ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರೌಸಿಂಗ್‌ ವೇಗ ಹೆಚ್ಚಿಸಲು ಹೀಗೆ ಮಾಡಿ...

Last Updated 13 ಫೆಬ್ರುವರಿ 2017, 9:37 IST
ಅಕ್ಷರ ಗಾತ್ರ

4ಜಿ ಇಂಟರ್ನೆಟ್‌ ಕನೆಕ್ಷನ್‌ ಇದ್ದರೂ ಸ್ಮಾರ್ಟ್‌ಫೋನ್‌ನ ಬ್ರೌಸಿಂಗ್‌ ವೇಗ 2ಜಿಗಿಂತ ಕಡಿಮೆ ಇರುತ್ತದೆ ಎಂಬುದು ಬಹುತೇಕರ ದೂರು. ಎಷ್ಟೇ ದುಬಾರಿ ಸ್ಮಾರ್ಟ್‌ಫೋನ್‌ ನಿಮ್ಮಲ್ಲಿದ್ದರೂ ಇಂಟರ್ನೆಟ್‌ನ ವೇಗವು ಸ್ಥಳ ಮತ್ತು ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ ಎಂಬುದೂ ಈಗ ಸತ್ಯ!

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಬ್ರೌಸಿಂಗ್‌ ವೇಗ ಹೆಚ್ಚಿಸಲು ಕೆಲವು ಸಲಹೆಗಳು ಇಲ್ಲಿವೆ. ಸ್ಮಾರ್ಟ್‌ಫೋನ್‌ ಬಳಸುವ ನಿಮ್ಮ ಅಭ್ಯಾಸ ಹಾಗೂ ಬ್ರೌಸಿಂಗ್‌ ಮಾಡುವ ಮಾರ್ಗದಲ್ಲಿ ಒಂದಷ್ಟು ಶಿಸ್ತು ರೂಢಿಸಿಕೊಂಡರೆ ನಿಮ್ಮ ಇಂಟರ್ನೆಟ್‌ ವೇಗ ಹೆಚ್ಚಿಸಬಹುದು.

ಬ್ರೌಸಿಂಗ್‌ ವೇಗವು ನೀವು ಯಾವ ಬ್ರೌಸರ್‌ ಬಳಸುತ್ತಿದ್ದೀರಿ ಎಂಬುದನ್ನೂ ಅವಲಂಬಿಸಿರುತ್ತದೆ. ಈಗ ಬಹುತೇಕರು ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್‌ ಕ್ರೋಮ್‌ ಬ್ರೌಸರ್‌ ಬಳಸುವುದು ಸಾಮಾನ್ಯ. ಗೂಗಲ್‌ ಕ್ರೋಮ್‌ ಉತ್ತಮ ಬ್ರೌಸರ್‌ ಆದರೂ ಅದರ ಮೂಲಕ ಬ್ರೌಸ್‌ ಮಾಡುವಾಗ ಬ್ರೌಸಿಂಗ್‌ ವೇಗ ತಗ್ಗುವುದೂ ಇದೆ. ಇದಕ್ಕೆ ಕಾರಣ ನೀವು ಬ್ರೌಸಿಂಗ್‌ ವೇಳೆ ಬಳಸುವ ಪಾಸ್‌ವರ್ಡ್‌, ಬುಕ್‌ಮಾರ್ಕ್‌ ಹಾಗೂ ಹಿಸ್ಟರಿಯನ್ನು ಕ್ರೋಮ್‌ ನೆನಪಿಟ್ಟುಕೊಳ್ಳುವುದು. ಕ್ರೋಮ್‌ನ ಈ ಸ್ಮರಣಗುಣದ ಕಾರಣದಿಂದ ನೀವು ಹಿಸ್ಟರಿ ಕ್ಲಿಯರ್‌ ಮಾಡದೆ ಬ್ರೌಸಿಂಗ್‌ ಮಾಡಿದರೆ ವೇಗ ತಗ್ಗುತ್ತದೆ. ಹೀಗಾಗಿ ಪ್ರತಿ ಬಾರಿ ಬ್ರೌಸ್‌ ಮಾಡುವ ಮುನ್ನ ಬ್ರೌಸಿಂಗ್ ಡೇಟಾ ಕ್ಲಿಯರ್ ಮಾಡಿ.

ನಿಮ್ಮ ಸ್ಮಾರ್ಟ್‌ಫೋನ್‌ನ ಇತರೆ ಆ್ಯಪ್‌ಗಳ ಕ್ಯಾಚ್‌ ಕ್ಲಿಯರ್‌ ಮಾಡದೇ ಇರುವುದು ಕೂಡ ಬ್ರೌಸಿಂಗ್‌ ವೇಗ ತಗ್ಗಲು ಕಾರಣವಾಗಬಹುದು. ಹೀಗಾಗಿ ಆ್ಯಪ್‌ ಕ್ಯಾಚ್‌ ಕ್ಲಿಯರ್‌ ಮಾಡಿ. ಇದಕ್ಕಾಗಿ ನಿಮ್ಮ ಮೊಬೈಲ್‌ನ ಸೆಟ್ಟಿಂಗ್ಸ್‌ಗೆ ಹೋಗಿ ಆ್ಯಪ್‌ ಮೇಲೆ ಕ್ಲಿಕ್‌ ಮಾಡಿ. ಬಳಿಕ ನೀವು ಯಾವ ಆ್ಯಪ್‌ನ ಕ್ಯಾಚ್‌ ಕ್ಲಿಯರ್‌ ಮಾಡಬೇಕೋ ಅದರ ಮೇಲೆ ಕ್ಲಿಕ್‌ ಮಾಡಿ. ನಂತರ ಸ್ಟೋರೇಜ್‌ ಮೇಲ್ ಕ್ಲಿಕ್ಕಿಸಿ. ಇಲ್ಲಿ ಕಾಣುವ ಕ್ಲಿಯರ್‌ ಕ್ಯಾಚ್‌ ಮೇಲೆ ಕ್ಲಿಕ್‌ ಮಾಡಿದರೆ ಆ ಆ್ಯಪ್‌ನ ಕ್ಯಾಚ್‌ ಕ್ಲಿಯರ್‌ ಆಗುತ್ತದೆ. ಇದಲ್ಲದೆ ಫೋನ್‌ನ ಸೆಟ್ಟಿಂಗ್‌ನಲ್ಲಿ ಸ್ಟೋರೇಜ್‌ಗೆ ಹೋಗಿ ಅಲ್ಲಿ ಕ್ಯಾಚ್‌ ಕ್ಲಿಯರ್‌ ಆಯ್ಕೆ ಮಾಡಿದರೆ ನಿಮ್ಮ ಸ್ಮಾರ್ಟ್‌ಫೋನ್‌ನ ಎಲ್ಲಾ ಕ್ಯಾಚ್‌ ಕ್ಲಿಯರ್‌ ಆಗುತ್ತದೆ.

ಇಷ್ಟು ಮಾತ್ರವಲ್ಲದೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಹೆಚ್ಚು ಸ್ಪೇಸ್‌ ತೆಗೆದುಕೊಳ್ಳುವ ಅನಗತ್ಯ ಆ್ಯಪ್‌ಗಳನ್ನು ಅನ್‌ಇನ್‌ಸ್ಟಾಲ್‌ ಮಾಡಿ. ನಿಮ್ಮ ಮೊಬೈಲ್‌ನ ಇನ್‌ಬಿಲ್ಟ್‌ ಸ್ಟೋರೇಜ್‌ ಸಾಮರ್ಥ್ಯ ಕಡಿಮೆ ಇದ್ದರೂ ಅದು ಬ್ರೌಸರ್‌ ಮೇಲೆ ಪ್ರಭಾವ ಬೀರುತ್ತದೆ ಎಂಬುದು ನಿಮಗೆ ತಿಳಿದಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT