ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಳವಳಿ ಇಲ್ಲದ ಪ್ರಜಾಪ್ರಭುತ್ವ ದುರಂತ’

Last Updated 8 ಫೆಬ್ರುವರಿ 2017, 9:34 IST
ಅಕ್ಷರ ಗಾತ್ರ

ಹಾವೇರಿ: ‘ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದರೂ ಸಹ ಬಂಡವಾಳಶಾಹಿಗಳ ಆಡಳಿತ ನಡೆಯುತ್ತಿದೆ. ಇದರಿಂದ ದಲಿತರ ಹಾಗೂ ಶೋಷಿತ ವರ್ಗದ ಮೇಲಿನ ದೌರ್ಜನ್ಯ ನಿರಂತರ ಮುಂದುವರಿಯುತ್ತಲೇ ಇದೆ’ ಎಂದು ಸಾಹಿತಿ ಬಿ.ಶ್ರೀನಿವಾಸ್ ನುಡಿದರು. ನಗರದ ನೌಕರರ ಭವನದಲ್ಲಿ ಆಯೋಜಿಸಿದ್ದ ‘ಎಸ್‌ಎಫ್‌ಐ 7ನೇ ಜಿಲ್ಲಾ ಸಮ್ಮೇಳನದ ಸಮಾರೋಪ ಸಮಾರಂಭ’ದಲ್ಲಿ ಮಾತನಾಡಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚಳವಳಿಗಳು ಇಲ್ಲದೆ ಹೋದರೆ ಅದು  ದೊಡ್ಡ ದುರಂತವೇ ಸರಿ. ಪ್ರಜಾ ಪ್ರಭುತ್ವಕ್ಕೆ ಬೇಕಿರುವುದು ಅಂತಃಕರಣವುಳ್ಳ ಸರ್ಕಾರವೇ ಹೊರತು, ಸರ್ವಾಧಿಕಾರಿ ಧೋರಣೆ ಹೊಂದಿರುವುದಲ್ಲ. ಬಡವರು- ಮತ್ತು ಶ್ರೀಮಂತರ ನಡುವಿನ ಅಂತರ ಕಡಿಮೆಯಾಗಬೇಕು’ ಎಂದರು.

‘ನಾವು ದೇವಾಲಯಕ್ಕೆ ಹೋದಾಗ ಚಪ್ಪಲಿಯನ್ನು ಹೊರಗೆ ಬಿಟ್ಟು ಹೋಗ ದೇ, ನಾನೇ ಹೊರಗೆ ನಿಲ್ಲುತ್ತೇನೆ ಎನ್ನುವ  ಮೂಲಕ 12ನೇ ಶತಮಾನದಲ್ಲಿ ಶಿವ ಶರಣರು ಜಾತಿ, ದೌರ್ಜನ್ಯವನ್ನು ನಿವಾರಣೆಗೆ ಯತ್ನಿಸಿದ್ದರು’ ಎಂದರು.

ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ಬಸವರಾಜ ಪೂಜಾರ, ಸಾಹಿತಿ ಲಿಂಗ ರಾಜ ಸೊಟ್ಟೆಪ್ಪನವರ, ಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷೆ ರೇಣುಕಾ ಕಹಾರ  ಸೇರಿದಂತೆ ಮತ್ತಿತರರಿದ್ದರು.

*
ಕೇಸರಿ ಶಾಲ್, ಬುರ್ಖಾದಂತಹ ಪ್ರಕರಣಗಳು ನಿತ್ಯವೂ ವಿದ್ಯಾರ್ಥಿ ಸಮುದಾಯದ ಒಗ್ಗಟ್ಟನ್ನು ಒಡೆಯುತ್ತಿವೆ.
-ಬಿ.ಶ್ರೀನಿವಾಸ್,
ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT