ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿದ್ದವರನ್ನು ಎತ್ತುವುದು ನಿಜವಾದ ಧರ್ಮ’

ತಾಲ್ಲೂಕಿನ ಕೊಣ್ಣೂರ ಗ್ರಾಮದಲ್ಲಿ ಡಾ.ಪ್ರಭುದೇವರು ಶ್ರೀಗಳ ಸಂಭ್ರಮದ ಗುರುಪಟ್ಟಾಧಿಕಾರ ಮಹೋತ್ಸವ
Last Updated 8 ಫೆಬ್ರುವರಿ 2017, 9:40 IST
ಅಕ್ಷರ ಗಾತ್ರ

ಜಮಖಂಡಿ: ಬೀಳುವವರನ್ನು, ಬೀಳು ತ್ತಿರುವವರನ್ನು ಹಾಗೂ ಬಿದ್ದವರನ್ನು ಎತ್ತುವುದು ನಿಜವಾದ ಧರ್ಮ. ಧರ್ಮ ಕೈಂಕರ್ಯ, ಸಮಾಜ ಸೇವೆ, ದೀನ ದಲಿತರ ಉದ್ಧಾರ ಮಾಡುವುದೇ ಸ್ವಾಮೀಜಿಗಳು ಮಾಡಬೇಕಾದ ಕೆಲಸ ಎಂದು ಗಿರಿಸಾಗರ ಕಲ್ಯಾಣ ಹಿರೇ ಮಠದ ರುದ್ರಮುನಿ ಶ್ರೀಗಳು ಹೇಳಿದರು.

ತಾಲ್ಲೂಕಿನ ಕೊಣ್ಣೂರ ಗ್ರಾಮದ ಹೊರಗಿನ ಕಲ್ಯಾಣ ಮಠದ ಡಾ.ಪ್ರಭು ದೇವರು ಶ್ರೀಗಳ ಗುರುಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಸೋಮವಾರ ನಡೆದ ಶ್ರೀಗುರು ಪಟ್ಟಾಭಿಷೇಕ ಹಾಗೂ ಧರ್ಮಸಭೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಕಾವಿ ಧರಿಸುವುದು, ಸ್ವಾಮಿ ಜೀವನ ನಡೆಸುವುದು ಸುಲಭವಲ್ಲ. ಸ್ವಾಮಿತ್ತ ಮೆತ್ತನೆಯ ಹಾಸಿಗೆಯಲ್ಲ. ಅದೊಂದು ಮುಳ್ಳಿನ ಹಾಸಿಗೆ. ಸ್ವಾಮೀಜಿ ಆದವರು ಎಲ್ಲ ಅನಿಷ್ಟ, ಅನಾಚಾರ, ಅಧರ್ಮ ವನ್ನು ದೂರ ಮಾಡುವ ಶಕ್ತಿಯನ್ನು ಸಂಪಾದಿಸಬೇಕು. ಎಲ್ಲ ಸಂಸ್ಕಾರ ಪಡೆದುಕೊಂಡು ಸಮಾಜ ಸೇವಾ ದಿಕ್ಷೆ ಪಡೆದಿರಬೇಕು. ಬಡವರ ಕಲ್ಯಾಣಕ್ಕಾಗಿ ದುಡಿಯುವ ಮನಸ್ಸು ಬೆಳೆಸಿಕೊಳ್ಳಬೇಕು ಎಂದರು.

ಕೊಣ್ಣೂರ ಹೊರಗಿನ ಕಲ್ಯಾಣ ಮಠದ ಡಾ.ವಿಶ್ವಪ್ರಭುದೇವ ಶಿವಾ ಚಾರ್ಯ ಶ್ರೀಗಳು (ಡಾ.ಪ್ರಭುದೇವರು ಶ್ರೀಗಳು) ಮಾತನಾಡಿ, ಕಟ್ಟಿಗೆಯ ಪಲ್ಲಕ್ಕಿ ಗಿಂತ ಸದ್ಭಕ್ತರ ಹೃದಯ ಪಲ್ಲಕ್ಕಿಯಲ್ಲಿ ಇರುವುದಾಗಿ, ನಾಡಿನ ಎಲ್ಲ ತಾಯಂದಿರ ಮಗನಾಗಿ ಇರುವುದಾಗಿ ಹಾಗೂ ಭಕ್ತರ ಪ್ರೀತಿ, ವಿಶ್ವಾಸ ಹಾಗೂ ಗೌರವ ಸಂಪಾದಿಸುವುದಾಗಿ ಹೇಳಿದರು.

ಜಮಖಂಡಿಯ ಮುತ್ತಿನಕಂತಿ ಮಠದ ಶಿವಲಿಂಗ ಶ್ರೀಗಳು, ಬನಹಟ್ಟಿ ಹಿರೇಮಠದ ಶರಣಬಸವ ಶ್ರೀಗಳು, ಜಮಖಂಡಿಯ ಕಲ್ಯಾಣ ಮಠದ ಗೌರಿಶಂಕರ ಶ್ರೀಗಳು, ಸಿಂದಗಿ ಸಾರಂಗ ಮಠದ ಪ್ರಭು ಸಾರಂಗದೇವ ಶ್ರೀಗಳು, ಮುತ್ತತ್ತಿ ಹಿರೇಮಠದ ಗುರುಲಿಂಗ ಶ್ರೀಗಳು, ಲೋಕಾಪುರದ ಮಹಾಂತ ದೇವರು, ಆಲಮಟ್ಟಿಯ ಡಾ.ರುದ್ರ ಮುನಿ ದೇವರು, ಚಟ್ನಳ್ಳಿಯ ವಿಶ್ವಾರಾಧ್ಯ ದೇವರು, ತೇರದಾಳದ ಗಂಗಾಧರ ದೇವರು, ಪಾಶ್ಚಾಪುರದ ವಿಶ್ವಾರಾಧ್ಯ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಶ್ರೀಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಜಗದೀಶ ಗುಡ ಗುಂಟಿ, ಆಶಾತಾಯಿ ಗುಡಗುಂಡಿ, ಪುಷ್ಪಾತಾಯಿ ಗುಡಗುಂಟಿ, ಗೌರಿ ಗುಡ ಗುಂಟಿ, ಧರ್ಮಲಿಂಗಯ್ಯ ಗುಡಗುಂಟಿ, ಬಸವರಾಜ ಬಾಳಿಕಾಯಿ, ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ವಿ.ಎನ್‌. ಶೇಷಗಿರಿ ರಾವ್‌ ಮತ್ತಿತರರು ಇದ್ದರು.

ಶಹಾಪುರ ಹಿರೇಮಠದ ಸೂಗೂ ರೇಶ್ವರ ಶ್ರೀಗಳು, ಆನಂದ ಶಿರಬೂರ ನಿರೂಪಿಸಿದರು. ಮೌನೇಶ ಕಂಬಾರ ವಂದಿಸಿದರು. ಇದಕ್ಕೂ ಮೊದಲು ನಾಣ್ಯ ಗಳಿಂದ ಡಾ.ವಿಶ್ವಪ್ರಭುದೇವ ಶಿವಾ ಚಾರ್ಯ ಶ್ರೀಗಳ ತುಲಾಭಾರ ಜರುಗಿತು. ಸಮಾ ರಂಭದ ಬಳಿಕ ಶ್ರೀಗಳ ಅಡ್ಡ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು.

ಡೊಳ್ಳು ಮೇಳ, ಜಾಂಜ್‌ ಮೇಳ, ಕರಡಿಮೇಳ ಸೇರಿದಂತೆ ವಿವಿಧ ವಾದ್ಯಮೇಳದೊಂದಿಗೆ ಕುಂಭ ಹೊತ್ತ ಮಹಿಳೆಯರು, ಆರತಿ ಹಿಡಿದ ಸುಮಂಗ ಲೆಯರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಧ್ವಜಗಳು, ಪತಾಕೆ ಗಳು ಉತ್ಸವದ ಮಾರ್ಗದುದ್ದಕ್ಕೂ ಹಾರಾಡುತ್ತಿದ್ದವು. ಆನೆ ಹಾಗೂ ಕೊಂಬಿನ ಸಿಂಗ್‌ ಉತ್ಸವಕ್ಕೆ ಮೆರಗು ನೀಡಿದ್ದವು. ಸಾವಿರಾರು ಮಂದಿ ಭಕ್ತರು ಉತ್ಸವದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT