ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಕಾಲಕ್ಕೆ ಚುನಾವಣೆ

ವಾಚಕರ ವಾಣಿ
Last Updated 8 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವುದನ್ನು ಪರಿಗಣಿಸುವಂತೆ ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಪಕ್ಷಗಳನ್ನು ಕೋರಿರುವುದು ಸಮಂಜಸವಾಗಿದೆ.
 
ಭಾರತದ ಸ್ವಾತಂತ್ರ್ಯಾನಂತರ ಕೆಲವು ಬಾರಿಯಷ್ಟೇ ಏಕಕಾಲದಲ್ಲಿ ಚುನಾವಣೆಗಳು ನಡೆದಿದ್ದವು. ನಂತರ ಹಲವಾರು ಕಾರಣಗಳಿಂದ ದಾರಿ ಬದಲಾಗಿ, ಪ್ರತಿ ವರ್ಷ 8ರಿಂದ 10 ರಾಜ್ಯಗಳು ವಿಧಾನಸಭೆ ಚುನಾವಣೆ ಎದುರಿಸುವಂತಾಗಿದೆ. 
 
ಬಿಡಿಬಿಡಿಯಾಗಿ ನಡೆಯುತ್ತಿರುವ ಚುನಾವಣೆಗಳಿಂದ ಸಾರ್ವಜನಿಕರ ಹಣ ಪೋಲಾಗುತ್ತಿದೆ. ವಿನಾಕಾರಣ ಮಾನವ ಸಂಪನ್ಮೂಲ ಬಳಕೆಯಾಗುತ್ತಿದೆ. ಇದರಿಂದ ವರ್ಷವಿಡೀ ಜನನಾಯಕರು ಚುನಾವಣಾ ಪ್ರಚಾರದಲ್ಲಿಯೇ ಕಾಲ ಕಳೆಯುವುದರಿಂದ ಕ್ಷೇತ್ರಗಳ ಅಭಿವೃದ್ಧಿಗೂ ಹಿನ್ನಡೆಯಾಗುತ್ತಿದೆ. 
 
ಚುನಾವಣೆ ಪ್ರಚಾರದ ಭರಾಟೆಯಲ್ಲಿ ಹಣ ಕಳೆದುಕೊಂಡ ರಾಜಕಾರಣಿಗಳು ವಾಮಮಾರ್ಗದ ಮೂಲಕ ಹಣ ಗಳಿಸಲು ಯತ್ನಿಸಿ ಭ್ರಷ್ಟಾಚಾರಕ್ಕೆ ನಾಂದಿ ಹಾಡುತ್ತಾರೆ. ಇಂತಹ ವ್ಯವಸ್ಥೆಗೆ ಇತಿಶ್ರೀ ಹಾಡಲು ಬಯಸುವ ಯಾವುದೇ ವ್ಯಕ್ತಿ ಮತ್ತು ರಾಜಕಾರಣಿ ಏಕಕಾಲಕ್ಕೆ ಚುನಾವಣೆ ನಡೆಸುವ ನೀತಿಯನ್ನು ಒಪ್ಪದೇ ಇರುವುದಿಲ್ಲ. ಇದು ಕಾರ್ಯರೂಪಕ್ಕೆ ಬಂದರೆ ದುಂದುವೆಚ್ಚಕ್ಕೆ ಕಡಿವಾಣ ಹಾಕಬಹುದು.
-ರಾಮನಗೌಡ ಸಿ. ಬಿರಾದಾರ
ಶಿರಕನಹಳ್ಳಿ, ಇಂಡಿ ತಾಲ್ಲೂಕು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT