬ್ಬರು ಕಾವಿಧಾರಿಗಳಿಗೆ ಥಳಿತ

ಮಾಟ–ಮಂತ್ರ ನೆಪದಲ್ಲಿ ಮಹಿಳೆಗೆ ಕಿರುಕುಳ: ಹಳ್ಳೂರು ಗ್ರಾಮದಲ್ಲಿ ನಡೆದ ಘಟನೆ
Last Updated 8 ಫೆಬ್ರುವರಿ 2017, 9:26 IST
ಅಕ್ಷರ ಗಾತ್ರ

ಬಾಗಲಕೋಟೆ: ಭಿಕ್ಷೆ ಬೇಡುವ ನೆಪದಲ್ಲಿ ಬಂದು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಇಬ್ಬರು ಕಾವಿಧಾರಿಗಳನ್ನು ಗ್ರಾಮಸ್ಥರೇ ಹಿಡಿದು ಚಪ್ಪಲಿಯಲ್ಲಿ ಹೊಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲ್ಲೂಕಿನ ಹಳ್ಳೂರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ಮುರಂಡಿ ಸಿದ್ಧರಹಟ್ಟಿಯ ನಿವಾಸಿಗಳಾದ ಡಿ.ರವಿ (27) ಹಾಗೂ ವಿ.ಶ್ರೀನಿವಾಸ (39) ಗ್ರಾಮಸ್ಥರಿಂದ ಒದೆ ತಿಂದವರು. ಆದರೆ ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ರಾತ್ರಿಯವರೆಗೂ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ.

ಪ್ರಕರಣದ ವಿವರ: ಇಬ್ಬರೂ ಕಾವಿಧಾರಿಗಳು ಬೆಳಿಗ್ಗೆ ಗ್ರಾಮದಲ್ಲಿ ಭಿಕ್ಷೆ ಬೇಡುತ್ತಾ ಅಡ್ಡಾಡಿದ್ದಾರೆ. ಅಲ್ಲಿನ ಮನೆಯೊಂದರ ಗೋಡೆಯಲ್ಲಿ ತೂಗುಹಾಕಿದ್ದ ದೇವರ ಭಾವಚಿತ್ರ ನೋಡಿ ನಾವೂ ಅದೇ ದೇವರ ಭಕ್ತರು ಎಂದು ಮನೆಯಲ್ಲಿದ್ದ ಮಹಿಳೆ ಎದುರು ಪರಿಚಯ ಮಾಡಿಕೊಂಡಿದ್ದಾರೆ.

ಮನೆಯಲ್ಲಿ ಆಕೆ ಒಬ್ಬರೇ ಇರುವುದನ್ನು ಖಚಿತಪಡಿಸಿಕೊಂಡ ಆರೋಪಿಗಳು ‘ನಿಮ್ಮ ಕುಟುಂಬಕ್ಕೆ ಯಾರೋ ಮಾಟ ಮಾಡಿಸಿದ್ದಾರೆ. ಬಹಳಷ್ಟು ತೊಂದರೆಯಾಗಲಿದೆ. ಅದನ್ನು ನಿವಾರಿಸಲು ಬೇರೆ ಬೇರೆ ಪೂಜೆ ಮಾಡಿಸಬೇಕಿದೆ ಎಂದು ಹೇಳಿ ನಂಬಿಸಿ ₹ 1500 ಪಡೆದಿದ್ದಾರೆ. ನಂತರ ಮತ್ತೆ ₹ 500ಕ್ಕೆ ಬೇಡಿಕೆ ಇಟ್ಟು ಹಣ ನೀಡಲೇಬೇಕು. ಇಷ್ಟು ಹಣದಲ್ಲಿ ಪೂಜೆ ಪೂರ್ಣಗೊಳ್ಳುವುದಿಲ್ಲ’ ಎಂದು ಹೇಳಿದಾಗ ಆಕೆಗೆ ಅನುಮಾನ ಬಂದಿದೆ.

ಆಗ ಆಕೆ ಈಗಾಗಲೇ ಕೊಟ್ಟಿರುವ ಹಣ ಮರಳಿಸುವಂತೆ ಒತ್ತಾಯಿಸಿದ್ದಾರೆ. ಅದಕ್ಕೆ ಕಾವಿಧಾರಿಗಳು ಒಪ್ಪಿಲ್ಲ. ಆಗ ಮಾತಿಗೆ ಮಾತು ಬೆಳೆದು ಮಹಿಳೆಯನ್ನು ಹಿಡಿದು ಎಳೆದಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪರಿಚಿತರ ವರ್ತನೆಯಿಂದ ಭಯಗೊಂಡ ಆಕೆ ಹೊರಗೆ ಓಡಿಬಂದು ಕೂಗಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಗ್ರಾಮಸ್ಥರು ಇಬ್ಬರನ್ನೂ ಹಿಡಿದು ಹೊಡೆದು ನಂತರ ಹತ್ತಿರದ ಬೇವೂರು ಹೊರಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.

ಸಾವಳಗಿ:  ಸರಣಿ ಕಳ್ಳತನ
ಸಾವಳಗಿ:
ಗ್ರಾಮದಲ್ಲಿ ಭಾನುವಾರ ರಾತ್ರಿ ಅಂಗಡಿಗಳ ಬೀಗ ಮುರಿದು ಹಣ ಹಾಗೂ ಮೊಬೈಲ್ ಕಳ್ಳತನ ಮಾಡಿ ಪರಾರಿಯಾದ ಘಟನೆ ನಡೆದಿದೆ.
ಗ್ರಾಮದ ಸದಾಶಿವ ಮಾರುತಿ ಕಲಾಲ ಅವರ ಚಂದ್ರಿಕಾ ಪ್ಯಾಲೇಸ್‌ನಲ್ಲಿ ₹ 95,000 ಮತ್ತು ಶಶಿಕಾಂತ  ಜೋರಾ ಪುರ ಅವರ ಮೊಬೈಲ್‌ ಅಂಗಡಿಯಿಂದ ಬೆಲೆ ಬಾಳುವ ಮೊಬೈಲ್‌ ಹಾಗೂ ₹ 3000, ಅನಿಲ ಬಸವರಾಜ ಸಿಂಧೂರ ಅವರ ಶಿವಲಿಂಗೇಶ್ವರ ಟ್ರೇಡರ್ಸ್‌ನಲ್ಲಿ ₹ 60,000, ಜಂಬಗಿ ರಸ್ತೆಯ ಸದಾನಂದ ಬಾರ್‌ನಲ್ಲಿ ₹ 79960 ಕಳ್ಳತನವಾಗಿದೆ.  ಸಾವಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೈಕಲ್ ಸವಾರ ಸಾವು
ಸಾವಳಗಿ ಮೀಪದ ಕವಟಗಿ ಕ್ರಾಸ್‌ ನಲ್ಲಿ ಸೈಕಲ್‌ಗೆ  ಡಿಕ್ಕಿಹೊಡೆದ ಪರಿಣಾಮ ಸೈಕಲ್ ಸವಾರ ಸಾವನಪ್ಪಿದ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಮೃತರನ್ನು ಮುತ್ತಪ್ಪ ರೇವಣ್ಣೆಪ್ಪ ಜಂಗಮಶೆಟ್ಟಿ (65) ಎಂದು ಗುರುತಿಸಲಾಗಿದೆ. 

ಸೈಕಲ್ ಮೇಲೆ ಹೊರಟ ಸಂಧರ್ಭದಲ್ಲಿ ಹಿಂಬದಿಯಿಂದ ಮ್ಯಾಕ್ಸಿ ಕ್ಯಾಬ್‌ವೊಂದು ಬಲವಾಗಿ ಡಿಕ್ಕಿಹೊಡೆದ ಪರಿಣಾಮ ಸೈಕಲ್ ಮೇಲಿದ್ದ ಇಬ್ಬರು ಗಾಯಗೊಂಡಿದ್ದರು. ವಿಜಯಪುರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗಿದೆ ಮುತ್ತಪ್ಪ ಮೃತಪಟ್ಟಿ ದ್ದಾರೆ. ಗಾಯಗೊಂಡ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಮುತ್ತಪ್ಪ ಅವರ ಪುತ್ರ ಮಲ್ಲಪ್ಪ  ಸಾವಳಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅಪಘಾತ: ಯುವಕ ಸಾವು
ಹುನಗುಂದ:
ಇಲ್ಲಿನ ಅಡತಿ ವ್ಯಾಪಾರಿ ಶರಣಪ್ಪ ಅವರ ಮಗ ಮುತ್ತಪ್ಪ ಕುಂಟೋಜಿ (21) ಹೊಲಕ್ಕೆ ಹೋದಾಗ ಟ್ರ್ಯಾಕ್ಟರ್ ಚಾಲನೆಯ ಸಂದರ್ಭದಲ್ಲಿ ಆಯತಪ್ಪಿ ಕಾಲುವೆಗೆ ಬಿದ್ದು ಸಾವನ್ನ ಪ್ಪಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖ ಲಾಗಿದ್ದು ತನಿಖೆ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT